ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ನಾಗರಿಕರು ತಮ್ಮ ಆಧಾರ್ ಕಾರ್ಡ್ (Aadhaar Card) ಗಳ ಫೋಟೊಕಾಪಿ ಗಳನ್ನು ಯಾವುದೇ ಸಂಸ್ಥೆಯೊಂದಿಗೆ ಹಂಚಿಕೊಳ್ಳಬೇಡಿ ಅಥವಾ ವಿತರಿಸಬೇಡಿ ಎಂದು ಎಚ್ಚರಿಸಿದೆ. ಏಕೆಂದರೆ ಅವುಗಳನ್ನು ದುರುಪಯೋಗಪಡಿಸಿಕೊಳ್ಳಬಹುದು. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಪತ್ರಿಕಾ ಪ್ರಕಟಣೆಯಲ್ಲಿ, ‘ನಿಮ್ಮ ಆಧಾರ್‌ನ ಫೋಟೊಕಾಪಿಯನ್ನು ಯಾವುದೇ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಡಿ (UIDAI Cautions) ಏಕೆಂದರೆ ಅದನ್ನು ದುರುಪಯೋಗಪಡಿಸಿಕೊಳ್ಳಬಹುದು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಆಧಾರ್ ಸಂಖ್ಯೆಯ ಕೊನೆಯ 4 ಅಂಕೆಗಳನ್ನು ಮಾತ್ರ ಪ್ರದರ್ಶಿಸುವ ಮುಖವಾಡದ ಆಧಾರ್ (Masked Aadhaar) ಅನ್ನು ನಾಗರಿಕರು ಬಳಸಬಹುದು ಎಂದು ಸ್ಪಷ್ಟೀಕರಿಸಿದೆ. ಇದನ್ನು UDIAI ನ ಅಧಿಕೃತ ವೆಬ್‌ಸೈಟ್ http://myaadhaar.uidai.gov.in ನಿಂದ ಡೌನ್‌ಲೋಡ್ ಮಾಡಬಹುದಾಗಿದೆ. ಡೌನ್‌ಲೋಡ್ ಮಾಡಲು ಮುಂದುವರಿಯುವ ಮೊದಲು ‘ನಿಮಗೆ ಮುಖವಾಡದ (Masked Aadhaar) ಆಧಾರ್ ಬೇಕೇ’ ಎಂಬ ಆಯ್ಕೆ ಮಾಡಲು UIDAI ಸೂಚಿಸಿದೆ.
ಯಾವುದೇ ಆಧಾರ್ ಸಂಖ್ಯೆಯನ್ನು http://myaadhaar.uidai.gov.in/verifyAadhaar ನಲ್ಲಿ ಪರಿಶೀಲಿಸಬಹುದು ಎಂದು UIDAI ಹೇಳಿದೆ.
ಇದರ ಜೊತೆಗೆ ಯಾವುದೇ ಆಧಾರ್ ಸಂಖ್ಯೆಯನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಲು mAadhaar ಮೊಬೈಲ್ ಅಪ್ಲಿಕೇಶನ್ ನಲ್ಲಿ QR ಕೋಡ್ ಅನ್ನು ಸ್ಕಾನ್ ಬಳಸಿಕೊಂಡು ಇ–ಆಧಾರ್ ಅಥವಾ ಆಧಾರ್ ಪತ್ರ ಅಥವಾ ಆಧಾರ್ PVC ಕಾರ್ಡ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಬಹುದಾಗಿದೆ ಎಂದು ವಿವರಿಸಿದೆ. ನಾಗರಿಕರು ಇ–ಆಧಾರ್ ಅನ್ನು ಡೌನ್‌ಲೋಡ್ ಮಾಡಲು ಇಂಟರ್‌ನೆಟ್ ಕೆಫೆ ಅಥವಾ ಕಿಯೋಸ್ಕ್‌ನಂತಹ ಸಾರ್ವಜನಿಕ ಕಂಪ್ಯೂಟರ್ ಬಳಸದಂತೆ ಸರ್ಕಾರವು ತಿಳಿ ಹೇಳಿದೆ. ಒಂದು ವೇಳೆ ಯಾರಿಗಾದರೂ ಅಂತಹ ಸಂದರ್ಭವಿದ್ದರೆ ಡೌನ್‌ಲೋಡ್ ಮಾಡಿದ ಕಂಪ್ಯೂಟರ್‌ನಿಂದ ಇ–ಆಧಾರ್‌ನ ಎಲ್ಲಾ ಪ್ರತಿಗಳನ್ನು ಶಾಶ್ವತವಾಗಿ ಅಳಿಸುವುದನ್ನು ಅವರು ಖಚಿತಪಡಿಸಿಕೊಳ್ಳಬೇಕು.
ಸಾರ್ವಜನಿಕ ಪ್ರಕಟಣೆಯು UIDAI ನಿಂದ ಬಳಕೆದಾರರ ಪರವಾನಿಗೆ (User License) ಪಡೆದ ಸಂಸ್ಥೆಗಳು ಮಾತ್ರ ವ್ಯಕ್ತಿಯ ಗುರುತಿನ ಚೀಟಿ ಆಧಾರ್ ಅನ್ನು ಬಳಸಬಹುದು. ಹೊಟೇಲ್‌ಗಳು ಅಥವಾ ಫಿಲ್ಮ್ ಹಾಲ್‌ಗಳಂತಹ ಪರವಾನಿಗೆ ಪಡೆಯದ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್‌ನ ಪ್ರತಿಗಳನ್ನು ಸಂಗ್ರಹಿಸಲು ಅಥವಾ ಇರಿಸಿಕೊಳ್ಳು ಅನುಮತಿಸುವುದಿಲ್ಲ. ಇದು ಆಧಾರ್ ಕಾಯಿದೆ 2016ರ ಅಡಿಯಲ್ಲಿ ಅಪರಾಧವಾಗಿದೆ. ಒಂದು ವೇಳೆ ಖಾಸಗೀ ಘಟಕಗಳು ನಿಮ್ಮ ಆಧಾರ್ ಕಾರ್ಡ್ ಅನ್ನು ನೋಡಲು ಒತ್ತಾಯಿಸಿದರೆ ಅಥವಾ ಆಧಾರ್ ಕಾರ್ಡ್‌ನ ಫೋಟೊಕಾಪಿಯನ್ನು ಕೇಳಿದರೆ, ದಯವಿಟ್ಟು ಅವರರು UIDAI ನಿಂದ ಮಾನ್ಯವಾದ ಬಳಕೆದಾರರ ಪರವಾನಿಗೆಯನ್ನು ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ ಎಂದು ಹೇಳಿದೆ.
ಇದನ್ನೂ ಓದಿ : Blue Aadhaar Card : ಆಧಾರ್ ಕಾರ್ಡ್ ಗೊತ್ತು : ಆದರೆ ನೀಲಿ ಆಧಾರ್ ಕಾರ್ಡ್ ಬಗ್ಗೆ ನಿಮಗೆ ಗೊತ್ತಾ ?
ಇದನ್ನೂ ಓದಿ : A Laptop Or A Tablet : ವಿದ್ಯಾರ್ಥಿಗಳಿಗೆ ಯಾವುದು ಉತ್ತಮ? ಲ್ಯಾಪ್‌ಟಾಪ್ ಅಥವಾ ಟಾಬ್ಲೆಟ್!!
(UIDAI Cautions do not Share your Aadhaar photocopy with any organization)