ಮಂಗಳವಾರ, ಏಪ್ರಿಲ್ 29, 2025
HomebusinessRBI New Guidelines : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? ಈ ಕ್ರಮಗಳನ್ನು ಪಾಲಿಸದಿದ್ದರೆ...

RBI New Guidelines : ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರಾ? ಈ ಕ್ರಮಗಳನ್ನು ಪಾಲಿಸದಿದ್ದರೆ ನಷ್ಟ ತಪ್ಪಿದ್ದಲ್ಲ..!

- Advertisement -

ನವದೆಹಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ ಬ್ಯಾಂಕ್)ನಲ್ಲಿ (RBI New Guidelines) ಬರುವ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲು ಯಾವುದೇ ಮಿತಿಯನ್ನು ನಿಗದಿಪಡಿಸಿರುವುದಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಗಳನ್ನು ಇಟ್ಟುಕೊಳ್ಳುವುದರಿಂದ ಗ್ರಾಹಕರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಯಾಕೆಂದರೆ ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆಯನ್ನು ಹೊಂದಿದ್ದು, ಅದರ ನಿರ್ವಹಣೆ ಕಷ್ಟವಾಗುವುದರಿಂದ ನಷ್ಟ ಉಂಟಾಗುತ್ತದೆ ಎಂದು ತಿಳಿಸಿದೆ.

ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ :
ಗ್ರಾಹಕರು ಎಷ್ಟೇ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೂ ಸಹ ಎಲ್ಲಾ ಬ್ಯಾಂಕ್‌ಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಿಸುವುದು ಬಹಳ ಮುಖ್ಯವಾಗಿದೆ. ಮಾತ್ರವಲ್ಲದೇ, ಚೆಕ್‌ಬುಕ್‌ನಿಂದ ಕಾರ್ಡ್‌ವರೆಗೆ ಎಲ್ಲಾ ಶುಲ್ಕಗಳನ್ನು ಕೂಡ ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಗ್ರಾಹಕರು ತಾವು ಹೊಂದಿದ್ದ ಬ್ಯಾಂಕ್‌ ಖಾತೆಗಳಲ್ಲಿ ಯಾವಗಲೂ ಕನಿಷ್ಠ ಹಣವನ್ನು ಇಡಬೇಕಾಗುತ್ತದೆ.

ಶುಲ್ಕಗಳ ಪಾವತಿ :
ಬ್ಯಾಂಕ್ ಖಾತೆಗಳಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳುವುದರ ಜೊತೆಗೆ ಇತರ ಹಲವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಶುಲ್ಕಗಳು, ಸೇವಾ ಶುಲ್ಕಗಳು ಸೇರಿದಂತೆ ವಿವಿಧ ರೀತಿಯ ಪಾವತಿಗಳನ್ನು ಮಾಡಬೇಕಾಗಿದೆ. ನೀವು ಕೇವಲ ಒಂದು ಬ್ಯಾಂಕ್‌ನ ಸೌಲಭ್ಯಗಳ ಲಾಭವನ್ನು ಪಡೆದರೆ, ನೀವು ಕೇವಲ ಒಂದು ಬ್ಯಾಂಕ್‌ನಲ್ಲಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದರೆ ನೀವು ಖಾತೆ ಹೊಂದಿರುವ ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಈ ಎಲ್ಲಾ ಶುಲ್ಕಗಳ ಪಾವತಿ ಅನಿವಾರ್ಯವಾಗಿದೆ.

ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ :
ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ 5000 ರೂ., ಹಲವು ಬ್ಯಾಂಕ್‌ಗಳಲ್ಲಿ 10,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಮಾತ್ರವಲ್ಲದೇ ಇದು ನಿಮ್ಮ CIBIL ಸ್ಕೋರ್ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದನ್ನೂ ಓದಿ : Swiggy Company : 2023 ಹೊಸ ವರ್ಷದ ಆಚರಣೆ : 3.50 ಲಕ್ಷ ಬಿರಿಯಾನಿ, 61 ಸಾವಿರ ಪಿಜ್ಜಾ ಡೆಲಿವರಿ ಮಾಡಿದ ಸ್ವಿಗ್ಗಿ ಕಂಪೆನಿ

ಇದನ್ನೂ ಓದಿ : ಹೊಸ ವರ್ಷದಂದು ಗ್ರಾಹಕರಿಗೆ ಬ್ಯಾಡ್‌ ನ್ಯೂಸ್ : ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ

ಇದನ್ನೂ ಓದಿ : Bank Holidays January 2023 : ಗ್ರಾಹಕರೇ ಗಮನಿಸಿ : ಜನವರಿ ತಿಂಗಳಲ್ಲಿ 15 ದಿನ ಬ್ಯಾಂಕ್‌ ರಜೆ

ಅನಗತ್ಯ ಶುಲ್ಕಗಳನ್ನು ತಪ್ಪಿಸಲು ಹಾಗೂ ಉತ್ತಮ ಸಿಬಿಲ್ ಸ್ಕೋರ್ ಕಾಯ್ದುಕೊಳ್ಳಲು ನೀವು ಬಯಸಿದರೆ ನಿಮ್ಮ ಎಲ್ಲಾ ಬಳಕೆಯಾಗದ ಖಾತೆಗಳನ್ನು ಮುಚ್ಚುವುದು ಒಳ್ಳೆಯದು ಎಂದು ಆರ್‌ಬಿಐ ಹೇಳಿದೆ. ಇದಕ್ಕಾಗಿ ನೀವು ಯಾವ ಬ್ಯಾಂಕ್ ಖಾತೆಯನ್ನು ಮುಚ್ಚಲು ಬಯಸುತ್ತೀರೋ ಆ ಬ್ಯಾಂಕ್ ಶಾಖೆಗೆ ಹೋಗಿ ಅಕೌಂಟ್ ಕ್ಲೋಸ್ ಫಾರ್ಮ್ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ನಿಮ್ಮ ಖಾತೆಯನ್ನು ಸುಲಭವಾಗಿ ಮುಚ್ಚಬಹುದು ಎಂದು ಆರ್‌ಬಿಐ ಹೇಳಿದೆ.

RBI New Guidelines : Have more than one bank account? If these measures are not followed, the loss is not wrong..!

RELATED ARTICLES

Most Popular