What is eSim : ಇ-ಸಿಮ್ ಇದ್ರೆ ಈಗ ಬಳಸುವ ಭೌತಿಕ ಸಿಮ್ ಬೇಕಿಲ್ಲ; ಹಾಗಿದ್ರೆ ಏನಿದು ಇ-ಸಿಮ್? ಹೇಗೆ ಖರೀದಿಸುವುದು?

ದುಬಾರಿ ಬೆಲೆ ಹಾಗೂ ಹೊಸ ಹೊಸ ಫೀಚರ್ಸ‌ನಿಂದ ಸದಾ ಸುದ್ದಿಯಲ್ಲಿರುವ ಆ್ಯಪಲ್ ಇದೀಗ ಮತ್ತೊಂದು ಹೊಸ ಪ್ರಯೋಗಕ್ಕೆ ಮುನ್ನುಡಿ ಇಟ್ಟಿದೆ. ಐಫೋನ್‌ನ ಹೊಸ ಆವೃತ್ತಿ ಐ ಫೋನ್14 ಇ-ಸಿಮ್ ಎಂಬ ಹೊಸ ಫೀಚರ್ಸ್ (What is eSim) ಹೊಂದಿದೆ. ಲೈಕ್ ಆದ ಮಾಹಿತಿಗಳ ಪ್ರಕಾರ ಈ ಫೋನಲ್ಲಿ ಯಾವುದೇ ಸಿಮ್ ಕಾರ್ಡ್ ಸ್ಲೋಟ್ ಇರುವುದಿಲ್ಲ. ಈ ಟ್ರೆಂಡ್ ಒಮ್ಮೆ ಶುರುವಾದಲ್ಲಿ ಮತ್ತೆ ಉಳಿದ ಎಲ್ಲಾ ಮೊಬೈಲ್ ಬ್ರ್ಯಾಂಡ್ ಇದನ್ನೇ ಫಾಲೋ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇ -ಸಿಮ್ ಅನ್ನುವುದು ಹೊಸ ಕಾನ್ಸೆಪ್ಟ್ ಆಗಿದೆ. ಇದುವರೆಗೂ ಯಾರು ಕಂಡರಿಯದ ಈ ಹೊಸ ಫೀಚರ್ಸ್ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.

ಇ-ಸಿಮ್: ಹಾಗಂದ್ರೇನು?
ಸಬ್‌ಸ್ಕ್ರೈಬರ್ಸ್ ಐಡೆಂಟಿಟಿ ಮಾಡ್ಯೂಲ್ ಎನ್ನುವುದು ಸಿಮ್ ಕಾರ್ಡ್‌ನ ವಿಸ್ತೃತ ರೂಪವಾಗಿದೆ. ಇ-ಸಿಮ್ ಕೂಡ ಸಿಮ್ ಕಾರ್ಡ್‌ನ ಡಿಜಿಟಲ್ ಸ್ವರೂಪವಾಗಿದೆ. ಇದು ಸ್ಮಾರ್ಟ್ ಫೋನ್, ವಾಚು ಹಾಗೂ ಇತರ ಡಿವೈಸ್‌ಗಳನ್ನು ಡಿಜಿಟಲ್ ಆಗಿ ಕನೆಕ್ಟ್ ಮಾಡುತ್ತದೆ. ಇದಕ್ಕಾಗಿ ಯಾವುದೇ ಸಿಮ್ ಕಾರ್ಡ್ ಖರೀದಿ ಮಾಡುವ ಅಗತ್ಯವಿಲ್ಲ. ಬದಲು ಇ ಸಿಮ್ ಡೌನ್ಲೋಡ್ ಮಾಡಿ ಪ್ರೊಫೈಲ್ ಕ್ರಿಯೇಟ್‌ ಮಾಡಿದರೆ ಸಾಕು.

