Virat Kohli angry: ಆಸ್ಟ್ರೇಲಿಯಾದಲ್ಲಿ ವಿರಾಟ್ ರೂಮ್‌ಗೆ ನುಗ್ಗಿದ ಹುಚ್ಚು ಅಭಿಮಾನಿ, ಕೆಂಡಾಮಂಡಲರಾದ ಕಿಂಗ್ ಕೊಹ್ಲಿ ಮಾಡಿದ್ದೇನು ಗೊತ್ತಾ?

ಪರ್ತ್: (Virat Kohli angry ) ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಜಗತ್ತಿನ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳಿದ್ದಾರೆ. ಅದರಲ್ಲಿ ಕೆಲವರು ಹುಚ್ಚು ಅಭಿಮಾನಿಗಳೂ ಇದ್ದಾರೆ. ಅಂತಹ ಹುಚ್ಚು ಅಭಿಮಾನಿಯೊಬ್ಬನ ವಿರುದ್ಧ ಕಿಂಗ್ ಕೊಹ್ಲಿ ಕೆಂಡಾಮಂಡಲರಾಗಿದ್ದಾರೆ. ಇನ್’ಸ್ಟಾಗ್ರಾಂನಲ್ಲಿ ತಮ್ಮ ಕೋಪ ಹೊರ ಹಾಕಿದ್ದಾರೆ. ಅಷ್ಟಕ್ಕೂ ಕೊಹ್ಲಿ ಕೋಪಕ್ಕೆ ಕಾರಣವೇನು ಗೊತ್ತಾ ?

ದಕ್ಷಿಣ ಆಪ್ರಿಕಾ ವಿರುದ್ಧ ಭಾನುವಾರ ನಡೆದ ಟಿ20 ವಿಶ್ವಕಪ್ (T20 World Cup 2022) ಸೂಪರ್-12 ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಜೊತೆ ಪರ್ತ್’ನ ಹೋಟೆಲ್ ಒಂದರಲ್ಲಿ ತಂಗಿದ್ದರು. ವಿರಾಟ್ ಕೊಹ್ಲಿ ಹೋಟೆಲ್’ನಲ್ಲಿ ಇಲ್ಲದ ವೇಲೆ ಅವರ ಕೊಠಡಿಗೆ ಅಭಿಮಾನಿಯೊಬ್ಬ ಎಂಟ್ರಿ ಕೊಟ್ಟಿದ್ದಾನೆ. ಎಂಟ್ರಿ ಕೊಟ್ಟವನೇ ಹೋಟೆಲ್ ರೂಮ್ ಅನ್ನು ಇಂಚಿಂಚಾಗಿ ಮೊಬೈಲ್’ನಲ್ಲಿ ಸೆರೆ ಹಿಡಿದಿದ್ದಾನೆ. ವಿರಾಟ್ ಕೊಹ್ಲಿ ಅವರಿಗೆ ಸೇರಿದ ವಸ್ತುಗಳು ಸೇರಿದಂತೆ ಪ್ರತಿಯೊಂದೂ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ನಂತರ ಆ ವೀಡಿಯೊ ವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಇದನ್ನು ಕಂಡು ಕೆಂಡಾಮಂಡಲರಾಗಿರುವ ವಿರಾಟ್ ಕೊಹ್ಲಿ, ಇನ್’ಸ್ಟಾಗ್ರಾಂ ಪೋಸ್ಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

