BCCI selection committee: ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರೇಸ್; ಕನ್ನಡಿಗ ವೆಂಕಟೇಶ್ ಪ್ರಸಾದ್ ಆಯ್ಕೆ ಬಹುತೇಕ ಖಚಿತ

ನವದೆಹಲಿ: ಬಿಸಿಸಿಐ ಆಯ್ಕೆ ಮಂಡಳಿ (BCCI selection committee) ಅಧ್ಯಕ್ಷ ಸ್ಥಾನಕ್ಕೆ ನೂತನ ಸದಸ್ಯರನ್ನು ನೇಮಿಸುವ ಸಲುವಾಗಿ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಈ ಬೆನ್ನಲ್ಲೇ ಹಲವಾರು ಅರ್ಜಿಗಳು ಬಂದಿದ್ದು, ಅವುಗಳ ಪೈಕಿ 207 ಮಂದಿಯ ಅರ್ಜಿಯನ್ನು ಬಿಸಿಸಿಐ ಸ್ವೀಕರಿಸಿದೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗನಿಗೆ ಮಣೆ ಹಾಕುವ ಸಾಧ್ಯತೆಗಳು ಹೆಚ್ಚಿದ್ದು, ವೆಂಕಟೇಶ್ ಪ್ರಸಾದ್ ಆಯ್ಕೆ ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಟಿ-20 ವಿಶ್ವಕಪ್ ಗೂ ಮುನ್ನವೇ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಮೊದಲು ಏಷ್ಯಾಕಪ್ ಬಳಿಕ ಟಿ-20 ಹೀಗೆ ಎರಡೂ ಪಂದ್ಯಗಳಲ್ಲೂ ಭಾರತ ತಂಡ ಕಳಪೆ ಪ್ರದರ್ಶನ ನೀಡಿದ್ದು ಅಸಮಾಧಾನ ಮೂಡಿಸಿತ್ತು. ಈ ಹಿನ್ನೆಲೆ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ವಿರುದ್ಧ ಟೀಕೆಗಳು ಕೇಳಿಬಂದಿದ್ದವು. ಇದರ ಮೊದಲ ತಲೆದಂಡ ಎಂಬಂತೆ ಬಿಸಿಸಿಐ ಚೇತನ್ ಶರ್ಮಾ ಸಾರಥ್ಯದ ಪೂರ್ಣ ಆಯ್ಕೆ ಮಂಡಳಿಯನ್ನೇ ವಜಾಗೊಳಿಸಿತ್ತು. ಬಳಿಕ ಮಂಡಳಿಗೆ ಹೊಸ ಸದಸ್ಯರನ್ನು ನೇಮಿಸುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಿತ್ತು.

ಇದನ್ನೂ ಓದಿ: India Vs Bangladesh 3rd ODI: ಕ್ಲೀನ್ ಸ್ವೀಪ್ ಭೀತಿಯಲ್ಲಿ ಭಾರತ, ಕನ್ನಡಿಗ ಕೆ.ಎಲ್ ರಾಹಲ್ ಮುಂದೆ ಬಿಗ್ ಚಾಲೆಂಜ್

ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದ್ದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ಹಲವಾರು ಅರ್ಜಿಗಳು ಬಂದಿದ್ದವು. ಆದರೆ ಸದ್ಯದ ಮಾಹಿತಿ ಪ್ರಕಾರ ಬಿಸಿಸಿಐ ಒಟ್ಟು 207 ಅರ್ಜಿಯನ್ನು ಸ್ವೀಕರಿಸಿದೆ ಎಂದು ತಿಳಿದುಬಂದಿದೆ. ಘಟಾನುಘಟಿ ನಾಯಕರುಗಳು ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆ ಪೈಕಿ ಕನ್ನಡಿಗ ಹಾಗೂ ಟೀಂ ಇಂಡಿಯಾ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗವುದು ಖಚಿತ ಎನ್ನಲಾಗುತ್ತಿದೆ. ಈ ತಿಂಗಳ ಅಂತ್ಯದೊಳಗೆ ಬಿಸಿಸಿಐ ಆಯ್ಕೆ ಮಂಡಳಿಗೆ ಹೊಸ ಸದಸ್ಯರ ನೇಮಕ ಮಾಡಲಿದೆ.

ವೆಂಕಟೇಶ್ ಪ್ರಸಾದ್ ಆಯ್ಕೆ ಸಾಧ್ಯತೆಗೆ ಕಾರಣಗಳೇನು..?
ಮಂಡಳಿಗೆ ಸಲ್ಲಿಕೆಯಾದ ಅರ್ಜಿಗಳ ಪೈಕಿ ವೆಂಕಟೇಶ್ ಪ್ರಸಾದ್ ಅತ್ಯಂತ ಅನುಭವಿ ಆಗಿದ್ದು, ರೇಸ್ ನಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ಐಪಿಎಲ್ ಟೂರ್ನಿಗಳಲ್ಲಿ ಹಲವಾರು ತಂಡಗಳ ಪರ ಕೋಚ್ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ.

ವೆಂಕಟೇಶ್ ಪ್ರಸಾದ್ ಆಯ್ಕೆಯಾದರೆ ಲಾಭಗಳೇನು..?
ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದರೆ ಟೀಂ ಇಂಡಿಯಾದಲ್ಲಿ ಹಲವಾರು ಬದಲಾವಣೆಗಳು ಆಗುವುದು ಖಚಿತ. ಏಕೆಂದರೆ ಈ ಹಿಂದೆ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನಕ್ಕೆ ವೆಂಕಟೇಶ್ ಪ್ರಸಾದ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಕ್ಯಾಪ್ಟನ್ ರೋಹಿತ್ ಶರ್ಮಾ ವಿರುದ್ಧ ನೇರವಾಗಿ ಕಿಡಿಕಾರಿದ್ದರು.

ಇದನ್ನೂ ಓದಿ: BCCI postmortem Meeting : ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು, ಬಿಸಿಸಿಐ ಮೀಟಿಂಗ್’ನಲ್ಲಿ ಹೊರ ಬೀಳಲಿದೆ ಮಹತ್ವದ ನಿರ್ಧಾರ

ಈಗಾಗಲೇ ಬಿಸಿಸಿಐ ತನ್ನ ಕ್ರಿಕೆಟ್ ಸಲಹಾ ಸಮಿತಿಗೆ ಸದಸ್ಯರನ್ನು ನೇಮಕ ಮಾಡಿದೆ. ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಹಾಗೂ ಮಾಜಿ ಮಹಿಳಾ ಆಟಗಾರ್ತಿ ಸುಲಕ್ಷಣಾ ನಾಯಕ್ ಅವರು ನೂತನ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಈ ಮೂವರ ಸಲಹಾ ಸಮಿತಿ ಬಿಸಿಸಿಐನ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಕ ಮಾಡುವ ಜವಾಬ್ದಾರಿ ಹೊರಲಿದೆ.

BCCI selection committee: Big race for BCCI selection committee presidency post Venkatesh Prasad is the frontrunner in the race

Comments are closed.