ಬೆಂಗಳೂರು : ಕೊರೊನಾ ವೈರಸ್ ಎಫೆಕ್ಟ್ ನಿಂದ ನ್ಯಾಯಾಲಯಗಳು ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೆಲವು ದಿನಗಳ ಮಟ್ಟಿಗೆ ವಾರಂಟ್ ನಂತಹ ಗಂಭೀರ ಪ್ರಕರಣಗಳಲ್ಲೂ ತುಸು ಮೆತ್ತಗಾಗಲು ನಿರ್ಧರಿಸಿದೆ. ನ್ಯಾಯಾಲಯ ಕಡ್ಡಾಯ ಹಾಜರಾತಿಯಿಂದಲೂ ವಿನಾಯಿತಿ ನೀಡಿದೆ. ಆದರೆ ಬ್ಯಾಂಕು, ತೆರಿಗೆ ಇಲಾಖೆಯ ವಸೂಲಾತಿ ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಮೊದಲೇ ಹಳಿ ತಪ್ಪಿದ ಆರ್ಥಿಕತೆಗೆ ಕೊರೊನಾ ಬರೆ ಎಳೆದಿದೆ. ಬಹುತೇಕ ಎಲ್ಲಾ ವ್ಯವಹಾರ, ವ್ಯಾಪಾರಗಳು ನೆಲಕಚ್ಚಿವೆ. ಜನರು ಮನೆಯಿಂದ ಹೊರ ಬರೋದಕ್ಕೂ ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜನರು ತೆರಿಗೆ ಹಾಗೂ ಬ್ಯಾಂಕಿನ ಪಾವತಿ ಮಾಡಲು ಕಷ್ಟಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ತೆರಿಗೆ ಹಾಗೂ ಬ್ಯಾಂಕು ಅಧಿಕಾರಿಗಳು ಎಂದಿನಂತೆ ತಮ್ಮ ಕಾರ್ಯ ಮುಂದುವರಿಸಿದ್ದಾರೆ. ಬ್ಯಾಂಕ್ ಸಿಬ್ಬಂಧಿ ಸಾಲವಸೂಲಾತಿಗೆ ಮುಂದಾಗಿದ್ರೆ, ತೆರಿಗೆ ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ಮುಂದಾಗಿರೋದು ಉದ್ಯಮಿಗಳನ್ನು, ವ್ಯಾಪಾರಿಗಳನ್ನು ಸಂಕಷ್ಟಕ್ಕೆ ನೂಕಿದೆ. ಕೆಲವು ದಿನಗಳ ಮಟ್ಟಿಗಾದರೂ ವಿನಾಯಿತಿ ನೀಡುವ ಮನಸ್ಥಿತಿ ಈ ಅಧಿಕಾರಿಗಳಿಲ್ಲ.

ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಿದೆ. ಪರಿಸ್ಥಿತಿ ಹೀಗಿರುವಾ ಉದ್ಯಮಿಗಳಿಗೆ, ವ್ಯಾಪಾರಿಗಳಿಗೆ ಸ್ವಲ್ಪ ದಿನದ ಮಟ್ಟಿಗಾದರೂ ವಿನಾಯಿತಿ ನೀಡುವುದು ಅವಶ್ಯಕ. ಅದನ್ನು ಬಿಟ್ಟು ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ದೇಶದಲ್ಲಿ ಎಂದಿನಂತೆ ಕಾರ್ಯನಿರ್ವಹಿಸುವುದು ನ್ಯಾಯವೇ ಅನ್ನೋದು ಉದ್ಯಮಿಗಳ ಪ್ರಶ್ನೆ.