https://www.instagram.com/reel/CkXVWI6g7Ff/?igshid=YmMyMTA2M2Y=

“ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ನೋಡಲು ಮತ್ತು ಭೇಟಿ ಮಾಡಲು ಉತ್ಸಕರಾಗಿರುತ್ತಾರೆ ಎಂಬುದು ನನಗೆ ತಿಳಿದಿದೆ. ಅದಕ್ಕೆ ಸದಾ ನನ್ನ ಮೆಚ್ಚುಗೆಯೂ ಇದೆ. ಆದರೆ ಇಲ್ಲಿ ಈ ವೀಡಿಯೊ ಭಯಾನಕವಾಗಿದೆ ಮತ್ತು ಇದು ನನ್ನ ಖಾಸಗಿತನಕ್ಕೆ ಧಕ್ಕೆ ತಂದಿದೆ. ನನ್ನ ಸ್ವಂತ ಹೋಟೆಲ್ ಕೊಠಡಿಯಲ್ಲಿ ನನಗೆ ಖಾಸಗಿತನ ಇಲ್ಲವೆಂದರೆ, ಇನ್ನೆಲ್ಲಿ ಅದನ್ನು ನಾನು ನಿರೀಕ್ಷಿಸಬಹುದು? ಈ ರೀತಿಯ ಹುಚ್ಚು ಅಭಿಮಾನ ಮತ್ತು ಖಾಸಗಿತನದ ಅತಿಕ್ರಮಣ ಸರಿಯಲ್ಲ. ದಯವಿಟ್ಟು ಇನ್ನೊಬ್ಬರ ಖಾಸಗಿತನವನ್ನು ಗೌರವಿಸಿ ಮತ್ತು ಅವರನ್ನು ಮನರಂಜನೆಯ ಸರಕು ಎಂದು ಪರಿಗಣಿಸಬೇಡಿ” ಎಂದು ವಿರಾಟ್ ಕೊಹ್ಲಿ ಇನ್’ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಆ ವೀಡಿಯೊವನ್ನೂ ಪೋಸ್ಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ ಹೋಟೆಲ್ ರೂಮ್’ನಲ್ಲಿ ಇಲ್ಲದೇ ಇದ್ದಾಗ ಆ ವ್ಯಕ್ತಿ ಅಲ್ಲಿಗೆ ನುಗ್ಗಿದ್ದು ಹೇಗೆ ಎಂಬುದು ಇನ್ನೂ ನಿಗೂಢ. ಹೈಪ್ರೊಫೈಲ್ ಕ್ರಿಕೆಟ್ ತಂಡದ ಆಟಗಾರರ ಹೋಟೆಲ್ ಕೊಠಡಿಗೆ ಹೀಗೆ ನುಗ್ಗಿ ವೀಡಿಯೊ ಶೂಟ್ ಮಾಡಬಹುದು ಎಂದಾದರೆ, ಭದ್ರತೆಯ ಪ್ರಶ್ನೆ ಏಳುವುದು ಸಹಜ. ಪರ್ತ್’ನ ವಾಕಾ ಮೈದಾನದಲ್ಲಿ ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಸೂಪರ್-12 ಪಂದ್ಯದಲ್ಲಿ ಭಾರತ 5 ವಿಕೆಟ್’ಗಳ ಸೋಲು ಕಂಡಿದೆ. ಮೊದಲೆರಡು ಪಂದ್ಯಗಳಲ್ಲಿ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ವಿರುದ್ಧ ಗೆದ್ದಿದ್ದ ಭಾರತ 3ನೇ ಲೀಗ್ ಪಂದ್ಯದಲ್ಲಿ ಸೋಲುವುದರೊಂದಿಗೆ ಗ್ರೂಪ್-2ರ ಅಂಕಪಟ್ಟಿಯಲ್ಲಿ 4 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ಆಡಿರುವ 3 ಪಂದ್ಯಗಳಿಂದ 7 ಅಂಕ ಸಂಪಾದಿಸಿರುವ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ : Dinesh Karthik : ಡಿಕೆ ಸಾಹೇಬನ ಘೋರ ವೈಫಲ್ಯ, ವಿಶ್ವಕಪ್‌ನಲ್ಲಿ ದಿನೇಶ್ ಕಾರ್ತಿಕ್ ಗಳಿಸಿರುವ ಸ್ಕೋರ್ ನೋಡಿದ್ರೆ ಗಾಬರಿ ಬಿದ್ದು ಹೋಗ್ತೀರಿ

ಇದನ್ನೂ ಓದಿ : India Vs South Africa Match : ಅಂಪೈರ್ ಮರ್ಮಾಂಗಕ್ಕೆ ಗುದ್ದಿದ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ : Watch

Virat Kohli angry About fans in Australia ICC T20 World Cup 2022

Comments are closed.