Electricity price hike: ಮೆಸ್ಕಾಂ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಶಾಕ್:‌ ಪ್ರತಿ ಯೂನಿಟ್ ಗೆ 1.38 ರೂ. ದರ ಏರಿಕೆ

ಮಂಗಳೂರು: (Electricity price hike) ಹೊಸ ವರ್ಷದ ಆರಂಭದಲ್ಲೇ ಮೆಸ್ಕಾಂ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡಿದೆ. ಪ್ರತಿ ಯೂನಿಟ್ ಗೆ 1.38 ರೂ. ಗಳಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಮೆಸ್ಕಾಂ ಈಗಾಗಲೇ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ನೀಡಿದೆ.

ಹೊಸ ವರ್ಷ ಆರಂಭವಾಗುತ್ತಿದ್ದಂತೆ ಮೆಸ್ಕಾಂ ಗ್ರಾಹಕರಿಗೆ ವಿದ್ಯುತ್‌ ದರ ಏರಿಕೆ(Electricity price hike)ಯ ಶಾಕ್‌ ನೀಡುತ್ತಿದ್ದು, 2023-24ನೇ ಸಾಲಿಗೆ ಘಟಕದ ಬೆಲೆಯನ್ನು 1.38 ರೂ.ಗಳಷ್ಟು ಹೆಚ್ಚಿಸುವ ಪ್ರಸ್ತಾವನೆಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದಿಟ್ಟಿದೆ. ಮೆಸ್ಕಾಂ ಪ್ರಕಾರ ಪ್ರತಿ ಘಟಕಕ್ಕೆ 9.93 ರೂ. ದರವಿದ್ದು, ಸದ್ಯ ಪ್ರತಿ ಯೂನಿಟ್‌ಗೆ 7.95 ರೂ.ಗಳನ್ನು ಗ್ರಾಹಕರಿಗೆ ವಿಧಿಸುತ್ತಿದೆ. ಅಂದರೆ ಮೆಸ್ಕಾಂ ಗೆ ಪ್ರತಿ ಯೂನಿಟ್‌ ಗೆ 1.38 ರೂ.ಗಳ ಕೊರತೆಯಿದೆ. ಹಾಗಾಗಿ ಮೆಸ್ಕಾಂ ಪ್ರಕಾರ ವಿದ್ಯುತ್‌ ಬೆಲೆ ಏರಿಕೆ ಅನಿವಾರ್ಯವಾಗಿದೆ.

ನಗರ ಪ್ರದೇಶಗಳಲ್ಲಿ ಎಲ್‌ ಟಿ- 2 ಸಂಪರ್ಕಕ್ಕೆ ಪ್ರಸ್ತುತ ಪ್ರತಿ ಕಿಲೋ ವ್ಯಾಟ್ ಗೆ 100 ರೂ. ಇದ್ದು, ಇದನ್ನು 150 ರೂ.ಗೆ ಹೆಚ್ಚಿಸಲು ಮೆಸ್ಕಾಂ ಮುಂದಾಗಿದೆ. ಹೆಚ್ಚುವರಿ ಕಿಲೋವ್ಯಾಟ್‌ಗೆ 100 ರೂ. ಇಂದ 110 ರೂ. ಗೆ ಮತ್ತು 50 ಕಿಲೋವ್ಯಾಟ್‌ಗೆ ಪ್ರಸ್ತುತ ಶುಲ್ಕ 160 ರೂ. ಇಂದ ಹೆಚ್ಚುವರಿ ಶುಲ್ಕ 175 ರೂ. ಗೆ ಹೆಚ್ಚಿಸಲು ಮುಂದಾಗಿದೆ.

2022 ರ ಎರಡನೇ ತ್ರೈಮಾಸಿಕದಲ್ಲಿ (ಜುಲೈ ನಿಂದ ಸೆಪ್ಟೆಂಬರ್) ಇಂಧನ ಮತ್ತು ವಿದ್ಯುತ್ ಖರೀದಿ ವೆಚ್ಚದಲ್ಲಿ ಒಟ್ಟಾರೆ ಕಡಿತವಿರುವುದನ್ನು ಕೆಇಆರ್‌ಸಿ ಗಮನಿಸಿದ್ದು, ಸೀಮಿತ ಅವಧಿಗೆ ವಿದ್ಯುತ್‌ ಹೊಂದಾಣಿಕೆ ಶುಲ್ಕವನ್ನು 15 ಪೈಸೆ ಕಡಿಮೆ ಮಾಡಲಾಗಿದೆ. ಈ ಹಿಂದೆ ಪ್ರತಿ ಯೂನಿಟ್‌ಗೆ 37 ರೂಪಾಯಿ ಮರುಪಾವತಿ ಮಾಡುವುದಾಗಿ ಹೇಳಲಾಗಿತ್ತು.

ಇದನ್ನೂ ಓದಿ : ಮಂಗಳೂರು ಏರ್‌ಪೋರ್ಟ್‌ನಲ್ಲಿ 4 ತಿಂಗಳು ಹಗಲು ವಿಮಾನ ಹಾರಾಟ ರದ್ದು

ಇದನ್ನೂ ಓದಿ : Heart attack-soldier death: ರಜೆಗೆಂದು ಊರಿಗೆ ಬಂದಿದ್ದ ಸೇನಾ ಯೋಧ ಹೃದಯಾಘಾತದಿಂದ ಸಾವು

As the new year begins, Mescom is giving consumers a shock of electricity rate hike and has submitted a proposal to the Karnataka Electricity Regulatory Commission to increase the unit price by Rs 1.38 for the year 2023-24.

Comments are closed.