EPFO Nomination Filing : ಇಪಿಎಫ್​​ಓ ಇ ಫೈಲಿಂಗ್​​ ಕೊನೆಯ ದಿನದ ಗಡುವು ವಿಸ್ತರಣೆ

EPFO Nomination Filing : ಪಿಎಫ್​ ಚಂದಾದಾರರಿಗೆ ಪ್ರಮುಖ ಹಣಕಾಸು ವಿವರಕ್ಕೆ ನೀಡಲಾಗಿದ್ದ ಗಡುವನ್ನು ಕೇಂದ್ರ ಸರ್ಕಾರ ಮುಂದೂಡಿದೆ. ಇಪಿಎಫ್​ ಪೋರ್ಟಲ್​​ಗಳಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕೆವೈಸಿ, ಜಿಎಸ್​ಟಿ ರಿರ್ಟನ್ಸ್​ ಸಲ್ಲಿಸಬೇಕಾದವರಿಗೆ ಕಾಲಾವಕಾಶ ಸಿಕ್ಕಂತೆಯೇ ಇಪಿಎಫ್​ಓ ನಾಮಿನೇಷನ್​ ಸಲ್ಲಿಕೆಗೂ ಕಾಲಾವಕಾಶ ಸಿಕ್ಕಂತಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಇಪಿಎಫ್​ಓ, ಈ ಹಿಂದೆ ಇ ನಾಮಿನೇಷನ್​ ಸಲ್ಲಿಕೆಗೆ ಡಿಸೆಂಬರ್​ 31ರವರೆಗೆ ಗಡುವು ನೀಡಲಾಗಿತ್ತು. ಆದರೆ ಇದೀಗ ಇಪಿಎಫ್​ ಪೋರ್ಟಲ್​ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿರೋದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಡಿಸೆಂಬರ್​ 31ರ ಬಳಿಕವೂ ಇ ನಾಮಿನೇಷನ್​ ಸಲ್ಲಿಸಬಹುದಾಗಿದೆ ಎಂದು ಹೇಳಿದೆ. ಇದು ಮಾತ್ರವಲ್ಲದೇ ಆದಾಯ ತೆರಿಗೆ ರಿರ್ಟನ್ಸ್​ ಸಲ್ಲಿಕೆ ಅವಧಿಯೂ ವಿಸ್ತರಣೆಯಾಗಲಿದೆ ಎನ್ನಲಾಗಿದೆ. ಆದರೆ ಈ ಎಲ್ಲಾ ಅವಧಿ ಮುಂದೂಡಿಕೆಗೆ ಕೊನೆಯ ದಿನಾಂಕ ಯಾವುದು ಎನ್ನುವುದು ಈವರೆಗೆ ಬಹಿರಂಗವಾಗಿಲ್ಲ. ಆದಷ್ಟು ಬೇಗ ಇ ನಾಮಿನೇಷನ್​ ಪೂರ್ಣಗೊಳಿಸಿ ಎಂದಷ್ಟೇ ಇಪಿಎಫ್​ಓ ಹೇಳಿದೆ.

ಇಪಿಎಫ್​ಓ ಪೋರ್ಟಲ್​​ನಲ್ಲಿ ಅತಿಯಾಗಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅನೇಕರು ದೂರು ನೀಡಿದ್ದರು. ಇದನ್ನು ಪರಿಗಣಿಸಿದ ಇಪಿಎಫ್​ಓ ಕೊನೆಯ ದಿನಾಂಕವನ್ನೇ ಮುಂದೂಡಿದೆ. 2020-21ನೇ ಸಾಲಿನ ವಾರ್ಷಿಕ ರಿರ್ಟನ್ಸ್​ ಫೈಲಿಂಗ್​​ಗೆ ಡಿಸೆಂಬರ್​ 31ರವರೆಗೆ ಗಡುವು ನೀಡಲಾಗಿತ್ತು. ಆದ್ರೀಗ ಈ ಅವಧಿಯನ್ನು ಫೆಬ್ರವರಿ 28ರವರೆಗೆ ಮುಂದೂಡಲಾಗಿದೆ. ಬ್ಯಾಂಕ್​ಗಳಲ್ಲಿ ಕೆವೈಸಿ ಅಪ್​ಡೇಟ್​ ಮಾಡಲು ಮಾರ್ಚ್​ 31ರವರೆಗೆ ಸಮಯಾವಕಾಶ ನೀಡಿ ಆರ್​ಬಿಐ ಪ್ರಕಟಣೆ ಹೊರಡಿಸಿದೆ.

ದೇಶದಲ್ಲಿ ಸಂಬಳ ಪಡೆಯುವ ಕೆಲಸ ಮಾಡುವ ಬಹುತೇಕ ಎಲ್ಲಾ ಉದ್ಯೋಗಿಗಳು ಭವಿಷ್ಯ ನಿಧಿ ಖಾತೆಯನ್ನು ಹೊಂದಿರುತ್ತಾರೆ. ಈ ಖಾತೆಗೆ ಪ್ರತಿ ತಿಂಗಳು ನಿಮ್ಮದೇ ಸಂಬಳದಿಂದ ಒಂದಿಷ್ಟು ಹಣ ಹಾಗೂ ನೀವು ಕೆಲಸ ಮಾಡುತ್ತಿರುವ ಸಂಸ್ಥೆಯ ಕಡೆಯಿಂದ ಅಷ್ಟೇ ಮೊತ್ತದ ಹಣವನ್ನು ಜಮೆ ಮಾಡಲಾಗುತ್ತದೆ. ಇದನ್ನು ನೀವು ನಿವೃತ್ತಿ ಬಳಿಕ ಬಳಕೆ ಮಾಡಬಹುದು. ಅಥವಾ ಸಂಕಷ್ಟದ ಸಮಯದಲ್ಲಿ ಬಳಸಿಕೊಳ್ಳಬಹುದಾಗಿದೆ.

ಇದನ್ನು ಓದಿ : Mukesh Ambani : ರಿಲಯನ್ಸ್​ ಕಂಪನಿಗೆ ಶೀಘ್ರದಲ್ಲೇ ಹೊಸ ಮುಖ್ಯಸ್ಥ: ಮಹತ್ವದ ಸುಳಿವು ನೀಡಿದ ಮುಕೇಶ್​ ಅಂಬಾನಿ

ಇದನ್ನೂ ಓದಿ : Job Alert in Flipkart Bengaluru: ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಾವಕಾಶ; ಜವಾಬ್ದಾರಿಯು ಹುದ್ದೆ, ಓರ್ವ ಅಭ್ಯರ್ಥಿಗೆ ಮಾತ್ರ ಅವಕಾಶ

EPFO Nomination Filing : You can file EPF e-nomination after Dec 31 too

Comments are closed.