Women Umpires in Ranji Trophy : ರಣಜಿ ಟ್ರೋಫಿಗೆ ಮಹಿಳಾ ಅಂಪೈರ್ಸ್, ಬಿಸಿಸಿಐ ಹೊಸ ಪ್ರಯೋಗ

ಬೆಂಗಳೂರು: ಪುರುಷರಂತೆ ಮಹಿಳಾ ಕ್ರಿಕೆಟರ್’ಗಳಿಗೂ ಸಮಾನ ವೇತನದ ನಿರ್ಧಾರ ಪ್ರಕಟಿಸಿದ್ದ ಬಿಸಿಸಿಐ (Board of Control for Cricket in India – BCCI) , ಈಗ ಮತ್ತೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಮಹಿಳಾ ಅಂಪೈರ್’ಗಳಿಗೆ ಅವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ (Women umpires in Ranji Trophy). ಹೀಗಾಗಿ ಮುಂದಿನ ರಣಜಿ ಟೂರ್ನಿಯ ಕೆಲ ಪಂದ್ಯಗಳಲ್ಲಿ ಬಿಸಿಸಿಐ ಮಾನ್ಯತೆ ಪಡೆದ ಮೂವರು ಮಹಿಳಾ ಅಂಪೈರ್’ಗಳು ಕಾಣಿಸಿಕೊಳ್ಳಲಿದ್ದಾರೆ.

ವೃಂದಾ ರಾಥಿ (Vrinda Rathi), ಜನನಿ ನಾರಾಯಣ್ (Janani Narayanan), ಮತ್ತು ಗಾಯತ್ರಿ ವೇಣುಗೋಪಾಲನ್ (Gayathri Vengopalan) ರಣಜಿ ಟ್ರೋಫಿಯಲ್ಲಿ ಅಂಪೈರಿಂಗ್ ನಡೆಸಲು ಅವಕಾಶ ಪಡೆದಿದ್ದಾರೆ. ಈ ಪೈಕಿ ಜನನಿ ನಾರಾಯಣ್ ಸಾಫ್ಟ್’ವೇರ್ ಇಂಜಿನಿಯರ್ ಆಗಿದ್ದವರು. ತಮಿಳುನಾಡು ಕ್ರಿಕೆಟ್ ಸಂಸ್ಥೆ ಅಂಪೈರ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದಾಗ ಸಾಫ್ಟ್’ವೇರ್ ಇಂಜಿನಿಯರ್ ಹುದ್ದೆ ತೊರೆದ ಜನನಿ, ಅಂಪೈರಿಂಗ್ ಪರೀಕ್ಷೆ ಬರೆದಿದ್ದರು.

ಇನ್ನು ವೃಂದಾ ರಾಥಿ ಮುಂಬೈನ ಕ್ರಿಕೆಟ್ ಮೈದಾನಗಳಲ್ಲಿ ಸ್ಕೋರರ್ ಆಗಿ ಕೆಲಸ ಮಾಡುತ್ದಿದ್ದ ಮಹಿಳೆ. ಇವರಿಗೆ ಅಂಪೈರ್ ಆಗಲು ಸ್ಫೂರ್ತಿ ನ್ಯೂಜಿಲೆಂಡ್’ನ ಮಹಿಳಾ ಅಂಪೈರ್ ಕ್ಯಾಥಿ ಕ್ರಾಸ್. ವೃಂದಾ ರಾಥಿ ಮತ್ತು ಗಾಯತ್ರಿ ವೇಣುಗೋಪಾಲನ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹಿಳಾ ಟಿ20 ಸರಣಿಯಲ್ಲಿ ಅಂಪೈರ್’ಗಳಾಗಿ ಕಾರ್ಯನಿರ್ವಹಿಸಲಿದ್ದು, ರಣಜಿ ಟ್ರೋಫಿ 2ನೇ ಸುತ್ತಿನ ಪಂದ್ಯಗಳಿಗೆ ಹಾಜರಾಗಲಿದ್ದಾರೆ. ಇವರಿಬ್ಬರೂ ಈಗಾಗಲೇ ಬಾಲಕರ U-23 ಸಿ.ಕೆ ನಾಯ್ಡು ಟ್ರೋಫಿ ಟೂರ್ನಿಯಲ್ಲಿ ಅಂಪೈರ್’ಗಳಾಗಿ ಕಾರ್ಯ ನಿರ್ವಹಿಸಿದ್ದಾರೆ.

ಇದನ್ನೂ ಓದಿ : Suryakumar Yadav to play Ranji Trophy: ಟೀಮ್ ಇಂಡಿಯಾದಿಂದ ಔಟ್, ರಣಜಿ ಟ್ರೋಫಿಯಲ್ಲಿ ಮುಂಬೈ ಪರ ಆಡಲಿದ್ದಾರೆ ಸೂರ್ಯಕುಮಾರ್ ಯಾದವ್

ಇದನ್ನೂ ಓದಿ : India Vs Bangladesh ODI : ಇಂದು 2ನೇ ಏಕದಿನ, ಭಾರತಕ್ಕೆ ಮಾಡು ಇಲ್ಲ ಮಡಿ ಪಂದ್ಯ; ಬದಲಾಗುತ್ತಾ ಪ್ಲೇಯಿಂಗ್ XI?

ಇದನ್ನೂ ಓದಿ : Rohith Sharma 500 Sixers : 500 ಸಿಕ್ಸರ್ಸ್ ಹೊಸ್ತಿಲಲ್ಲಿ ಹಿಟ್‌ಮ್ಯಾನ್, ಮಹೋನ್ನತ ದಾಖಲೆಗೆ ಮೂರೇ ಸಿಕ್ಸರ್ಸ್ ಬಾಕಿ

ರಣಜಿ ಟ್ರೋಫಿ ಇತಿಹಾಸದಲ್ಲೇ ಇದುವರೆಗೆ ಮಹಿಳಾ ಅಂಪೈರ್’ಗಳು ಅಂಪೈರಿಂಗ್ ನಡೆಸಿಲ್ಲ. ಇದೀಗ ಇತಿಹಾಸ ನಿರ್ಮಿಸಲು ಬಿಸಿಸಿಐ ಮುಂದಾಗಿದೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿ ಡಿಸೆಂಬರ್ 13ರಂದು ಆರಂಭವಾಗಲಿದೆ. 8 ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಎಲೈಟ್ ಗ್ರೂಪ್ ’ಸಿ’ನಲ್ಲಿದ್ದು ತನ್ನ ಮೊದಲ ಪಂದ್ಯದಲ್ಲಿ ಸರ್ವಿಸಸ್ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

Women Umpires in Ranji Trophy: Women Umpires for Ranji Trophy, BCCI is a new experiment

Comments are closed.