Russia Ukraine War: ದೇಶದ ಜನರನ್ನುದ್ದೇಶಿಸಿ ಉಕ್ರೇನ್‌ ಅಧ್ಯಕ್ಷರ ಭಾವನಾತ್ಮಕ ಭಾಷಣ; ಚಿನ್ನ, ತೈಲ ದರದಲ್ಲಿ ಭಾರಿ ಏರಿಕೆ, ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ

ಉಕ್ರೇನ್ ಎಂದೆಂದಿಗೂ ಶಾಂತಿಯನ್ನೇ ಬಯಸುತ್ತದೆ. ಆದರೆ  ರಷ್ಯಾದ ಯಾವುದೇ ಆಕ್ರಮಣದ (Russia Ukraine War) ವಿರುದ್ಧ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ ಎಂದು ಉಕ್ರೇನ್ ಅಧ್ಯಕ್ಷರ ವೊಲೊಡೈಮೈರ್ ಝಲೆನ್ಸ್ಕಿ ಎಚ್ಚರಿಸಿದ್ದಾರೆ. ಅಲ್ಲದೇ ಅವರು ಉಕ್ರೇನ್ ದೇಶದ ನಾಗರಿಕರನ್ನು ಉದ್ದೇಶಿಸಿ ಮಾಡಿರುವ ಭಾವನಾತ್ಮಕ ಭಾಷಣದಲ್ಲಿ (Ukrainian President Volodymyr Zelenskyy’s Emotional Speech) ದೇಶದ ಕುರಿತು ಸ್ವಾಭಿಮಾನವನ್ನು ಬಡಿದೆಬ್ಬಿಸುವ ಮಾತುಗಳನ್ನು ಆಡಿದ್ದು ಅವರ ಭಾಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈನಡುವೆ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ (Russia Ukraine War Share Market)ಕಂಡುಬಂದಿದ್ದು ತೈಲ ಬೆಲೆಯಲ್ಲಿ (Oil Price Hike) ಗಣನೀಯ ಏರಿಕೆಯಾಗುತ್ತಿದೆ.

ಯಾವುದೇ ಪ್ರಚೋದನೆ, ಯಾವುದೇ ಸ್ಪಾರ್ಕ್ ಎಲ್ಲವನ್ನೂ ನಾಶಪಡಿಸುವ ಬೆಂಕಿಯನ್ನು ಹೊತ್ತಿಸಬಹುದು. ಈ ಜ್ವಾಲೆಯು ಉಕ್ರೇನ್ ಜನರಿಗೆ ಸ್ವಾತಂತ್ರ್ಯವನ್ನು ತರುತ್ತದೆ ಎನ್ನಬಹುದಾದರು ಈಗಾಗಲೇ ಆದರೆ ಉಕ್ರೇನಿಯನ್ ಜನರು ಸ್ವತಂತ್ರರಾಗಿದ್ದಾರೆ ಎಂಬುದನ್ನು ನೆನಪಿಡಿ” ಎಂದು ಅವರು ರಷ್ಯಾಕ್ಕೆ ಸವಾಲನ್ನು ಎಸೆದಿದ್ದಾರೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಘೋಷಣೆಯಿಂದ ಷೇರು ಮಾರುಕಟ್ಟೆಯ ಮೇಲೆ ಗಾಢ ಪ್ರಭಾವವ ಬೀರಿದೆ. ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಶೇಕಡಾವಾರು ಪ್ರಮಾಣಗಳ ವಿವರ ಇಂತಿದೆ: ಅದಾನಿ ಪೋರ್ಟ್ಸ್ ಶೇ -4.13, ಟೆಕ್ ಮಹೀಂದ್ರಾ ಶೇ -4.02, ಮಹೀಂದ್ರಾ ಅಂಡ್ ಮಹೀಂದ್ರಾ ಶೇ -4.27, ಟಾಟಾ ಮೋಟಾರ್ಸ್ ಶೇ -6.01, ಇಂಡಸ್​ಇಂಡ್ ಬ್ಯಾಂಕ್ ಶೇ -4.75. ಈಮೂಲಕ ಷೇರು ಮಾರುಕಟ್ಟೆಯಲ್ಲಿ ಕುಸಿತ ಉಂಟಾಗಿದೆ.

ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಸ್ಥಿತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ (India Share Market) ತತ್ತರಿಸಿದೆ. ಮುಂಬೈ ಷೇರುಪೇಟೆ (Mumbai Share market) ಸೂಚ್ಯಂಕ ಸೆನ್ಸೆಕ್ಸ್ (index Sensex) ಇಂದು ಗುರುವಾರ 1850 ಅಂಶಗಳ ಬೃಹತ್ ಪ್ರಮಾಣದ ಕುಸಿತದ ಮೂಲಕ ದಿನವನ್ನು ಆರಂಭಿಸಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ (Bombay Stock Exchange) ನ ಈ ಸೂಚ್ಯಂಕವು 1430 ಅಂಕಗಳ ಕುಸಿತದೊಂದಿಗೆ 55,802 ಮಟ್ಟದಲ್ಲಿ ವಹಿವಾಟು ನಡೆಯುತ್ತಿದೆ. ಅಇದರ ಜೊತೆಗೆ ಕಚ್ಚಾ ತೈಲ ದರ ಬೆಲೆಯು 100 ಯುಎಸ್​ಡಿದಾಟಿದೆ. ಅಷ್ಟೇ ಅಲ್ಲದೇ ರಷ್ಯಾ ಉಕ್ರೇನ್ ಯುದ್ಧದ ಪ್ರಭಾವ ಚಿನ್ನದ ಬೆಲೆಯ ಮೇಲೂ ಆಗಿದ್ದು ಹಳದಿ ಲೋಹದ ಬೆಲೆ ಏರಿಕೆ ಆಗಿದೆ.

ಇದನ್ನೂ ಓದಿ: Jeevan Jyoti Bima Yojana: ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ದರದ ಟರ್ಮ್ ಇನ್ಶೂರೆನ್ಸ್ ಯೋಜನೆ ಹೊಂದಿದೆ ಭಾರತ

(Russia Ukraine war share market down oil price hike)

Comments are closed.