WhatsApp Business App : ವಾಟ್ಸ್‌ಅಪ್‌ ಸಣ್ಣ ವ್ಯಾಪಾರಗಳು ಡಿಜಿಟಲೀಕರಣದಲ್ಲಿ ತೊಡಗಲು ಹೇಗೆ ಸಹಾಯ ಮಾಡಲಿದೆ ಗೊತ್ತಾ?

ವಾಟ್ಸ್‌ಅಪ್‌(WhatsApp) ಮೆಟಾ (Meta)ಒಡೆತನದ ಮೆಸ್ಸೇಜಿಂಗ್‌ ವೇದಿಕೆ. ಭಾರತ ಇದರ ಅತಿ ದೊಡ್ಡ ಮಾರುಕಟ್ಟೆ. ಮಂಗಳವಾರ ಪ್ರಾರಂಭವಾದ SBMಸಾಥಿ ಉತ್ಸವ್‌ ಸಣ್ಣ ಉದ್ಯಮಗಳ ಬೆಳವಣಿಗೆಗೆ ವಾಟ್ಸಪ್‌ ಬ್ಯುಸಿನೆಸ್‌ ಅಪ್ಲಿಕೇಶನ್‌ (WhatsApp Business App) ಅನ್ನು ಪಡೆಯಲು ನೆರವು ನೀಡುತ್ತದೆ. ಜೈಪುರದ ಜೊಹ್ರಿ ಮತ್ತು ಬಾಪು ಬಜಾರ್‌ನಲ್ಲಿ ಪ್ರಾರಂಭಿಸಲಾದ ಪ್ರಾಯೋಗಿಕ ಯೋಜನೆಯು ಈಗಾಗಲೇ 500 ಕ್ಕೂ ಹೆಚ್ಚು ವ್ಯವಹಾರಗಳನ್ನು ಆನ್‌ಬೋರ್ಡ್‌ ಮಾಡಿದೆ. ವ್ಯಾಪಾರ್ ಅಪ್ಲಿಕೇಶನ್‌ನ ವಿವಿಧ ವೈಶಿಷ್ಟ್ಯಗಳನ್ನು ಹತೋಟಿಗೆ ತರಲು ಮತ್ತು ವ್ಯವಹಾರಗಳನ್ನು ಸುಲಭಗೊಳಿಸಿ ಉತ್ತೇಜಿಸಲು ಅನುವು ಮಾಡಿಕೊಡುತ್ತದೆ ಎಂದು ವಾಟ್ಸ್‌ಅಪ್‌ ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಾರಂಭಿಕ ಹೆಜ್ಜೆಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ ಜೋಶ್‌ ಟಾಕ್ಸ್‌ನ ಸಹಭಾಗಿತ್ವದಲ್ಲಿ ಈ ವರ್ಷದ ಮೇ ತಿಂಗಳಲ್ಲಿ $ 3.5 ಮಿಲಿಯನ್‌ ಹಣವನ್ನು ಸಂಗ್ರಹಿಸಿದೆ.

ಸಣ್ಣ ಉದ್ಯಮಗಳು ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿದೆ ಮತ್ತು ತಂತ್ರಜ್ಞಾನವು ಅವರ ವ್ಯವಹಾರಗಳನ್ನು ಮತ್ತಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ. ಸಾಂಕ್ರಾಮಿಕ ಸಮಯದಲ್ಲಿ, ಹಲವಾರು ಸಣ್ಣ ವ್ಯಾಪಾರಿಗಳು ತಮ್ಮ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲು ವ್ಯಾಟ್ಸ್‌ಅಪ್‌ ಬ್ಯುಸಿನೆಸ್‌ ಅಪ್ಲಿಕೇಶನ್‌ ನಂತಹ ಸರಳ ವೇದಿಕೆಗಳನ್ನು ಬಳಸಿಕೊಂಡು ಅಭಿವೃದ್ಧಿ ಹೊಂದುತ್ತಿರುವುದನ್ನು ನಾವು ನೋಡಿದ್ದೇವೆ ಎಂದು ವಾಟ್ಸ್‌ಅಪ್‌ ಇಂಡಿಯಾದ ಮುಖ್ಯಸ್ಥ ಅಭಿಜಿತ್‌ ಬೋಸ್‌ ಹೇಳಿದ್ದಾರೆ.

