Tamil Nadu :15ರಿಂದ 18 ವರ್ಷ ಪ್ರಾಯದ ವಿದ್ಯಾರ್ಥಿಗಳ ಲಸಿಕೆ ಅಭಿಯಾನದಲ್ಲಿ ತಮಿಳುನಾಡು ಸಾಧನೆ

Tamil Nadu :ಕೊರೊನಾ ಮೂರನೇ ಅಲೆಯಿಂದಾಗಿ ದೇಶದಲ್ಲಿ ಕೊರೊನಾ ಸೋಂಕುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಮೂರನೇ ಅಲೆಯಿಂದ ಮಕ್ಕಳಿಗೆ ಅಪಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು 2 ವಾರಗಳ ಹಿಂದೆಯಷ್ಟೇ 15 ರಿಂದ 18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಅನುಮೋದನೆ ನೀಡಿತ್ತು. ಅದರಂತೆ ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ.


ಕೊರೊನಾ ಲಸಿಕೆ ಅಭಿಯಾನ ಆರಂಭಗೊಂಡ ಕೇವಲ 2 ವಾರಗಳಲ್ಲಿ ತಮಿಳುನಾಡು ರಾಜ್ಯವು ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆ. ತಮಿಳುನಾಡಿನಲ್ಲಿ 100 ಪ್ರತಿಶತ 15 ರಿಂದ 18 ವರ್ಷದ ವಿದ್ಯಾರ್ಥಿಗಳು ಕೊರೊನಾ ಲಸಿಕೆಯ ಮೊದಲ ಡೋಸ್​ ಸ್ವೀಕರಿಸಿದ್ದಾರೆ ಎಂದು ತಮಿಳುನಾಡಿನ ಆರೋಗ್ಯ ಸಚಿವ ಮಾ ಸುಬ್ರಮಣಿಯನ್​​ ಘೋಷಣೆ ಮಾಡಿದ್ದಾರೆ. ಕೇವಲ 2 ವಾರಗಳ ಹಿಂದೆಯಷ್ಟೇ 15 ರಿಂದ 18 ವರ್ಷದ ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿದೆ ಎಂಬುದನ್ನು ಮರೆಯುವಂತಿಲ್ಲ.


ಇನ್ನು ಹೆಚ್ಚುತ್ತಿರುವ ಕೊರೊನಾ ಕೇಸ್​ಗಳನ್ನು ಗಮನದಲ್ಲಿಟ್ಟುಕೊಂಡು ತಮಿಳುನಾಡಿನಲ್ಲಿ ನಿನ್ನೆಯಿಂದ ಶಾಲೆಗಳು ಬಂದ್​ ಆಗಿವೆ. ಜನವರಿ 31ರವರೆಗೂ ಶಾಲೆಗಳು ಬಾಗಿಲು ತೆರೆಯುವುದಿಲ್ಲ ಎಂದು ತಮಿಳುನಾಡು ಸರ್ಕಾರ ಮಾಹಿತಿ ನೀಡಿದೆ.


ಶಾಲೆಗಳನ್ನು ಬಂದ್​ ಮಾಡುವುದರ ಜೊತೆಯಲ್ಲಿ 10 ಹಾಗೂ 12ನೇ ತರಗತಿಯ ಮಕ್ಕಳಿಗೆ ಜನವರಿ 19ರಿಂದ ನಡೆಯಬೇಕಿದ್ದ ಪರೀಕ್ಷೆಗಳನ್ನೂ ಮುಂದೂಡಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಇನ್ನಷ್ಟೇ ಘೋಷಣೆಯಾಗಬೇಕಿದೆ.
ಕೋವಿಡ್ 19 ಕೇಸುಗಳನ್ನು ಗಮನದಲ್ಲಿಟ್ಟುಕೊಂಡು 10, 11 ಹಾಗೂ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಸೇರಿಸಿ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಜನವರಿ 31ರವರೆಗೆ ರಜೆ ನೀಡಲಾಗಿದೆ. ಜನವರಿ 19ರಂದು 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಯಬೇಕಿದ್ದ ಪರೀಕ್ಷೆಗಳನ್ನೂ ಮುಂದೂಡಿದ್ದೇವೆ. ಪರಿಷ್ಕೃತ ದಿನಾಂಕ ಸದ್ಯದಲ್ಲಿಯೇ ಪ್ರಕಟವಾಗಲಿದೆ ಎಂದು ತಮಿಳು ಶಿಕ್ಷಣ ಇಲಾಖೆ ಹೇಳಿದೆ. ‘

Tamil Nadu Inoculates 100% Of School Students Aged 15-18 With 1st Dose Of COVID-19 Vaccine

ಇದನ್ನು ಓದಿ : CM Meeting : ಕೊರೋನಾ ತಡೆಗೆ ಮಾರ್ಗಸೂಚಿ : ಸಿಎಂ ಸಭೆಗೆ ತಾಂತ್ರಿಕ ಸಮಿತಿ ಶಿಫಾರಸ್ಸುಗಳ ವಿವರ ಇಲ್ಲಿದೆ

ಇದನ್ನೂ ಓದಿ : omicron and corona : ಕೊರೊನಾ ಹಾಗೂ ಓಮೈಕ್ರಾನ್ ಹೆಚ್ಚಳದ ನಡುವೆ ಹೊರಬಿತ್ತು ಸಮಾಧಾನದ ಸಂಗತಿ

Comments are closed.