(Mansore)’ಹರಿವು, ‘ನಾತಿಚರಾಮಿ’ ‘ಆಕ್ಟ್ 1978’ ಹೀಗೆ ತಮ್ಮ ವಿಭಿನ್ನ ಸಬ್ಜೆಕ್ಟ್ ಸಿನಿಮಾಗಳ ಮೂಲಕ ರಾಷ್ಟ್ರಪಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಕನ್ನಡ ಸಿನಿ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿದ್ದಾರೆ. ಇದೀಗ ಮತ್ತೊಂದು ವಿಶೇಷವಾದ ಮತ್ತು ಉತ್ತಮ ಸಂದೇಶವುಳ್ಳ ಕಥೆಗಳ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಮಂಸೋರೆ ಬಹು ನಿರೀಕ್ಷಿತ ಸಿನಿಮಾ ‘19.20.21’ ಶೀರ್ಷಿಕೆ ಮೂಲಕ ಸಾಕಷ್ಟು ಕ್ಯೂರಿಯಾಸಿಟಿಯನ್ನು ಮೂಡಿಸಿರುವ ಈ ಸಿನಿಮಾ ಬಿಡುಗಡೆಯ ಬಾಗಿಲಿಗೆ ಬಂದು ನಿಂತಿದೆ.
(Mansore)ಹೊಸ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿರುವ ‘19.20.21’ ಪ್ರೇಕ್ಷಕರಲ್ಲಿ ಕುತೂಹಲವನ್ನೂ ಹುಟ್ಟು ಹಾಕಿದೆ. ಮಂಸೋರೆ ಅವರ ಹಿಂದಿನ ಸಿನಿಮಾಗಳಂತೆ ಈ ಚಿತ್ರ ಕೂಡ ಭಿನ್ನವಾಗಿರುತ್ತೆ ಅನ್ನೋದಕ್ಕೆ ಚಿತ್ರದ ಪೋಸ್ಟರ್ ಗಳು ಸಾಕ್ಷಿಯಾಗಿವೆ. ಪ್ರತಿ ಪೋಸ್ಟರ್ ಗಳು ಈ ಚಿತ್ರದ ಮೂಲಕ ನಿರ್ದೇಶಕರು ಸಮಾಜಕ್ಕೆ ಹೊಸದೊಂದು ಗಟ್ಟಿತನದ ಸಂದೇಶವನ್ನು ಹೇಳ ಹೊರಟಿದ್ದಾರೆ ಎನ್ನುವ ಸುಳಿವನ್ನು ನೀಡಿದೆ. ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆ ಚಿತ್ರದಲ್ಲಿದ್ದು, ಸೋಶಿಯಲ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಚಿತ್ರೀಕರಣ ಮುಗಿಸಿ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ನಿರತವಾಗಿದೆ. ಸಿನಿಮಾ ಬಿಡುಗಡೆಗೂ ತಯಾರಿ ನಡೆಸುತ್ತಿದ್ದು ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ 19.20.21 ಚಿತ್ರತಂಡ.
ಇದನ್ನೂ ಓದಿ:Gujarat Bridge Incident:ಗುಜರಾತ್ ಸೇತುವೆ ಕುಸಿತ ಪ್ರಕರಣ : ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು
ರಂಗಭೂಮಿ ಕಲಾವಿದರರಾದ ಶೃಂಗ ಬಿ ವಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪತ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾನ್ವಿತರ ತಾರಾಗಣ ಚಿತ್ರದಲ್ಲಿದೆ. ಯಲ್ಲಾಪುರ, ಧಾರವಾಡ, ಮಂಗಳೂರು, ಕುಂದಾಪುರ ಸೇರಿದಂತೆ ಹಲವು ಕಡೆ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಶಿವು ಬಿ ಕೆ ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ, ಬಿಂದು ಮಾಲಿನಿ ಸಂಗೀತ ನಿರ್ದೇಶನ, ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕತೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್ ಆರ್ 19.20.21 ಚಿತ್ರವನ್ನು ನಿರ್ಮಾಣ ಮಾಡಿದ್ದು ಶ್ರೀಘ್ರದಲ್ಲೇ ಪ್ರೇಕ್ಷರನ್ನು ರಂಜಿಸಲು ಸಿನಿಮಾ ತೆರೆಗೆ ಬರ್ತಿದೆ.
19.20.21′ directed by Mansore is all set to hit the screens.