ಕೊರೊನಾ ನಡುವಲ್ಲೇ ಆಂಧ್ರದಲ್ಲಿ ಪತ್ತೆಯಾಯ್ತು ನಿಗೂಢ ರೋಗ : ಒಂದೇ ಗ್ರಾಮದ 228 ಮಂದಿ ಆಸ್ಪತ್ರೆಗೆ ದಾಖಲು

ಆಂಧ್ರ ಪ್ರದೇಶ : ಕೊರೋನಾ ವೈರಸ್ ಸೋಂಕು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಕೊರೊನಾ ಲಸಿಕೆಗಾಗಿ ಸಂಶೋಧನೆಗಳು ನಡೆಯುತ್ತಿದೆ. ದೇಶದಲ್ಲಿಯೂ ಕೊರೊನಾ ನಿಯಂತ್ರಣಕ್ಕೆ ಶತ ಪ್ರಯತ್ನ ನಡೆಸಲಾಗುತ್ತಿದೆ. ಈ ನಡುವಲ್ಲೇ ಆಂಧ್ರದಲ್ಲಿ ಕಾಣಿಸಿಕೊಂಡಿ ರುವ ನಿಗೂಢ ರೋಗ ಆತಂಕವನ್ನು ಸೃಷ್ಟಿಸಿದೆ.

ಹೌದು, ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡು ಸರಿ ಸುಮಾರು 7 ರಿಂದ 8 ತಿಂಗಳೇ ಕಳೆಯುತ್ತ ಬಂಇದೆ. ಆದರೆ ಕೊರೊನಾ ಲಸಿಕೆಯ ಸಂಶೋಧನೆ ಇನ್ನೂ ನಡೆದಿಲ್ಲ. ಕೊರೊನಾ ಆತಂಕದ ಜೊತೆಗೆ ನಿಗೂಢ ರೋಗವೊಂದು ಕಾಣಿಸಿಕೊಂಡಿದೆ. ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ನಿಗೂಢ ರೋಗ ಪತ್ತೆಯಾಗಿದೆ. ಇದ್ದಕ್ಕಿದ್ದಂತೆಯೇ ಜನರು ಅಸ್ವಸ್ಥರಾಗುತ್ತಿದ್ದು, ಅಸ್ವಸ್ಥರಾದ ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಆದರೆ ಯಾವ ರೋಗ ಅನ್ನೋದು ವೈದ್ಯರಿಂದ ಪತ್ತೆ ಹಚ್ಚೋದಕ್ಕೆ ಸಾಧ್ಯವಾಗಿದೆ.

ಎಲೂರು ಸುತ್ತಮುತ್ತ ಪ್ರದೇಶದಲ್ಲಿ ಸುಮಾರು 228 ಮಂದಿ ಇದುವರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿಗೂಢ ರೋಗಕ್ಕೆ ತುತ್ತಾದವರು ಎಲ್ಲಿಯೂ ಪರಸ್ಪರ ಭೇಟಿಯಾಗಿಲ್ಲ, ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಆದರೂ ಕೂಡ ಎಲ್ಲರಿಗೂ ಒಂದೇ ರೀತಿಯ ರೋಗ ಕಾಣಿಸಿಕೊಂಡಿದೆ. ವೃದ್ದರು ಹಾಗೂ ಮಕ್ಕಳಲ್ಲಿಯೇ ನಿಗೂಢ ರೋಗ ಕಾಣಿಸಿಕೊಳ್ಳುತ್ತಿದೆ.

ಆಸ್ಪತ್ರೆಗೆ ದಾಖಲಾಗಿರುವವರ ಪೈಕಿ ಈಗಾಗಲೇ ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಮೇಲೆ ವೈದ್ಯರು ಹದ್ದಿನ ಕಣ್ಣಿಟ್ಟಿದ್ದಾರೆ. ನಿಗೂಢ ರೋಗಕ್ಕೆ ತುತ್ತಾದವರ ರಕ್ತದ ಮಾದರಿಗಳನ್ನು ಈಗಾಗಲೇ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ.

Comments are closed.