SBI FD Interest Rate : ಭಾರತೀಯ ಸ್ಟೇಟ್‌ ಬ್ಯಾಂಕ್ ಗ್ರಾಹಕರಿಗೆ ಸಂತಸದ ಸುದ್ದಿ! ಫಿಕ್ಸೆಡ್‌ ಡೆಪಾಸಿಟ್‌ ಬಡ್ಡಿದರ ಏರಿಕೆ

ಭಾರತೀಯ ಸ್ಟೇಟ್‌ ಬ್ಯಾಂಕ್ (State Bank Of India – SBI) ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ಬ್ಯಾಂಕ್ ನೀಡಿದೆ. ತನ್ನ ಗ್ರಾಹಕರಿಗೆ (SBI FD Interest Rate) ಫಿಕ್ಸೆಡ್‌ ಡೆಪಾಸಿಟ್‌ಗಳ (Fixed Deposits) ಮೇಲೆ ನೀಡುವ ಬಡ್ಡಿ ದರಗಳನ್ನು ಜನವರಿ 15, 2022ರಿಂದ ಅನ್ವಯವಾಗುವಂತೆ 10 ಬಿಪಿಎಸ್‌ (basis points) ಪಾಯಿಂಟ್‌ಗಳವರೆಗೆ ಭಾರತೀಯ ಸ್ಟೇಟ್‌ ಬ್ಯಾಂಕ್  ಏರಿಕೆ ಮಾಡಿದೆ. ಈ ಏರಿಕೆಯು 2 ಕೋಟಿ ರೂಪಾಯಿಗಳಿಗೂ ಕಡಿಮೆ ಮೊತ್ತದ ಫಿಕ್ಸೆಡ್‌ ಡೆಪಾಸಿಟ್‌ಗಳಿಗೆ ಅನ್ವಯವಾಗಲಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್  ತನ್ನ ವೆಬ್‌ಸೈಟ್‌ನಲ್ಲಿ ( State Bank Of India Website) ಅಧಿಕೃತವಾಗಿ ಮಾಹಿತಿ ಒದಗಿಸಿದೆ. ಅಂದಹಾಗೆ ಈ ಬದಲಾವಣೆಗಳು ಈ ಏರಿಕೆಗಳು ಜನವರಿ 15, 2022ರಿಂದ ಅನ್ವಯವಾಗಲಿವೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿಯ ಪ್ರಕಾರ 1 ವರ್ಷದಿಂದ 2 ವರ್ಷಗಳ ಅವಧಿಯ ಠೇವಣಿಗಳ ಬಡ್ಡಿ ದರವನ್ನು ಶೇಕಡಾ 5 ರಿಂದ ಶೇಕಡಾ   5.1ಕ್ಕೆ ಏರಿಸಲಾಗಿದೆ. ಇತರ ಅವಧಿಗಳ ಠೇವಣಿಗಳ ಮೇಲಿನ ಬಡ್ಡಿ ದರಗಳಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್ ಅಧಿಕೃತವಾಗಿ ಮಾಹಿತಿ ನೀಡಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್   5ರಿಂದ 10 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಅತಿ ಹೆಚ್ಚಿನ ಶೇಕಡಾ 5.4ರಷ್ಟು ಬಡ್ಡಿಯನ್ನು ನೀಡುತ್ತಿದ್ದು 2ರಿಂದ 3 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇಕಡಾ 5.1ರಷ್ಟು ಹಾಗೂ 3 ವರ್ಷಗಳಿಂದ 5 ವರ್ಷಗಳ ಅವಧಿಯ ಠೇವಣಿಗಳ ಮೇಲೆ ಶೇಕಡಾ 5.3ರ ದರದಲ್ಲಿ ಬಡ್ಡಿಯನ್ನೂ ತನ್ನ ಗ್ರಾಹಕರಿಗೆ ನೀಡುತ್ತಿದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಹಿರಿಯ ನಾಗರಿಕರು ತಮ್ಮ ಠೇವಣಿಗಳ ಮೇಲೆ 50 ಬಿಪಿಎಸ್‌ಗಳಷ್ಟು (basis point) ಹೆಚ್ಚಿನ ದರದ ಬಡ್ಡಿಗಳನ್ನು ಪಡೆಯಲಿದ್ದಾರೆ ಎಂದು ಈಮೂಲಕ ಬ್ಯಾಂಕ್ ತಿಳಿಸಿದೆ.

ಜೊತೆಗೆ ಖಾಸಗಿ ವಲಯದ ಬ್ಯಾಂಕ್‌ಗಳೂ ಸಹ ಫಿಕ್ಸೆಡ್‌ ಡೆಪಾಸಿಟ್‌ಗಳ ಮೇಲೆ ತಾವು ನೀಡುವ ಬಡ್ಡಿ ದರಗಳಲ್ಲಿ ಏರಿಕೆ ಮಾಡಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್‌ ಹಾಗೂ ಕೋಟಕ್‌ ಮಹಿಂದ್ರಾ ಬ್ಯಾಂಕ್‌ಗಳು ಕ್ರಮವಾಗಿ 12/1/2022ರಿಂದ ಹಾಗೂ 6/1/2022ರಿಂದಲೇ ಹೊಸ ಬಡ್ಡಿ ದರಗಳು ಅನ್ವಯವಾಗಲಿವೆಯೆಂದು ಘೋಷಿಸಿವೆ. ವಿವರಗಳನ್ನು ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: 5 Best Credit Cards : ಕ್ಯಾಶ್‌ಬ್ಯಾಕ್ ನೀಡುವ ಅತ್ಯುತ್ತಮ 5 ಕ್ರೆಡಿಟ್ ಕಾರ್ಡ್‌ಗಳು ಯಾವುವು? ಅವುಗಳು ನೀಡುವ ಕೊಡುಗೆಗಳೇನು?

ಇದನ್ನೂ ಓದಿ: WiFi Router Tips : ವೈಫೈ ರೂಟರ್‌ ನಿರ್ವಹಣೆ ಹೇಗೆ :ಇಲ್ಲಿದೆ ಕೆಲವು ಟಿಪ್ಸ್‌

(SBI FD Interest Rate increased compare with HDFC Bank FD Interest rate check details)

Comments are closed.