ಬೆಂಗಳೂರಿನಲ್ಲಿ ಇನ್ನೂ ಲಸಿಕೆ ಪಡೆದಿಲ್ಲ ಲಕ್ಷಾಂತರ ಜನರು: ಲಸಿಕೆ ಪಡೆಯದವರ ಪತ್ತೆಗೆ ಪೊಲೀಸರ ಮೊರೆ ಹೋದ ಬಿಬಿಎಂಪಿ

ಬೆಂಗಳೂರು : ಕೊರೋನಾ ಮೂರನೇ ಅಲೆಯ ಪ್ರಭಾವ ತಗ್ಗಿದ್ದರೂ ಇನ್ನೂ ಪೂರ್ತಿಯಾದ ಆತಂಕ‌ ಕಡಿಮೆಯಾಗಿಲ್ಲ. ಅಲ್ಲಲ್ಲಿ ಕೊರೋನಾ ಪ್ರಕರಣಗಳು ಇನ್ನೂ ವರದಿಯಾಗುತ್ತಲೇ ಇದೆ. ಈ ಮಧ್ಯೆ ಇನ್ನೂ ಲಕ್ಷಗಟ್ಟಲೇ ಜನರು ವಾಕ್ಸಿನ್ ನಿಂದ ದೂರ ಉಳಿದಿದ್ದಾರೆ. ಅದರಲ್ಲೂ ಮಹಾಸಾಗರದಂತಿರುವ ಬೆಂಗಳೂರಿನಲ್ಲಂತೂ ಲಕ್ಷಾಂತರ ಜನರು ಕೊರೋನಾ ಲಸಿಕೆ (Covid vaccine track) ಪಡೆದಿಲ್ಲ. ಇಂಥವರ ಪತ್ತೆ ಬಿಬಿಎಂಪಿ ಪಾಲಿಗೆ ಸವಾಲಾಗಿದ್ದು ಇದಕ್ಕಾಗಿ ಪೊಲೀಸರ ಮೊರೆ ಹೋಗಲು ನಿರ್ಧರಿಸಿದೆ.

ದಾಖಲೆಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1 ಲಕ್ಷ ಜನರು ಕೊರೋನಾ ಮೊದಲ ಡೋಸ್ ಲಸಿಕೆ ಪಡೆದಿಲ್ಲ. ಅಂಥವರ ಪತ್ತೆ ಮಾಡೋದು ಬಿಬಿಎಂಪಿ ಪಾಲಿಗೆ ಸವಾಲಾಗಿದೆ. ಹೀಗಾಗಿ ಬಿಬಿಎಂಪಿ ಇದಕ್ಕಾಗಿ ಪೊಲೀಸರ ಸಹಾಯ ಕೋರಿದೆ. ಮತದಾರ ಪಟ್ಟಿಯ ಲೆಕ್ಕಾಚಾರದಂತೆ ರಾಜಧಾನಿಯಲ್ಲಿ ವಾಸವಿರುವ ಜನರ ಸಂಖ್ಯೆ 2021 ಕ್ಕೆ 91.72 ಲಕ್ಷ ಜನರು. ಇವರೆಲ್ಲರಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಈ ಪೈಕಿ ಈವರೆಗೂ 92.61 ಲಕ್ಷ ಜನರು ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ.

ಆದರೆ ಈ ಲೆಕ್ಕಾಚಾರದಂತೆ ಯೇ ನಗರದಲ್ಲಿ ಇನ್ನೂ1 ಲಕ್ಷ 18 ವರ್ಷಕ್ಕೆ ಮೇಲ್ಪಟ್ಟವರು ಲಸಿಕೆ ಪಡೆದಿಲ್ಲ. ಇನ್ನೊಂದೆಡೆ ಎರಡನೇ ಡೋಸ್ ಲಸಿಕೆಯನ್ನು 81.48 ಲಕ್ಷಕ್ಕೂ ಅಧಿಕ ಜನರಿಗೆ ನೀಡಬೇ ಕಿತ್ತು. ಈ ಪೈಕಿ 3 ಲಕ್ಷ ಜನರು ಲಸಿಕೆ ಪಡೆದುಕೊಂಡಿಲ್ಲ. ಈಗ ರಾಜ್ಯದಲ್ಲಿ ಕೊರೋನಾ ಪ್ರಮಾಣ ಸ್ವಲ್ಪ ಕಡಿಮೆಯಾಗಿರೋದರಿಂದ ಜನರು ಲಸಿಕೆ ಪಡೆಯುವುದರ ಕಡೆಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ. ಹೀಗಾಗಿ ಈಗ ಬಿಬಿಎಂಪಿ ಈ ಲಸಿಕೆ ಪಡೆಯದವರ ಪತ್ತೆಗೆ ಮನೆ ಮನೆ ಸಮೀಕ್ಷೆ ನಡೆಸಲು ಚಿಂತನೆ ನಡೆಸಿದ್ದು ಇದಕ್ಕಾಗಿ ಖಾಸಗಿ ಸಂಘ ಸಂಸ್ಥೆಗಳ ಸಹಯೋಗ ಪಡೆದುಕೊಂಡಿದೆ. ಆದರೂ ಲಸಿಕೆ ಅಭಿಯಾನ ಶೇಕಡಾ 100 ಗುರಿ ತಲುಪಲು ಸಾಧ್ಯವಾಗುತ್ತಿಲ್ಲ.

ಮೂರನೇ ಅಲೆಯಲ್ಲಿ ಬೆಂಗಳೂರಿನಲ್ಲಿ 380 ಜನರು ಸಾವನ್ನಪ್ಪಿದ್ದು ಈ ಪೈಕಿ ಶೇಕಡಾ 50 ರಷ್ಟು ಜನರು ಲಸಿಕೆ ಪಡೆದಿರಲಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಬಿಬಿಎಂಪಿ ತಮ್ಮ ವ್ಯಾಪ್ತಿ ಯಲ್ಲಿ ನೂರಕ್ಕೆ ನೂರು ಲಸಿಕೆ ಅಭಿಯಾನ ಪೂರ್ಣಗೊಳಿಸಲು ಬಾಕಿ ಇರುವವರನ್ನು ಹುಡುಕಿ ಲಸಿಕೆ ಹಾಕಿಸಲು ಬಿಬಿಎಂಪಿ ಈಗ ಖಾಕಿ ಮೊರೆ ಹೋಗಿದೆ. ಖಾಕಿ ಪಡೆಯ ಮಾತಿಗಾದರೂ ಬೆಲೆ ಕೊಟ್ಟು ಜನರು ಲಸಿಕೆ ಪಡೆಯುತ್ತಾರಾ ಕಾದು ನೋಡಬೇಕು.

ಇದನ್ನೂ ಓದಿ : ಮತ್ತೆ ಕೊರೋನಾ ಕರಿನೆರಳು : ರದ್ದಾಗುತ್ತಾ ಬೆಂಗಳೂರು ಕರಗ, ಜಾರಿಯಾಗುತ್ತಾ ಪ್ರತ್ಯೇಕ ಗೈಡ್ ಲೈನ್ಸ್

ಇದನ್ನೂ ಓದಿ :  ಇನ್ನುಂದೆ ಬೀದಿ ಬದಿ ವ್ಯಾಪಾರಕ್ಕೂ ಬೇಕು ಸರ್ಟಿಫಿಕೇಟ್ : ನಗರದಲ್ಲಿ ಹೊಸ ನಿಯಮ ಜಾರಿ

(Covid vaccine not received millions of people have in Bengaluru, police support to track BBMP)

Comments are closed.