Sandeep Unnikrishnan : ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗೆ ಅವಮಾನ : ಪಠ್ಯವನ್ನು ಸದ್ದಿಲ್ಲದೇ ಕೈಬಿಟ್ಟಿದೆ ಬರಗೂರು ಸಮಿತಿ

ಬೆಂಗಳೂರು : ಸದ್ಯ ರಾಜ್ಯದಲ್ಲಿ ತೀವ್ರಗೊಂಡಿರುವ ಪಠ್ಯಪುಸ್ತಕ ವಿವಾದ ತಣ್ಣಗಾಗುವ ಲಕ್ಷಣವೇ ಕಾಣುತ್ತಿಲ್ಲ. ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಸಮಿತಿ ಮೇಲಿನ ಆರೋಪಗಳಿಗೆ ಬೇಸತ್ತ ಸರ್ಕಾರ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಸಮಿತಿಯನ್ನೇ ವಿಸರ್ಜನೆಗೊಳಿಸಿದೆ. ಇದರ ಬೆನ್ನಲ್ಲೇ ಈಗ ರೋಹಿತ್ ಚಕ್ರತೀರ್ಥಗೂ ಮುನ್ನ ಸಾಹಿತಿ ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ರಚನೆಯಾಗಿದ್ದ ಸಮಿತಿಯ ಎಡವಟ್ಟುಗಳು ಬಯಲಿಗೆ ಬರಲಾರಂಭಿಸಿದ್ದು, ಬರಗೂರು ಸಮಿತಿ ಈ ದೇಶವನ್ನು ಆಪತ್ತಿನಿಂದ ಕಾಪಾಡಿದ ಮೇಜರ್ ಸಂದೀಪ್ ಉನ್ನಿಕೃಷ್ಣನ್ (Sandeep Unnikrishnan) ಪಾಠವನ್ನು ಕೈಬಿಟ್ಟಿದ್ದು ಈಗ ಬಹಿರಂಗವಾಗಿದೆ.

ಮುಂಬೈನ ತಾಜ್ ಹೊಟೇಲ್ ಮೇಲೆ ನಡೆದಿದ್ದ ಭಯೋತ್ಪಾದಕ ದಾಳಿ ವೇಳೆ ಮೇಜರ್ ಸಂದೀಪ್ ಉನ್ನಿಕೃಷ್ಣನ್ ದೇಹದ ಹಂಗು ತೊರೆದು ಹೋರಾಡಿ ಅಮಾಯಕರನ್ನು ರಕ್ಷಿಸಿ ಹುತಾತ್ಮರಾಗಿದ್ದರು. ಈ ವೀರ ಸೇನಾನಿ ಕೇರಳ ಮೂಲದವರಾಗಿದ್ದರು ಕರ್ನಾಟಕದೊಂದಿಗೆ ಬಾಂಧವ್ಯ ಹೊಂದಿದ್ದರು. ಇಂದಿಗೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪೋಷಕರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇಂಥ ವೀರ ಸೇನಾನಿ ಮಕ್ಕಳಿಗೆ ಸ್ಪೂರ್ತಿಯಾಗಬೇಕೆಂಬ ಕಾರಣಕ್ಕೆ ಪಠ್ಯದಲ್ಲಿ ಅವರ ಪಾಠವನ್ನು ಸೇರಿಸಲಾಗಿತ್ತು. ಆದರೆ ಬರಗೂರು ನೇತೃತ್ವದ ಸಮಿತಿ ವೀರ ಸೇನಾನಿಯ ಪಠ್ಯವನ್ನೇ ಕೈಬಿಟ್ಟಿದ್ದು ಈ ಬೆಳಕಿಗೆ ಬಂದಿದೆ.