ಇದಕ್ಕಾಗಿ ಹತ್ತಿರದ ಆಪರೇಟರ್ ಸಂಪರ್ಕಿಸಿ ಇ-ಸಿಮ್ ರಿಜಿಸ್ಟರ್ ಮಾಡಬೇಕು.ಆಗ ಒಂದು ಕೋಡ್ ನಿಮಗೆ ಲಭಿಸುತ್ತದೆ. ಆ ಕೋಡ್ ಬಳಸಿ ಸುಲಭವಾಗಿ ನಿಮ್ಮ ಫೋನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಇ-ಸಿಮ್ ಡೌನ್ಲೋಡ್ ಮಾಡಿಕೊಳ್ಳಬಹುದು.

ಉಪಯೋಗಗಳು
ಮುಖ್ಯವಾಗಿ ಇ-ಸಿಮ್ ಕಾರ್ಡ್ ಡಿಜಿಟಲ್ ಆಗಿರುವುದರಿಂದ ಕಳೆದು ಹೋಗುವ ಭಯವಿಲ್ಲ. ಹಾಗೆ ಇದು ವಾಟರ್ ಪ್ರೂಫ್ ಆಗಿದೆ. ಬ್ಯಾಟರಿ ಉಳಿತಾಯ ಮಾಡಲು ಇದು ಬೆಸ್ಟ್ ಆಗಿದೆ.
ಇದರ ದೊಡ್ಡ ಸಮಸ್ಯೆ ಎಂದರೆ ಫೋನ್ ಬದಲಿಸುವಾಗ ಪ್ರತಿ ಬಾರಿ ನೆಟ್ವರ್ಕ್ ಆಪರೇಟರ್ ಸಂಪರ್ಕಿಸಬೇಕು.

ಯಾವೆಲ್ಲಾ ಫೋನುಗಳು ಈ ಸೌಲಭ್ಯ ಬೆಂಬಲಿಸುತ್ತಿವೆ?
ಐಫೋನ್ ಎಕ್ಸ್‌ಆರ್ ಬಿಡುಗಡೆ ನಂತರ ಬಹುತೇಕ ಐಫೋನ್‌ಗಳು ಇ-ಸಿಮ್ ಬಳಸುತ್ತಿವೆ. ಇವಿಷ್ಟೇ ಅಲ್ಲದೆ, ಸ್ಯಾಮ್ ಸಂಗ್ ಗಾಲಕ್ಸಿ ಎಸ್ ಸಿರೀಸ್ ಕೆಲವು ಪೋನುಗಳಲ್ಲಿ ಈ ಸೌಲಭ್ಯ ಕಾಣಬಹುದು. ಭಾರತದಲ್ಲಿ ಏರ್ಟೆಲ್, ಜಿಯೋ, ವಿ, ಕಂಪೆನಿಗಳು ತಮ್ಮ ಗ್ರಾಹಕರಿಗೆ ಇ ಸಿಮ್ ಫೀಚರ್ಸ್ ನೀಡುತ್ತವೆ. ಎಂಟಿಎನ್ಎಲ್ ಹಾಗೂ ಬಿಎಸ್‌ಎನ್‌ಎಲ್ ಪ್ರಸ್ತುತ ಈ ಫೀಚರ್ ಹೊಂದಿಲ್ಲ.

ಇ ಸಿಮ್ ಪಡೆಯುವುದು ಹೇಗೆ?
ಇ ಸಿಮ್ ರಿಜಿಸ್ಟರ್ ಮಾಡಲು ಮೊದಲಿಗೆ ನೆಟ್ವರ್ಕ್ ಆಪರೇಟರ್ ಸಂಪರ್ಕಿಸಿ ನಂತರ ಪ್ರೊಫೈಲ್ ಕ್ರಿಯೇಟ್ ಮಾಡಬೇಕು.

ಇದನ್ನೂ ಓದಿ: Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ‌ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು

ಇದನ್ನೂ ಓದಿ: Water Politics : 33 ಕೋಟಿ ಅನುದಾನ ಒದಗಿಸಿದ ಮಾಜಿ ಸಚಿವನಿಗೆ ನೋ ಎಂಟ್ರಿ..!

What is eSim : Apple has come up with new e sims for its iPhone

Comments are closed.