ದೇಶದ ಪ್ರಮುಖ ಸ್ಮಾರ್ಟ್ ಪೋನ್ ತಯಾರಿಕಾ ಕಂಪೆನಿಯಾಗಿರುವ ಸ್ಯಾಮ್ ಸಂಗ್ ಈಗಾಗಲೇ ವಿಭಿನ್ನ ಪೋನ್ ತಯಾರಿಕೆಯ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಇದೀಗ 600 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೊಬೈಲ್ ಪೋನ್ ಪರಿಚಯಿಸಲು ಸ್ಯಾಮ್ ಸಂಗ್ ಚಿಂತನೆ ನಡೆಸಿದೆ.
ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ ಕಂಪನಿ ಹೊಸ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದೆ. ಹೊಸ ಫೀಚರ್ಗಳನ್ನ ಒಳಗೊಂಡ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸುತ್ತಾ ಬಂದಿದ್ದ ಸ್ಯಾಮ್ಸಂಗ್ ಇದೀಗ ಅತ್ಯಧಿಕ ಮೆಗಾಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೊಬೈಲ್ ನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ಮಾಡುತ್ತಿದೆ.
ಸ್ಯಾಮ್ಸಂಗ್ ಕಂಪನಿ ಹಲವು ಮಾದರಿಯ ಸ್ಮಾರ್ಟ್ ಪೋನ್ ಗಳನ್ನು ಪರಿಚಯಿಸಿದೆ, ಅದ್ರಲ್ಲೂ ಮಡಚುವ ಸ್ಮಾರ್ಟ್ಫೋನ್ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಇದೀಗ ಸ್ಮಾರ್ಟ್ಫೋನ್ನಲ್ಲಿ 600 ಮೆಗಾಫಿಕ್ಸೆಲ್ ಕ್ಯಾಮೆರಾ ಪರಿಚಯಿಸಲು ಚಿಂತನೆ ನಡೆಸಿದೆ.
ಸ್ಯಾಮ್ ಸಂಗ್ ಕಂಪೆನಿ ಬೆಸ್ಟ್ ಕ್ಯಾಮೆರಾವನ್ನು ಸ್ಮಾರ್ಟ್ಫೋನ್ನಿನಲ್ಲಿ ಪರಿಚಯಿಸಿದೆ. ಈಗಾಗಲೇ 48 ಮೆಗಾಫಿಕ್ಸೆಲ್, 64 ಮೆಗಾಫಿಕ್ಸೆಲ್ ಮತ್ತು 108 ಮೆಗಾಫಿಕ್ಸೆಲ್ ಕ್ಯಾಮೆರಾವನ್ನು ಪರಿಚಯಿಸಿದೆ. ಇದೀಗ 600 ಮೆಗಾ ಫಿಕ್ಸೆಲ್ ಕ್ಯಾಮೆರಾ ಹೊಂದಿರುವ ಮೊಬೈಲ್ ತಯಾರಿಸುವುದರ ಜೊತೆಗೆ 4ಕೆ ಮತ್ತು 8 ವಿಡಿಯೋ ಚಿತ್ರಿಸಲು ಸಹಕಾರಿಯಾಗುವಂತೆ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸುತ್ತಿದೆ.
ಸ್ಯಾಮ್ಸಂಗ್ ಸಂಸ್ಥೆಯ ಬಿಸಿನೆಸ್ ತಣಡದ ಮುಖ್ಯಸ್ಥ ಯೋಂಗಿನ್ ಪಾರ್ಕ್ ಈ ಬಗ್ಗೆ ಮಾತನಾಡಿದ್ದು, ಇದೇ ಏಪ್ರಿಲ್ ತಿಂಗಳಿನಲ್ಲಿ ಕಂಪನಿ 600 ಮೆಗಾಫಿಕ್ಸೆಲ್ ಸೆನ್ಸಾರ್ ಪರಿಚಯಿಸುವ ಯೋಜನೆ ಬಗ್ಗೆ ಬಹಿರಂಗಪಡಿಸಿದೆ.