IAS vs IPS: ಆರ್‌ ಟಿ ಐ ಕಾರ್ಯಕರ್ತನಿಗೆ ರೂಪಾ ಅವಾಜ್:‌ ಸ್ಫೋಟಕ ಆಡಿಯೋ ವೈರಲ್‌

ಬೆಂಗಳೂರು : (IAS vs IPS) ಇಬ್ಬರು ಉನ್ನತ ಅಧಿಕಾರಿಗಳಾದ ಐಎಎಸ್‌ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್‌ ಡಿ. ರೂಪಾ ಇಬ್ಬರ ವೈಯಕ್ತಿಕ ಕಿತ್ತಾಟ ದಿನೇ ದಿನೇ ಒಂದೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಈಗ ಆರ್ ಟಿಐ ಕಾರ್ಯಕರ್ತನೊಬ್ಬರಿಗೆ ಡಿ ರೂಪಾ ಅವರು ಅವಾಜ್‌ ಹಾಕಿದ ಆಡಿಯೋ ಒಂದು ವೈರಲ್‌ ಆಗಿದೆ. ಆರ್‌ಟಿಐ ಕಾರ್ಯಕರ್ತ ಎನ್. ಗಂಗರಾಜು ಎಂಬುವವರ ಜೊತೆ ಐಪಿಎಸ್ ಅಧಿಕಾರಿ ರೂಪಾ ಮಾತನಾಡಿರುವ ಆಡಿಯೋ ಇದಾಗಿದ್ದು, ಆಡಿಯೋದಲ್ಲಿ ರೋಹಿಣಿ ಸಿಂಧೂರಿಗೆ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ.

ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಗಂಗರಾಜು ಶಾಸಕ ಸಾ.ರಾ.ಮಹೇಶ್ ಸೇರಿದಂತೆ ಭೂ ಅಕ್ರಮಗಳ ಬಗ್ಗೆ ದೂರು ನೀಡಿದ್ದರು. ದೂರು ಆಧರಿಸಿ ರೋಹಿಣಿ ತನಿಖೆಗೆ ಆದೇಶಿಸಿದ್ದರು. ಗಂಗರಾಜು ಮಾಹಿತಿ ಪಡೆಯಲು ಸರ್ವೇ ಆಯುಕ್ತ ಮುನೇಶ್ ಮೌದ್ಗಿಲ್ ಭೇಟಿಯಾಗಿದ್ದ, ಈ ವೇಳೆ ರೂಪಾ ಕಾಲ್ ಮಾಡಿ ಅವಾಜ್ ಹಾಕಿದ್ದಾರೆ. ಆಡಿಯೋದಲ್ಲಿ ರೂಪಾ ಅವರು, ಗಂಗಾರಾಜು ಅವರಿಗೆ ಕರೆ ಮಾಡಿ ಮನೆ ಹಾಳು ಮಾಡುವ ರೋಹಿಣಿಗೆ ಯಾಕೆ ಸಪೋರ್ಟ್‌ ಮಾಡ್ತೀಯಾ? ನೀನು ದುಡ್ಡು ಮಾಡಿಕೊಳ್ಳುತ್ತಿದ್ದೀಯಾ ಎಂದು ಹೇಳಿರುವುದು ತಿಳಿದುಬಂದಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಗಂಗರಾಜು ಅವರು ಇಂದು ಸುದ್ದಿಗೋಷ್ಠಿ ನಡೆಸಿ ಆಡಿಯೋ ದಾಖಲೆ ಬಿಡುಗಡೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ರೂಪಾ ಮೌದ್ಗಿಲ್ ಅವರು ಆರೋಪಗಳ ಸುರಿಮಳೆಯನ್ನೇ ಮಾಡಿದ್ದಾರೆ. ಈ ಪೈಕಿ ಬಹುತೇಕ ಆರೋಪಗಳು ಈ ಹಿಂದೆಯೇ ರೋಹಿಣಿ ಸಿಂಧೂರಿ ಅವರ ವಿರುದ್ಧ ಕೇಳಿ ಬಂದಿತ್ತು. ಶಾಸಕ ಸಾರಾ ಮಹೇಶ್ ಜೊತೆಗಿನ ಜಗಳ, ಮೈಸೂರು ಡಿಸಿ ಆಗಿದ್ದಾಗ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು, ಡಿ. ಕೆ. ರವಿ ಆತ್ಮಹತ್ಯೆ ಪ್ರಕರಣದ ವೇಳೆ ರೋಹಿಣಿ ಅವರ ಹೆಸರು ಕೇಳಿ ಬಂದದ್ದು. ಹೀಗೆ ಹಲವು ಆರೋಪಗಳನ್ನ ರೂಪಾ ಮೌದ್ಗಿಲ್ ಮಾಡಿದ್ದಾರೆ.

ಆದರೆ ಕೆಲವು ಐಎಎಸ್ ಹಾಗೂ ಐಪಿಎಸ್ ಪುರುಷ ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಅವರು ಕಳಿಸಿದ್ದಾರೆ ಎನ್ನಲಾದ ಕೆಲವು ಖಾಸಗಿ ಫೋಟೋಗಳನ್ನ ರೂಪಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ತಮ್ಮ ಖಾಸಗಿ ಫೋಟೋಗಳನ್ನ ಸಾರ್ವಜನಿಕವಾಗಿ ಪ್ರಕಟ ಮಾಡಿದ ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ಹರಿಹಾಯ್ದಿದ್ದಾರೆ. ರೂಪಾ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ವರ್ತನೆ ಮಾಡ್ತಿದ್ದಾರೆ ಅಂತಾ ಟೀಕಿಸಿದ್ಧಾರೆ.

ಇದನ್ನೂ ಓದಿ : IPS Roopa VS IAS Rohini: ರೋಹಿಣಿ ಸಿಂಧೂರಿ,‌ ರೂಪಾ ಮೌದ್ಗಿಲ್ ವೈಯಕ್ತಿಕ ಕಿತ್ತಾಟ : ಎಚ್ಚರಿಕೆ ಕೊಟ್ಟ ಕಾನೂನು ಸಚಿವ

ಇದನ್ನೂ ಓದಿ : ಮುಂದಿನ ತಿಂಗಳು ಬೆಂಗಳೂರಿಗೆ ಬರಲಿದೆ ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್

ಇದನ್ನೂ ಓದಿ : UKG student fail case: ಆಕ್ರೋಶಕ್ಕೆ ಮಣಿದ ಶಿಕ್ಷಣ ಸಂಸ್ಥೆ: ಫೇಲ್‌ ಆಗಿದ್ದ ಯುಕೆಜಿ ವಿದ್ಯಾರ್ಥಿ ಪಾಸ್‌

IAS vs IPS: Roopa Awaaz for RTI activist: Explosive audio goes viral

Comments are closed.