ಭಾನುವಾರ, ಏಪ್ರಿಲ್ 27, 2025
Homebusinessಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ

ಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ಕೆಲಸ ಮಾಡದಿದ್ರೆ ಜಮೆ ಆಗಲ್ಲ ಹಣ

- Advertisement -

Yuvanidhi Yojana : ಯುವನಿಧಿ ಯೋಜನೆಯ ಮೂಲಕ ನಿರುದ್ಯೋಗ ಯುವಕ, ಯುವತಿಯರಿಗೆ ರಾಜ್ಯ ಸರಕಾರ ನಿರುದ್ಯೋಗಿ ಭತ್ಯೆ ನೀಡುತ್ತಿದೆ. ಪದವೀಧರರಿಗೆ ಪ್ರತೀ ತಿಂಗಳು 3000 ರೂಪಾಯಿ ಹಾಗೂ ಡಿಪ್ಲೋಮಾ ಪದವೀಧರರಿಗೆ 1500  ರೂಪಾಯಿ ಹಣವನ್ನು ಯೋಜನೆಯ ಫಲಾನುಭವಿಗಳ ಖಾತೆಗೆ ನೇರ ವರ್ಗಾವರಣೆ  (DBT) ಮಾಡಲಾಗುತ್ತಿದೆ. ಇದೀಗ ಯುವನಿಧಿ ಯೋಜನೆಗೆ ಸರಕಾರ ಹೊಸ ರೂಲ್ಸ್‌ (Karnataka Government New Rules)  ಜಾರಿ ಮಾಡಿದೆ.

Yuvanidhi Yojana Major Updates Karnataka News in Kannada
Image Credit to Original Source

ಕರ್ನಾಟಕದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಗೃಹಲಕ್ಷ್ಮೀ, ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆಯ ಜೊತೆಗೆ ಕೊನೆಯದಾಗಿ ಯುವನಿಧಿ ಯೋಜನೆಯನ್ನು ಜಾರಿಗೊಳಿಸಿದೆ. ಯುವನಿಧಿ ಯೋಜನೆಯಡಿಯಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯುವನಿಧಿ ಯೋಜನೆಯ ಅಡಿಯಲ್ಲಿ ಪ್ರತೀ ತಿಂಗಳು ವಿದ್ಯಾರ್ಥಿಗಳಿಗೆ 3000 ರೂಪಾಯಿ ಹಣವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಆಗಲಿದೆ. ಈಗಾಗಲೇ ಕಳೆದ ಕೆಲವು ತಿಂಗಳಿನಿಂದಲೂ ಲಕ್ಷಾಂತರ ಮಂದಿ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಈ ಯೋಜನೆಯ ಅಡಿಯಲ್ಲಿ 2 ವರ್ಷಗಳ ಕಾಲ ಹಣವನ್ನು ಪಡೆಯಬಹುದಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆಗೆ ಹೊಸ ರೂಲ್ಸ್‌ : ಈ ದಾಖಲೆ ಸಲ್ಲಿಸದಿದ್ರೆ ಸಿಗಲ್ಲ ಯುವನಿಧಿ ಯೋಜನೆಯ ಹಣ

ಒಂದೊಮ್ಮೆ ಯುವನಿಧಿ ಯೋಜನೆಯ ಪ್ರಯೋಜನ ಪಡೆಯುತ್ತಿದ್ದರು ಉದ್ಯೋಗಕ್ಕೆ ಸೇರ್ಪಡೆ ಆದ್ರೆ ಯುವನಿಧಿ ಯೋಜನೆಯ ಹಣವನ್ನು ಪಡೆಯಲು ಸಾಧ್ಯವಿಲ್ಲ. ಇನ್ನು ಡಿಪ್ಲೋಮಾ ಪದವೀಧರರು ಕೂಡ ಯುವನಿಧಿ ಯೋಜನೆಯ ಮೂಲಕ ಗರಿಷ್ಟ ಎರಡು ವರ್ಷಗಳ ಅವಧಿಗೆ 1500  ರೂಪಾಯಿ ಹಣವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Yuvanidhi Yojana Major Updates Karnataka News in Kannada
Image Credit to Original Source

ಯುವನಿಧಿ ಯೋಜನೆಯು ಅಡಿಯಲ್ಲಿ ಫಲಾನುಭವಿಗಳಾಗಲು ಸೇವಾಸಿಂಧು ಪೋರ್ಟಲ್‌ ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಬೇಕಾಗಿತ್ತು. ಅರ್ಜಿ ಸಲ್ಲಿಕೆಯ ವೇಳೆಯಲ್ಲಿ ತಮ್ಮ ವಿದ್ಯಾರ್ಹತೆ, ಆಧಾರ್‌ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಬೇಕಾಗಿತ್ತು. ಅರ್ಜಿ ಸಮರ್ಪಕವಾಗಿ ಇದ್ದರೆ ಅಂತಹ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆಯಬಹುದಾಗಿತ್ತು. ಆದ್ರೀಗ ಹೊಸ ರೂಲ್ಸ್‌ ಜಾರಿಯಾಗಿದೆ.

ಇದನ್ನೂ ಓದಿ :ಯುವನಿಧಿಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು ? ಜಿಲ್ಲಾವಾರು ಅಂಕಿ-ಅಂಶ ಇಲ್ಲಿದೆ

ಯುವನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿರುವ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಅರ್ಹ ಫಲಾನುಭವಿಗಳು ಇನ್ಮುಂದೆ ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ದಾಖಲೆ ಪತ್ರಗಳ ಜೊತೆಗೆ ಆಧಾರ್‌ ಕಾರ್ಡ್, ಇತರ ದಾಖಲೆಯನ್ನು ಆಯಾಯ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪರಿಶೀಲನೆಗೆ ಹಾಜರಾಗಬೇಕಾಗಿದೆ.

ಯುವನಿಧಿ ಯೋಜನೆಯ ಫಲಾನುಭವಿಗಳು ಪ್ರತೀ ತಿಂಗಳು ೨೫ನೇ ತಾರೀಕನ ಒಳಗಾಗಿ ಸೇವಾಸಿಂಧು ಪೋರ್ಟ್‌ನಲ್ಲಿ ತಾವು ಉದ್ಯೋಗಕ್ಕೆ ಸೇರ್ಪಡೆ ಆಗಿಲ್ಲ ಎಂಬ ಕುರಿತು ಸ್ವಯಂ ಘೋಷಿತ ಪ್ರಮಾಣ ಪತ್ರಗಳನ್ನು ಸಲ್ಲಿಕೆ ಮಾಡುವಂತೆ ಹೊಸ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಯುವನಿಧಿ ಯೋಜನೆ ನೋಂದಣಿ ಆರಂಭ : ಯುವನಿಧಿ ಟೋಲ್ ಫ್ರೀ ಸಂಖ್ಯೆ 1800 599 9918ಗೆ ಕರೆ ಮಾಡಿ

Yuvanidhi Yojana Major Updates Karnataka News in Kannada

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular