RBI Re-KYC Rules | ಬ್ಯಾಂಕ್‌ ಗ್ರಾಹಕರ ಗಮನಕ್ಕೆ : eKYC ಕುರಿತು RBIನಿಂದ ಮಹತ್ವದ ಘೋಷಣೆ

ನವದೆಹಲಿ : ಬ್ಯಾಂಕ್‌ ಖಾತೆಯ ಕೆವೈಸಿ ನಿಯಮಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಹತ್ವದ ಮಾಹಿತಿ (RBI Re-KYC Rules) ನೀಡಿದ್ದಾರೆ. ನೀವು ಒಮ್ಮೆ KYC ಮಾಡಿದ್ದರೆ, ಎರಡನೇ ಬಾರಿ ಅದನ್ನು ಮಾಡಲು ನೀವು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇದರ ಬಗ್ಗೆ ಮಾಹಿತಿಯನ್ನು ನೀಡಿರುವ ಗವರ್ನರ್‌ ನಿಮ್ಮ ವಿಳಾಸ ಬದಲಾಗಿದ್ದರೆ, ನಿಮ್ಮ ಹೊಸ ವಿಳಾಸವನ್ನು ಇಮೇಲ್ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬ್ಯಾಂಕ್‌ಗೆ ಕಳುಹಿಸಿ ಅಪ್ಡೇಟ್ ಮಾಡಿಸಿಕೊಳ್ಳಬಹುದು ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಗ್ರಾಹಕರು ಯಾವುದೇ ಒಂದು ಬ್ಯಾಂಕ್‌ನಲ್ಲಿ KYC ಹೊಂದಿದ್ದರೆ, ಮತ್ತೆ KYC ಮಾಡುವ ಅಗತ್ಯವಿಲ್ಲ ಎಂದು RBI ಸ್ಪಷ್ಟವಾಗಿ ತಿಳಿಸಿದೆ. ಗ್ರಾಹಕರು ತಮ್ಮ CKYCR ಐಡೆಂಟಿಫೈಯರ್ ಸಂಖ್ಯೆಯನ್ನು ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬಹುದು. ನಿಮ್ಮ ಬ್ಯಾಂಕ್ ಒಂದು ವೇಳೆ ಹಾಗೆ ಮಾಡಲು ನಿರಾಕರಿಸಿದರೆ, ಗ್ರಾಹಕರು ತಮ್ಮ ಬ್ಯಾಂಕಿಗೆ ಸಂಬಂಧಿಸಿದಂತೆ ದೂರು ನೀಡಬಹುದು ಎಂದು ಆರ್.ಬಿ.ಐ ಸ್ಪಷ್ಟಪಡಿಸಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿಕೆ :
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರು ಮರು-ಕೆವೈಸಿ ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನೀವು ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಸುಲಭವಾಗಿ ಮರು-ಕೈವೈಸಿ ಮಾಡಬಹುದು. ಒಂದು ವೇಳೆ ನಿಮ್ಮ KYC ವಿವರಗಳಲ್ಲಿ ಯಾವುದೇ ಬದಲಾವಣೆ ಆಗದಿದ್ದರೆ, ಇಮೇಲ್ ಕಳುಹಿಸುವ ಮೂಲಕ ಅಥವಾ ನಿಮ್ಮ ನೋಂದಾಯಿತ ಮೊಬೈಲ್‌ನಿಂದ ಬ್ಯಾಂಕ್‌ಗೆ ಸಂದೇಶವನ್ನು ಕಳುಹಿಸುವ ಮೂಲಕ ನೀವು reKYC ಅನ್ನು ಪಡೆಯಬಹುದು ಎಂದಿದ್ದಾರೆ.

ಇದನ್ನೂ ಓದಿ : Small saving schemes Interest Rate : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸರಕಾರದಿಂದ ಗುಡ್‌ ನ್ಯೂಸ್

ಇದನ್ನೂ ಓದಿ : National Pension System | ನಿವೃತ್ತಿ ಬಳಿಕ ಸಿಗುತ್ತೆ ತಿಂಗಳಿಗೆ 70 ಸಾವಿರ ರೂ. ಪಿಂಚಣಿ

ಇದನ್ನೂ ಓದಿ : Post Office RD Scheme : ಅಂಚೆ ಕಚೇರಿಯಲ್ಲಿ 5 ಸಾವಿರ ಹೂಡಿಕೆ ಮಾಡಿ 3.5 ಲಕ್ಷ ಪಡೆಯಿರಿ

ವಿಳಾಸ ಬದಲಾವಣೆಯ ಕುರಿತು kyc ಮಾಡುವ ವಿಧಾನ :

  • ಇದಕ್ಕಾಗಿ, ಗ್ರಾಹಕರು ಮನೆಯಲ್ಲಿ ಕುಳಿತು ಬ್ಯಾಂಕ್‌ನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಇಮೇಲ್ ಅಥವಾ ಸಂದೇಶವನ್ನು ಕಳುಹಿಸಬಹುದು.
  • ಕೇವಲ 60 ದಿನಗಳಲ್ಲಿ ಪತ್ರವನ್ನು ಕಳುಹಿಸುವ ಮೂಲಕ ಬ್ಯಾಂಕ್ ಅದನ್ನು ಪರಿಶೀಲಿಸುತ್ತದೆ
  • CKYCR ಅಡಿಯಲ್ಲಿ, ಗ್ರಾಹಕರಿಗೆ CKYCR ಐಡೆಂಟಿಫಿಕೆಶನ್ ಸಂಖ್ಯೆಯನ್ನು ನೀಡಲಾಗುತ್ತದೆ. ಅದನ್ನು ನೀವು ಬ್ಯಾಂಕ್‌ನೊಂದಿಗೆ ಹಂಚಿಕೊಳ್ಳಬಹುದು. ಬಳಿಕ ನೀವು ಇತರ ಬ್ಯಾಂಕ್ ನಲ್ಲಿ KYC ಮಾಡಬೇಕಾಗಿಲ್ಲ.
  • KYC ಮಾಡಲು ಬ್ಯಾಂಕ್‌ಗೆ ಬರಲು ನಿಮ್ಮ ಬ್ಯಾಂಕ್ ನಿಮ್ಮನ್ನು ಕೇಳಿದರೆ, ಈ ಕುರಿತು ನೀವು ಬ್ಯಾಂಕ್ ನ ಬ್ಯಾಂಕಿಂಗ್ ಒಂಬುಡ್ಸ್‌ಮನ್ ವ್ಯವಸ್ಥೆ ಮತ್ತು ಕಾನೂನುಬದ್ಧವಲ್ಲದ ತ್ವರಿತ ಪರಿಹಾರದ ಅಡಿಯಲ್ಲಿ ದೂರು ನೀಡಬಹುದು.

RBI Re-KYC Rules | Attention Bank Customers: Important announcement by RBI on eKYC

Comments are closed.