India Cricket Team : ಟೀಮ್ ಇಂಡಿಯಾ ವಿಶ್ವಕಪ್ ಗೆಲ್ಲಲು ಕೋಚ್ ದ್ರಾವಿಡ್ ಬೊಂಬಾಟ್ ಪ್ಲಾನ್

ಬೆಂಗಳೂರು : ಟೀಮ್ ಇಂಡಿಯಾ ಕೊನೆಯ ಬಾರಿ ಐಸಿಸಿ ಟಿ20 ವಿಶ್ವಕಪ್ ( ICC T20 CWC) ಗೆದ್ದದ್ದು 2007ರಲ್ಲಿ. ಅದೇ ಮೊದಲು ಅದೇ ಕೊನೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆದ ನಂತರ ಭಾರತ ಮತ್ತೆ ಚುಟುಕು ವಿಶ್ವಕಪ್ ಗೆದ್ದಿಲ್ಲ. 2007ರ ನಂತರ ಟಿ20 ವಿಶ್ವಕಪ್”ನಲ್ಲಿ ಟೀಮ್ ಇಂಡಿಯಾ 2014ರಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು.

ಅದಾದ ಬಳಿಕ ನಡೆದ ಎರಡೂ ವಿಶ್ವಕಪ್’ಗಳಲ್ಲಿ ಭಾರತ ಪ್ರಶಸ್ತಿ ಗೆದ್ದಿಲ್ಲ. ಭಾರತದಲ್ಲೇ ನಡೆದ 2016ರ ಟೂರ್ನಿಯಲ್ಲಿ ಭಾರತ ಸೆಮಿಫೈನಲ್’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋತಿತ್ತು. ಹಾಗಾದ್ರೆ ಭಾರತ ಮತ್ತೆ ಟಿ20 ವಿಶ್ವಕಪ್ ಗೆಲ್ಲುವುದು ಯಾವಾಗ..? ಇದೇ ವರ್ಷ ಆಸ್ಟ್ರೇಲಿಯಾದದಲ್ಲಿ ನಡೆಯುವ ಟಿ20 ವಿಶ್ವಕಪ್’ನಲ್ಲಿ ಭಾರತ (India Cricket Team) ಚಾಂಪಿಯನ್ ಆಗುತ್ತಾ..? ಗೊತ್ತಿಲ್ಲ. ಆದ್ರೆ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸಲು ಕೋಚ್ ರಾಹುಲ್ ದ್ರಾವಿಡ್ (Rahul Dravid) ಬೊಂಬಾಟ್ ಪ್ಲಾನ್ (Rahul Dravid Master plan) ಮಾಡಿದ್ದಾರೆ.

“ದಿ” ಗ್ರೇಟ್ ವಾಲ್ ಇಂಡಿಯಾ ರಾಹುಲ್ ದ್ರಾವಿಡ್ ಕೆಲವೇ ತಿಂಗಳುಗಳ ಹಿಂದೆ ಟೀಮ್ ಇಂಡಿಯಾ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. 2013ರ ನಂತ್ರ ಭಾರತ ಒಮ್ಮೆಯ ಐಸಿಸಿ ಟ್ರೋಫಿ ಗೆದ್ದಿಲ್ಲ. ಆ ಕೊರಗನ್ನು ನೀಗಿಸಲು ಪಣ ತೊಟ್ಟಿರುವ ದ್ರಾವಿಡ್, ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಜಬರ್ದಸ್ತ್ ರಣತಂತ್ರ ಹೆಣೆದಿದ್ದಾರೆ. ಆ ರಣತಂತ್ರದ ಹೆಸರು “ಹಾರ್ದಿಕ್ ಪಾಂಡ್ಯ, ದಿ ಫಿನಿಷರ್”.