ವೀರ ಮರಣವನ್ನಪ್ಪಿದ್ದ ಹುತಾತ್ಮ ಯೋಧನ ಪಠ್ಯ ಕಿತ್ತೆಸೆದಿದ್ದ ಬರಗೂರು ಸಮಿತಿ ಈ ಬಗ್ಗೆ ಸರ್ಕಾರಕ್ಕೆ ಯಾವುದೇ ವಿವರಣೆಯನ್ನು ಕೂಡ ನೀಡಿರಲಿಲ್ಲ. ಕರಾಳ ರಾತ್ರಿ ಗದ್ಯ ಪಾಠದಲ್ಲಿ ಮೇಜರ್ ಸಂದೀಪ್‌ ಉನ್ನಿಕೃಷ್ಣನ್ ಬಗ್ಗೆ ಪಠ್ಯ ಇತ್ತು. 8ನೇ‌ ತರಗತಿಯ ದ್ವಿತೀಯ ಭಾಷೆ ಕನ್ನಡದಲ್ಲಿದ್ದ ಕರಾಳ ರಾತ್ರಿ ಪಾಠವನ್ನು ಅಳವಡಿಸಲಾಗಿತ್ತು. ಈ ಪಠ್ಯದಲ್ಲಿ ತಾಜ್ ಹೊಟೇಲ್ ಮೇಲೆ ಹೇಗೆ ಭಯೋತ್ಪಾದಕರು ಅಟ್ಯಾಕ್ ಮಾಡಿದ್ರು, ಹೇಗೆ ಭಯೋತ್ಪಾದಕರನ್ನ ಸೈನಿಕರು ಹೊಡೆದು ರುಳಿಸಿದ್ರು. ಸಂದೀಪ್ ಉನ್ನಿಕೃಷ್ಣನ್ ಅವರ ಆಪರೇಷನ್ ಹೇಗಿತ್ತು ಎಂಬುದರ ಬಗ್ಗೆ ಪಠ್ಯವಿತ್ತು. ಮುಡಂಬಡಿತ್ತಾಯ ಸಮಿತಿ ಅಳವಡಿಸಿದ್ದ ಪಠ್ಯ ತೆಗೆದು ಹಾಕಿದ್ದ ಬರಗೂರು ಸಮಿತಿ ಯಾವ ಕಾರಣಕ್ಕೆ ಮೇಜರ್ ಉನ್ನಿಕೃಷ್ಣನ್ ಪಠ್ಯ ಕೈಬಿಡಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಿಲ್ಲ.

ಶಿಕ್ಷಣ ಇಲಾಖೆಗೆ ವಿವರ ನೀಡದ ಬರಗೂರು ರಾಮಚಂದ್ರಪ್ಪ ಸಮಿತಿ, ರೋಹಿತ್‌ ಚಕ್ರತೀರ್ಥ ಸಮಿತಿ ಮಾಹಿತಿ ಕೇಳಿದಾಗಲೂ ವಿವರಣೆ ನೀಡಿಲ್ಲ ಎನ್ನಲಾಗಿದೆ. ಅಲ್ಲದೇ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಾಠ ಕೈಬಿಟ್ಟ ಸಮಿತಿ ಬ್ಲಡ್ ಗ್ರೂಪ್ ಎಂಬ ಪಾಠವನ್ನು ಪಠ್ಯಕ್ಕೆ ಸೇರ್ಪಡೆಗೊಳಿಸಿದೆ. ಈ ವಿಚಾರ ಈಗ ಜನರ ಆಕ್ರೋಶಕ್ಕೆ ಕಾರಣವಾಗಿದ್ದು,ಯಾವ ಕಾರಣಕ್ಕಾಗಿ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಪಠ್ಯ ಕೈಬಿಡಲಾಯ್ತು..? ಯಾರ ಓಲೈಕೆಗಾಗಿ ಸಂದೀಪ್ ಉನ್ನಿಕೃಷ್ಣನ್ ಪಠ್ಯ ಕೈಬಿಡಲಾಯ್ತು..? ಪಠ್ಯ ‌ಕೈ ಬಿಟ್ಟು ವೀರ ಯೋಧನಿಗೆ ಬರಗೂರು ರಾಮಚಂದ್ರಪ್ಪ ಅವಮಾನ ಮಾಡಿದ್ದ್ಯಾಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ : Rohit Chakratirtha : ಸಂಶೋಧಕನಿಗೆ ಮತಕ್ಕಿಂತ ಸತ್ಯ ಮುಖ್ಯ: ಬಿಜೆಪಿ ವಿರುದ್ಧವೇ ತಿರುಗಿಬಿದ್ದ ರೋಹಿತ್ ಚಕ್ರತೀರ್ಥ

ಇದನ್ನೂ ಓದಿ : PUC College Start : ನಾಳೆಯಿಂದ ಪಿಯು ಕಾಲೇಜು ಆರಂಭ : ಹಿಜಾಬ್ ಗೆ ನೋ ಎಂಟ್ರಿ

Insult to Major Sandeep Unnikrishnan Text Book Issues

Comments are closed.