Senior Citizen FD Interest Rates 2022: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್‌ ಎಷ್ಟು ಬಡ್ಡಿದರ ನೀಡುತ್ತದೆ ಗೊತ್ತಾ

ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಅತಿ ಮುಖ್ಯ. ಅದು ಅವರನ್ನು ಸ್ವಾವಲಂಬಿಗಳನ್ನಾಗಿಸುತ್ತದೆ. ಅದರಲ್ಲೂ ಹಿರಿಯ ನಾಗರಿಕರಿಗೆ (Senior Citizen) ಇದರ ಅವಶ್ಯಕತೆ ಸ್ವಲ್ಪ ಮಟ್ಟಿಗೆ ಹೆಚ್ಚಿದೆ ಅನ್ನಬಹುದು. ಇತ್ತೀಚೆಗೆ ಸಾರ್ವಜನಿಕ ವಲಯ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು (Bank) ಸ್ಥಿರ ಠೇವಣಿ (Fixed Deposits) ಗಳ ಬಡ್ಡಿ ದರಗಳನ್ನು(Interest Rate) ಪರಿಷ್ಕರಿಸಿದೆ. ಸುರಕ್ಷಿತ ಹೂಡಿಕೆಯ ವಿಷಯ ಬಂದಾಗ ಹಿರಿಯ ನಾಗರಿಕರು ತಮ್ಮ ಆರ್ಥಿಕ ಭದ್ರತೆಗಾಗಿ ಇಡುವ ಸ್ಥಿರ ಠೇವಣಿಗಳ ಮೇಲೆ ನೀಡುವ ಬಡ್ಡಿ ದರಗಳ ಮೇಲೆ ವಿಷಯ ಕೇಂದ್ರೀಕೃತವಾಗುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮೊದಲು ಅಲ್ಲಿ ನೀಡುವ ಬಡ್ಡಿ ದರಗಳ (Senior Citizen FD Interest Rates 2022)ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಪೋಸ್ಟ್ ಆಫೀಸ್‌, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಅಥವಾ ಯೂನಿಯನ್ ಬ್ಯಾಂಕ್‌ಗಳಲ್ಲಿ ತೊಡಗಿಸುವ ಸ್ಥಿರ ಠೇವಣಿಗಳಲ್ಲಿ ನೀಡುವ ಪ್ರಸ್ತುತ ಬಡ್ಡಿದರಗಳು ಎಷ್ಟಿದೆ ಇಲ್ಲಿದೆ ಓದಿ.

ಪೋಸ್ಟ್‌ ಆಫೀಸ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ನೀಡುವ ಬಡ್ಡಿ ದರಗಳು 01-10-2022 ರಿಂದ 31-12-2022 ರ ನಡುವೆ ಮಾಡಿದ ಠೇವಣಿಗಳ ಮೇಲೆ ಮಾತ್ರ ಅನ್ವಯಿಸುತ್ತವೆ. ಇನ್ನು ICICI ಬ್ಯಾಂಕ್‌ ನಲ್ಲಿ ಸೆಪ್ಟೆಂಬರ್ 30 ರಿಂದ ಜಾರಿಗೆ ಬರುವಂತೆ ತನ್ನ ದರವನ್ನು ಪರಿಷ್ಕರಿಸಿದೆ. ಹಿರಿಯ ನಾಗರಿಕರಿಗೆ ಅಸ್ತಿತ್ವದಲ್ಲಿರುವ 0.50% ವಾರ್ಷಿಕ ಹೆಚ್ಚುವರಿ ದರಕ್ಕಿಂತ, ಸೀಮಿತ ಅವಧಿಗೆ 0.10% ಹೆಚ್ಚುವರಿ ಬಡ್ಡಿ ದರವನ್ನು ನೀಡುತ್ತದೆ. ಆಕ್ಸಿಸ್ ಬ್ಯಾಂಕ್ ತನ್ನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿದರವನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ಪರಿಷ್ಕರಿಸಿದೆ. ಆಕ್ಸಿಸ್‌ ಬ್ಯಾಕ್‌ 15 ತಿಂಗಳಿಂದ 2 ವರ್ಷಗಳ ಒಳಗೆ ಮ್ಯಾಚ್ಯುರ್‌ ಆಗುವ FD ಗಳ ಮೇಲೆ ಹೆಚ್ಚಿನ ಅಂದರೆ 6.9% ಬಡ್ಡಿದರ ನೀಡುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪೋಸ್ಟ್ ಆಫೀಸ್‌ಗಳು, ICICI ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಗಳಲ್ಲಿ ನೀಡುವ ಸ್ಥಿರ ಠೇವಣಿಗಳ (FD) ಬಡ್ಡಿದರಗಳ ಹೋಲಿಕೆಯು ಈ ಬ್ಯಾಂಕ್‌ಗಳ ಬಡ್ಡಿದರಗಳಲ್ಲಿ ಇರುವ ಕೆಲವು ಸಣ್ಣ ವ್ಯತ್ಯಾಸಗಳನ್ನು ತೋರಿಸುತ್ತದೆ.