ಐಪಿಎಲ್’ನಲ್ಲಿ (IPL 2022) ಗುಜರಾತ್ ಟೈಟನ್ಸ್ (Gujarat Titans) ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವ ಹಾರ್ದಿಕ್ ಪಾಂಡ್ಯ (Hardik Pandya) ಮೇಲೆ ಭಾರೀ ಕುತೂಹಲವಿದೆ. ಕಾರಣ ಐಪಿಎಲ್’ನಲ್ಲಿ ಪಾಂಡ್ಯ ಗುಜರಾತ್ ಟೈಟನ್ಸ್ ಪರ 4ನೇ ಕ್ರಮಾಂಕದಲ್ಲಿ ಆಡಿ 15 ಪಂದ್ಯಗಳಿಂದ 4 ಅರ್ಧಶತಕಗಳ ಸಹಿತ 131ರ ಸ್ಟ್ರೈಕ್’ರೇಟ್’ನಲ್ಲಿ 487 ರನ್ ಗಳಿಸಿದ್ದರು. ಹೀಗಾಗಿ ಟೀಮ್ ಇಂಡಿಯಾದಲ್ಲೂ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲೇ ಆಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ವು. ಆದರೆ ಇದಕ್ಕೆಲ್ಲಾ ಅಂತ್ಯ ಹಾಡಿರುವ ದ್ರಾವಿಡ್, ಹಾರ್ದಿಕ್ ಪಾಂಡ್ಯ ಕೆಳ ಕ್ರಮಾಂಕದಲ್ಲಿ “ಫಿನಿಷರ್” ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದಿದ್ದಾರೆ.

“ಹಾರ್ದಿಕ್ ಪಾಂಡ್ಯ ಅತ್ಯುತ್ತಮ ಆಲ್ರೌಂಡರ್. ಭಾರತ ತಂಡದ ಪರ ಅವರು ಈ ಹಿಂದೆ ಉತ್ತಮ ಆಟವಾಡಡಿದ್ದಾರೆ. ವೈಟ್ ಬಾಲ್’ನಲ್ಲಿ ಹಾರ್ದಿಕ್ ಅತ್ಯಂತ ಯಶಸ್ವಿ ಆಟಗಾರ. ಐಪಿಎಲ್’ನಲ್ಲೂ ಒಳ್ಳೆಯ ಫಾರ್ಮ್ ತೋರಿಸಿದ್ದಾರೆ. ಆದರೆ ಐಪಿಎಲ್’ನಲ್ಲಿ ನಿಭಾಯಿಸಿದ ಪಾತ್ರವನ್ನೇ ಭಾರತ ತಂಡದಲ್ಲೂ ನಿಭಾಯಸಲಾಗದು. ಇಲ್ಲಿ ಟೀಮ್ ಕಾಂಬಿನೇಷನ್ ಮುಖ್ಯ. ಹೀಗಾಗಿ ಹಾರ್ದಿಕ್ ಪಾಂಡ್ಯ “ಫಿನಿಷರ್” ಜವಾಬ್ದಾರಿ ನಿಭಾಯಿಸಲಿದ್ದಾರೆ”.

  • ರಾಹುಲ್ ದ್ರಾವಿಡ್, ಭಾರತ ಕ್ರಿಕೆಟ್ ತಂಡದ ಕೋಚ್.

ಜಗತ್ತಿನ ಶ್ರೇಷ್ಠ ಮ್ಯಾಚ್ ಫಿನಿಷರ್ ಎಂ.ಎಸ್ ಧೋನಿ (MS Dhoni) ನಿವೃತ್ತಿಯಾದ ನಂತರ ಭಾರತ ತಂಡ ಒಳ್ಳೆಯ ಫಿನಿಷರ್ ಸೇವೆಯಿಂದ ವಂಚಿತವಾಗಿದೆ. ಈಗ ಧೋನಿ ಸ್ಥಾನವನ್ನು ತುಂಬಲು ಹಾರ್ದಿಕ್ ಪಾಂಡ್ಯರನ್ನು ಕೋಚ್ ದ್ರಾವಿಡ್ ಸಜ್ಜುಗೊಳಿಸುತ್ತಿದ್ದಾರೆ. ದ್ರಾವಿಡ್ ಅವರ ಈ ತಂತ್ರ ಫಲಕೊಟ್ಟಲ್ಲಿ ಐಸಿಸಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ನನಸಾಗಬಹುದು.

ಹೆಚ್ಚಿನ ಕ್ರೀಡಾ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

ಇದನ್ನೂ ಓದಿ : Ranji Trophy ಕ್ವಾರ್ಟರ್ ಫೈನಲ್: ಕರ್ನಾಟಕವನ್ನು ಸೋಲಿಸಿದ್ದೇ ಮನೀಶ್ ಪಾಂಡೆ ಮತ್ತು ಮಯಾಂಕ್ ಅಗರ್ವಾಲ್

Coach Rahul Dravid Master plan to win Team India World Cup

Comments are closed.