ಕಿರು, ಮಧ್ಯಮ, ಮತ್ತು ಸಣ್ಣ ಉದ್ಯಮಗಳಿಗೆ ತಂತ್ರಜ್ಞಾನ(Technology for MSMEs ): ತರಬೇತಿ ಪಡೆದ ಸ್ವಯಂಸೇವಕರು ವ್ಯವಹಾರಗಳಿಗೆ ಡಿಜಿಟಲ್‌ ತರಬೇತಿಯನ್ನು ನೀಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ವಾಟ್ಸಪ್‌ ಬಿಸಿನೆಸ್‌ ಅಪ್ಲಿಕೇಶನ್‌ನಲ್ಲಿ ಡಿಜಿಟಲ್‌ ಉಪಸ್ಥತಿಯನ್ನು ನಿರ್ಮಿಸಲು ಅವರಿಗೆ ಸಹಾಯ ಮಾಡಲು ಇನ್‌ಕಮಿಂಗ್‌ ಲೀಡ್ಸ್‌ ಮತ್ತು ಪ್ರಶ್ನೆಗಳನ್ನು ಉತ್ತಮವಾಗಿ ನಿರ್ವಹಿಸಲು, ಉತ್ಪನ್ನ/ ಸೇವೆಗಳ ಪ್ರದರ್ಶನ ಮತ್ತು ಮಾರುಕಟ್ಟೆಯನ್ನು ಪ್ರಮುಖವಾಗಿ ಆನ್‌ಲೈನ್‌ ಪರಿಕರಗಳನ್ನು ಬಳಸುವವರಿಗಾಗಿ ನಿರ್ಮಿಸುವುದಾಗಿದೆ.

ತರಬೇತಿ ಪಡೆದ ಸ್ವಯಂಸೇವಕರು ವಾಟ್ಸ್‌ಅಪ್‌ ಬ್ಯುಸಿನೆಸ್‌ ಆಪ್‌ನಲ್ಲಿ ಡಿಜಿಟಲೀಕರಣವನ್ನು ನಿರ್ಮಿಸುವ ಮೂಲಕ ವ್ಯವಹಾರಗಳಿಗೆ ಒಂದೊಂದಾಗಿ ಡಿಜಿಟಲ್‌ ತರಬೇತಿ ನೀಡುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.

ಸಾಂಪ್ರದಾಯಿಕ ಕಲೆಗಳು ಮತ್ತು ಕರಕುಶಲ ವಸ್ತುಗಳು, ಆಭರಣಗಳು, ಫಾಷನ್‌ ಮತ್ತು ಉಡುಪುಗಳು, ಆಹಾರ ಮತ್ತು ಪಾನೀಯ ಮಳಿಗೆಗಳು ಮತ್ತು ಇತರ ವ್ಯಾಪಾರಗಳು ವಾಟ್ಸ್‌ಅಪ್‌ ಬ್ಯಸಿನೆಸ್‌ ಅಪ್ಲಿಕೇಶನ್‌ನ ವಿವಿಧ ವೈಶಿಷ್ಟ್ಯಗಳನ್ನು ಬಳಸುವ ಬಗ್ಗೆ ತರಬೇತಿ ನೀಡುತ್ತಿದೆ. ಮತ್ತು ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬಹುದು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ ಎಂದು ವಾಟ್ಸ್‌ಅಪ್‌ ಹೇಳಿದೆ.

ಇದನ್ನೂ ಓದಿ : RBI Repo Rate : ಆರ್ ಬಿ ಐ ರೆಪೋ ದರ ಏರಿಕೆ; ಜನ ಸಾಮಾನ್ಯರ ಮೇಲೆ ಪರಿಣಾಮಗಳೇನು ?

ಇದನ್ನೂ ಓದಿ :WhatsApp : ನಕಲಿ ವಾಟ್ಸಪ್‌ ಅಕೌಂಟ್‌ಗಳ ಮೇಲೆ ಎಚ್ಚರವಿರಲಿ!! ಅವುಗಳಿಂದ ದೂರವಿರಿ

(WhatsApp Business App WhatsApp launches new initiative for small businesses to go digital)

Comments are closed.