ಅವಧಿಪೋಸ್ಟ್‌ ಆಫೀಸ್‌SBIICICI ಬ್ಯಾಂಕ್‌Axis  ಬ್ಯಾಂಕ್‌Union  ಬ್ಯಾಂಕ್‌
7-45 ದಿನಗಳು3.43.52.75/3.253
46 ದಿನಗಳಿಂದ 179 ದಿನಗಳು4.44/4.753.754.05/4.1
180 ದಿನಗಳಿಂದ 210 ದಿನಗಳು5.055.44.94.6
211 ದಿನಗಳಿಂದ 0 ಒಂದು ವರ್ಷಕ್ಕಿಂತ ಕಡಿಮೆ5.15.44.9/54.6 (5.35 1 ವರ್ಷಕ್ಕೆ)
ಒಂದು ವರ್ಷದಿಂದ 2 ವರ್ಷಗಳ ಒಳಗೆ5.955.5 (1 ವರ್ಷ)6.26.2 ರಿಂದ 6.95.45
2 ವರ್ಷಗಳಿಂದ 3 ವರ್ಷಗಳ ಒಳಗೆ65.7 (2 ವರ್ಷ)6.36.455.5
3 ವರ್ಷದಿಂದ 5 ವರ್ಷಗಳ ಒಳಗೆ6.15.8 (3 ವರ್ಷ)6.66.455.75
5 ವರ್ಷದಿಂದ 10 ವರ್ಷಗಳ ವರಗೆ6.456.7 (5 ವರ್ಷ)6.66.55.8
5 ವರ್ಷದ ಮೇಲೆ ಒಂದು ದಿನ6.456.66.56.2
** (ಇಲ್ಲಿ ನೀಡಿರುವ ಶೇಕಡಾವಾರು ದರಗಳು 2 ಕೋಟಿಗಿಂತ ಕಡಿಮೆ ಹೂಡಿಕೆ ಇರುವ ಸ್ಥಿರ ಠೇವಣಿಗಳ ಮೇಲಿನ ದರಗಳಾಗಿದೆ.)

ಇದನ್ನೂ ಓದಿ: Nokia G11 Plus : ಭಾರತದಲ್ಲಿ ಲಾಂಚ್‌ ಆದ ನೋಕಿಯಾ G11 ಪ್ಲಸ್‌ : 50 MP ಕ್ಯಾಮೆರಾ ಇದರ ವಿಶೇಷತೆ

ಇದನ್ನೂ ಓದಿ: Moto E32 : ಎಂಟ್ರಿ–ಲೆವೆಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ ಮೊಟೊರೊಲಾ; ಬೆಲೆ ಮತ್ತು ವಿಶೇಷತೆಗಳು ಹೀಗಿದೆ….

(Senior Citizen FD Rates 2022 comparison of FD interest rates in different banks)

Comments are closed.