Wheat price: ಗೋಧಿ ಮತ್ತು ಹಿಟ್ಟಿನ ಬೆಲೆ ಬಗ್ಗೆ ಮೋದಿ ಸರಕಾರದಿಂದ ಮಹತ್ವದ ನಿರ್ಧಾರ

ನವದೆಹಲಿ: (Wheat price) ದೇಶದಲ್ಲಿನ ಹಣದುಬ್ಬರವನ್ನು ತಗ್ಗಿಸಲು ಮೋದಿ ಸರಕಾರ ನಿರಂತರವಾಗಿ ಪ್ರಯತ್ನ ನಡೆಸುತ್ತಿದ್ದು, ಮೋದಿ ಸರಕಾರ ಈಗ ಹಣದುಬ್ಬರವನ್ನು ತಗ್ಗಿಸಲು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಈಗಾಗಲೇ ಗೋಧಿ ಹಾಗೂ ಅದರ ಹಿಟ್ಟಿನ ಬೆಲೆ ಹೆಚ್ಚಳವಾಗಿದ್ದು, ಇದನ್ನು ಸರ್ಕಾರ ಗಮನದಲ್ಲಿರಿಸಿಕೊಂಡು ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯನ್ನು ಇಳಿಸಲು ಈಗ ಕ್ರಮ ಕೈಗೊಂಡಿದೆ.

ವಾಸ್ತವವಾಗಿ ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯನ್ನು ತಗ್ಗಿಸಲು ಕೇಂದ್ರ ಸರಕಾರ ಹೆಚ್ಚುವರಿ ಇಪ್ಪತ್ತು ಲಕ್ಷ ಟನ್‌ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಗೋಧಿ ಹಾಗೂ ಅದರ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಜನವರಿ ೨೫ ರಂದು ತನ್ನ ಬಫರ್‌ ಸ್ಟಾಕ್‌ ನಿಂದ ಮೂವತ್ತು ಲಕ್ಷ ಟನ್‌ ಗೋಧಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಭಾರತೀಯ ಆಹಾರ ನಿಗಮ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಎರಡು ಮಿಲಿಯನ್‌ ಟನ್‌ ಗೋಧಿಯನ್ನು ಮುಕ್ತ ಮಾರುಕಟ್ಟೆಗೆ ತರಲು ಸರಕಾರ ನಿರ್ಧರಿಸಿದೆ.

ಈ ಸ್ಟಾಕ್‌ ಅನ್ನು ಹರಾಜಿನ ಮೂಲಕ ಹಿಟ್ಟು ಗಿರಣಿಗಾರರು/ ಖಾಸಗಿ ವ್ಯಾಪಾರಿಗಳು/ ಬೃಹತ್‌ ಖರೀದಿದಾರರು ಗೋಧಿ ಉತ್ಪನ್ನಗಳ ತಯಾರಿಕೆಗೆ ಮಾರಾಟ ಮಾಡಲಾಗುತ್ತದೆ. ಗೋಧಿ ದಾಸ್ತಾನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಾಸ್ತಾವನೆಯನ್ನು ಸಚಿವರ ಗುಂಪು ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿದೆ.

ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ” ಇದುರೆಗೂ ಐವತ್ತು ಲಕ್ಷ ಟನ್‌ ಗೋಧಿಯನ್ನು ಓಎಮ್‌ಎಸ್‌ ಎಸ್‌ ಅಡಿಯಲ್ಲಿ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇಪ್ಪತ್ತು ಲಕ್ಷ ಟನ್‌ ಗೋಧಿಯ ಹೆಚ್ಚುವರಿ ಮಾರಾಟದ ಜೊತೆಗೆ ಮೀಸಲು ಬೆಲೆಯಲ್ಲಿ ಕಡಿತದಂತಹ ನಿರ್ಧಾರಗಳು ಗ್ರಾಹಕರಿಗೆ ಗೋಧಿ ಮತ್ತು ಗೋಧಿ ಉತ್ಪನ್ನಗಳ ಮಾರುಕಟ್ಟೆ ಬೆಲೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : UK visa for indians: ಗುಡ್ ನ್ಯೂಸ್ : ಭಾರತೀಯರಿಗೆ 2,400 ವೀಸಾ ಪ್ರಕಟಿಸಿದ ಯುಕೆ

ಇದನ್ನೂ ಓದಿ : Employees Provident Fund Organisation : ಈಗ ಇಪಿಎಫ್‌ಒ ​​ಚಂದಾದಾರರು ಹೆಚ್ಚಿನ ಪಿಂಚಣಿಗಾಗಿ ಆಯ್ಕೆ ಸುಲಭ : ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

Wheat price: An important decision by the Modi government regarding the price of wheat and flour

Comments are closed.