Set Up UPI: ಹಣ ವರ್ಗಾಯಿಸಲು ಯುಪಿಐ ಸೆಟ್‌ ಮಾಡುವುದು ಹೇಗೆ?

BHIM, ಗೂಗಲ್‌ ಪೇ, ಫೋನ್‌ ಪೇ, ಪೇಟಿಎಮ್‌ ಮುಂತಾದ ಆಪ್‌ಗಳು UPI ಮುಖಾಂತರ ಹಣ ವರ್ಗಾಯಿಸುವುದನ್ನು (Set Up UPI) ಅನುವು ಮಾಡಿಕೊಟ್ಟಿದೆ. UPI ಎಂದರೆ ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ ಎಂದು. ಇದನ್ನೂ 2016 ರಲ್ಲಿ ಪ್ರಾರಂಭಿಸಿಲಾಯಿತು. ಇದು ಡಿಜಿಟಲ್‌ ಹಣ ವರ್ಗಾವಣೆಯನ್ನು ಬೆಂಬಲಿಸವುದು. UPI ಅನ್ನು ಸೆಟ್‌ ಮಾಡಲು ಬಳಕೆದಾರರು UPI ಸೌಲಭ್ಯವನ್ನು ನೀಡುವ ಬ್ಯಾಂಕ್‌ ಖಾತೆಯನ್ನು ಹೊಂದಿರಬೇಕು.

BHIM, ಮತ್ತು ಗೂಗಲ್‌ಪೇ, ಫೋನ್‌ಪೇ, ಮತ್ತು ಪೇಟಿಎಮ್‌ ನಂತಹ ಖಾಸಗಿ ವಹಿವಾಟುದಾರರು ಸೇರಿದಂತೆ UPI ಬೆಂಬಲಿಸುವ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಡೌನ್‌ಲೋಡ್‌ ಮಾಡಿಕೊಳ್ಳಬೇಕಾಗುವುದು. ಈ ಅಪ್ಲಿಕೇಶನ್‌ ತನ್ನ ಬಳಕೆದಾರರಿಗೆ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಲು ಕೇಳುತ್ತದೆ. ಅವರು ತಮ್ಮ ಬ್ಯಾಂಕ್‌ ಖಾತೆಯೊಂದಿಗೆ ನೋಂದಾಯಿಸಲಾದ ಮೊಬೈಲ್‌ ಸಂಖ್ಯೆಯನ್ನು ಸಹ ಆಯ್ಕೆ ಮಾಡಬೇಕಾಗುತ್ತದೆ.

ನಂತರ, ಬಳಕೆದಾರರು ಪರಿಶೀಲನೆಯ ನಂತರ ತಮ್ಮ ಬ್ಯಾಂಕ್‌ ಖಾತೆಗಳನ್ನು ಲಿಂಕ್‌ ಮಾಡಬೇಕಾಗುತ್ತದೆ ಮತ್ತು ಅಪ್ಲಿಕೇಶನ್‌ ಅನ್ನು ತೆರಯಲು UPI ಪಿನ್‌ ರಚಿಸಬೇಕು.

ಈಗ UPI ಖಾತೆಯನ್ನು ನೋಂದಾಯಿಸುವ ಪ್ರಕ್ರಿಯೆಯು ಪೂರ್ಣಗೊಳ್ಳುವುದು ಮತ್ತು ವರ್ಚುವಲ್‌ ಪಾವತಿ ವಿಳಾಸವನ್ನು (VPA) ರಚಿಸಲ್ಪಡುವುದು. ಇದು ಬಳಕೆದಾರರಿಗೆ ಹಣವನ್ನು ವರ್ಗಾಯಿಸಲು, ಅವರ ಯುಟಿಲಿಟಿ ಬಿಲ್‌ಗಳನ್ನು ಪಾವತಿಸಲು ಮತ್ತು ವಹಿವಾಟಿನ ಇತಿಹಾಸವನ್ನು(Transaction history) ಪರಶೀಲಿಸಲು ಅನುಮತಿ ನೀಡುತ್ತದೆ. ಇದು QR ಕೋಡ್‌ಗಳ ಮೂಲಕ ಪಾವತಿಗಳನ್ನು ಸಹ ಬೆಂಬಲಿಸುತ್ತದೆ.

ಇದನ್ನೂ ಓದಿ :WhatsApp : ಕಾಂಟಾಕ್ಟ್‌ ನಂಬರ್‌ ಸೇವ್‌ ಮಾಡ್ದೆನೇ ವ್ಯಾಟ್ಸಅಪ್‌ನಲ್ಲಿ ಮೆಸೇಜ್‌ ಕಳುಹಿಸಬಹುದು! ಹೇಗೆ ಗೊತ್ತೇ‌?

ಇದನ್ನೂ ಓದಿ :Sony Wireless Headphone :ಹೊಸ ವೈಶಿಷ್ಟ್ಯಗಳೊಂದಿಗೆ ಈ ವಾರ ಬಿಡುಗಡೆಯಾಗಲಿರುವ ಸೋನಿಯ ಹೊಸ WH-1000XM5 ವೈರ್‌ಲೆಸ್‌ ಹೆಡ್‌ಫೋನ್‌!

(Set Up UPI How to set up UPI for money transfer)

Comments are closed.