Deepika Padukone : ಪತಿ ರಣವೀರ್​ ಸಿಂಗ್​​ ಉಡುಪನ್ನು ಮೈಕ್​ಗೆ ಹೋಲಿಸಿದ ದೀಪಿಕಾ ಪಡುಕೋಣೆ

ಬಾಲಿವುಡ್​​​ ನಟ ರಣವೀರ್​ ಸಿಂಗ್​ ತಮ್ಮ ನಟನಾ ಕೌಶಲ್ಯಗಳಿಗಿಂತ ಹೆಚ್ಚಾಗಿ ತಮ್ಮ ವಿಚಿತ್ರ ಹಾಗೂ ವಿಶಿಷ್ಠ ಉಡುಪಿನ ಶೈಲಿ ಮೂಲಕವೇ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ರಂಗ್​ಭಿರಂಗಿ ಉಡುಪುಗಳ ಮೂಲಕವೇ ರಣವೀರ್​ ಸಿಂಗ್​​ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿ ಇರ್ತಾರೆ. ಇವರ ವಿಚಿತ್ರ ಡ್ರೆಸ್​ ನೋಡಿದ ಅನೇಕರು ಟ್ರೋಲ್​ಗಳನ್ನು ಮಾಡೋದುಂಟು. ಈ ಬಾರಿ ಖುದ್ದು ನಟಿ ದೀಪಿಕಾ ಪಡುಕೋಣೆಯೇ (Deepika Padukone) ತಮ್ಮ ಪತಿಯ ಕಾಲೆಳೆದಿದ್ದಾರೆ.

ಈ ತಾರಾ ಜೋಡಿ ಇನ್ನೇನು ಕೆಲವೇ ದಿನಗಳಲ್ಲಿ 83 ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​ ದೇವ್​​ ಜೀವನ ಚರಿತ್ರೆ ಆಧಾರಿತ ಸಿನಿಮಾ ಇದಾಗಿದ್ದು ಭಾರತವು ವಿಶ್ವಕಪ್​ನ್ನು ಎತ್ತಿ ಹಿಡಿಯುವ ಹಿಂದಿನ ಎಲ್ಲಾ ಪ್ರಯತ್ನಗಳನ್ನು ಎಳೆ ಎಳೆಯಾಗಿ ತೋರಿಸಲಾಗಿದೆ.

ಸಿನಿಮಾ ಪ್ರಮೋಷನ್​​ನಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್​ ಸಿಂಗ್​​ ದುಬೈನಲ್ಲಿದ್ದಾರೆ. ಸಿನಿಮಾದ ನಿರ್ದೇಶಕ ಕಬೀರ್ ಖಾನ್​ ಜೊತೆಯಲ್ಲಿ ದುಬೈಗೆ ತೆರಳಿದ ಈ ಜೋಡಿ ಮಾಧ್ಯಮಗಳ ಎದುರು ಕಾಣಿಸಿಕೊಂಡಿದೆ. ಇಲ್ಲೂ ಸಹ ರಣವೀರ್​ ಸಿಂಗ್​ ವಿಭಿನ್ನ ಉಡುಪಿನ ಮೂಲಕ ಮತ್ತೊಮ್ಮೆ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿನಿಮಾ ಪ್ರಮೋಷನ್​ಗೆಂದು ತೆರಳಿದ್ದ ವೇಳೆಯಲ್ಲಿ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿಯ ಕಾಲೆಳೆದಿದ್ದಾರೆ. ಮೈಕ್​ ಮುಂದೆ ಕುಳಿತ ದೀಪಿಕಾ ಅಲ್ಲೇ ಇದ್ದ ಬಂಗಾರ ಬಣ್ಣದ ಮೈಕ್​ನತ್ತ ಕೈ ತೋರಿಸುತ್ತಾ ಈ ಮೈಕ್​​ ನಿಮ್ಮ ಡಿಸ್ಕೋ ಔಟ್​ಫಿಟ್​ಗೆ ಮ್ಯಾಚ್​ ಆಗುವಂತಿದೆ ಎಂದು ಹೇಳಿದ್ದಾರೆ.


ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ನೆಟ್ಟಿಗರು ದೀಪಿಕಾ ಪಡುಕೋಣೆ ಸೆನ್ಸ್​ ಆಫ್​ ಹ್ಯೂಮರ್​ಗೆ ಭಲೆ ಎಂದಿದ್ದಾರೆ. ಅಂದಹಾಗೆ ಈ ಸಿನಿಮಾ ಡಿಸೆಂಬರ್ 24ರಂದು ತೆರೆ ಕಾಣುತ್ತಿದೆ. ಈ ಸಿನಿಮಾದಲ್ಲಿ ನಟ ರಣವೀರ್​ ಸಿಂಗ್​ ಕಪಿಲ್​ ದೇವ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ದೀಪಿಕಾ ಪಡುಕೋಣೆ ಕಪಿಲ್​ ಪತ್ನಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಹಿಂದಿ ಮಾತ್ರವಲ್ಲದೇ ತಮಿಳು , ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲೂ ತೆರೆ ಕಾಣುತ್ತಿದೆ.

ಇದನ್ನು ಓದಿ : Ragini Dwivedi Malayalam Movie : ಮಲೆಯಾಳಂಗೆ ಹಾರಿದ ತುಪ್ಪದ ಬೆಡಗಿ : ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರಾಗಿಣಿ

ಇದನ್ನೂ ಓದಿ :Niveditha Gowda : ಅಮ್ಮ ಅಜ್ಜಿ ಜೊತೆ ಹೆಜ್ಜೆ ಹಾಕಿದ ನಿವೇದಿತಾ ಗೌಡ : ಸೋಷಿಯಲ್ ಮೀಡಿಯಾ ದಲ್ಲಿ ವಿಡಿಯೋ ವೈರಲ್

Deepika Padukone quirky comment on husband Ranveer Singh’s disco outfit will leave you in splits – WATCH

Comments are closed.