shivarajkumar : ಆ್ಯಂಕರ್​ ಅನುಶ್ರೀಗೆ ಶಿವಣ್ಣರಿಂದ ಭರ್ಜರಿ ಗಿಫ್ಟ್​ : ವಿಡಿಯೋ ವೈರಲ್​

shivarajkumar : ಡಾ.ರಾಜ್​​ ಕುಮಾರ್​ ಮನೆತನಕ್ಕೆ ಕೇವಲ ಚಂದನವನ ಮಾತ್ರವಲ್ಲದೇ ಇತರೆ ಸಿನಿಮಾ ಕ್ಷೇತ್ರಗಳಲ್ಲಿಯೂ ಸಹ ಅಪಾರ ಗೌರವವಿದೆ. ಸಿನಿಮಾ ಅಭಿಮಾನಿಗಳು ರಾಜ್​ ಮನೆತನದ ಕುಡಿಗಳನ್ನು ಗೌರವದಿಂದ ಕಾಣುತ್ತಾರೆ. ಅದೇ ರೀತಿ ರಾಜ್​ ಕುಟುಂಬವು ಕೂಡ ಅಭಿಮಾನಿಗಳನ್ನು ದೇವರ ಸ್ಥಾನದಲ್ಲಿಯೇ ಇರಿಸಿದೆ. ನಟ ಶಿವರಾಜ್​ ಕುಮಾರ್​ ಕೂಡ ಅಭಿಮಾನಿಗಳ ಜೊತೆ ಮಸ್ತಿ ಮಾಡುವ ಸಾಕಷ್ಟು ವಿಡಿಯೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಲೇ ಇರ್ತೇವೆ. ಈ ಬಾರಿ. ಆ್ಯಂಕರ್​ ಅನುಶ್ರೀ ಶಿವಣ್ಣ ಜೊತೆಯಲ್ಲಿ ತಮಗಾದ ಸುಂದರ ಅನುಭವವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.


ಜೀ ಕನ್ನಡ ವಾಹಿನಿಯಲ್ಲಿ ಪ್ರಸ್ತುತ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಎಂಬ ರಿಯಾಲಿಟಿ ಶೋ ಪ್ರಸಾರವಾಗ್ತಿದೆ. ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಅನುಶ್ರೀ ಹೊತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಡ್ಜ್​ ಆಗಿ ನಟ ಶಿವರಾಜ್​ ಕುಮಾರ್​ ಕೂಡ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಅನುಶ್ರೀಗೆ ನಟ ಶಿವಣ್ಣ ವಿಶೇಷವಾದ ಉಡುಗೊರೆಯನ್ನು ನೀಡಿದ್ದು ಈ ವಿಚಾರ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.


ಕಾರ್ಯಕ್ರಮದಲ್ಲಿ ನಟ ಶಿವಣ್ಣ ಧರಿಸಿದ್ದ ಜಾಕೆಟ್​ ಒಂದು ಅನುಶ್ರೀಗೆ ತುಂಬಾನೇ ಇಷ್ಟವಾಗಿತ್ತು. ಅನುಶ್ರೀ ಶಿವಣ್ಣ ಬಳಿಯಲ್ಲಿ ಅಣ್ಣ ನಿಮ್ಮ ಜಾಕೆಟ್​ ಚೆನ್ನಾಗಿದೆ ಎಂದು ಹೇಳಿದ್ದರಂತೆ. ಇದಕ್ಕೆ ಪ್ರತಿಯಾಗಿ ಶಿವಣ್ಣ ಈ ಜಾಕೆಟ್​ ನಿನಗೇ ಕೊಡುತ್ತೇನೆಂದು ಹೇಳಿದ್ದರಂತೆ, ಸುಮ್ಮನೇ ಹೇಳಿರಬಹುದು ಎಂದು ಅನುಶ್ರೀ ಭಾವಿಸಿದ್ದರೆ ಶಿವಣ್ಣ ಮಾತ್ರ ದೊಡ್ಮನೆ ಪರಂಪರೆಯಂತೆ ಕೇಳಿದವರಿಗೆ ಕೊಡದೇ ಸುಮ್ಮನೇ ಹೋಗಿಲ್ಲ. ವಿತ್​ ಲಾಟ್ಸ್​ ಆಫ್​ ಲವ್​ ಡಿಯರೆಸ್ಟ್​ ಫ್ರೆಂಡ್​ ಅನು ಎಂದು ಬರೆದು ತಮ್ಮ ಸಹಿಯನ್ನು ಹಾಕಿ ಜಾಕೆಟ್​ನ್ನು ಸ್ವತಃ ತಾವೇ ಅನುಶ್ರೀಗೆ ತೊಡಿಸಿದ್ದಾರೆ ಶಿವಣ್ಣ. ಈ ವಿಚಾರವನ್ನು ಸ್ವತಃ ಅನುಶ್ರೀ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.


ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಮೂರು ಲಕ್ಷಕ್ಕೂ ಅಧಿಕ ವೀವ್ಸ್​ ಸಂಪಾದಿಸಿದೆ.ಹಾಗೂ ಈ ವಿಡಿಯೋ ನೋಡಿದ ಅನೇಕರು ನೀವೇ ಭಾಗ್ಯವಂತರು ಎಂದು ಕಮೆಂಟ್​ ಕೂಡ ಮಾಡ್ತಿದ್ದಾರೆ .

ಇದನ್ನು ಓದಿ : India vs South Africa T20 : ಜುಲೈ 1, 2, 3ರಂದು ಭಾರತ-ದಕ್ಷಿಣ ಆಫ್ರಿಕಾ ಟಿ20 ಪಂದ್ಯದ ಟಿಕೆಟ್ ಹಣ ವಾಪಸ್

ಇದನ್ನೂ ಓದಿ : Jaspreet Bumrah to lead India : ಟೀಮ್ ಇಂಡಿಯಾಗೆ ಬುಮ್ರಾ ನಾಯಕ ?

shivarajkumar gifts jacket to anchor anushree in dance karnataka dance show

Comments are closed.