Seat belt is mandatory : ವಾಹನ ಸವಾರರ ಗಮನಕ್ಕೆ : ಇನ್ಮುಂದೆ ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಕಡ್ಡಾಯ, ನಾಳೆಯಿಂದಲೇ ಹೊಸ ರೂಲ್ಸ್

ಮುಂಬೈ : (Seat belt is mandatory) ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಕುರಿತು ಮುಂಬೈ ಪೋಲೀಸರು ನಿಯಮಗಳನ್ನು ಜಾರಿಗೊಳಿಸಿದ್ದು, ಎಲ್ಲಾ ಚಾಲಕರು ಮತ್ತು ಪ್ರಯಾಣಿಕರಿಗೆ ಸೀಟ್‌ ಬೆಲ್ಟ್‌ ಅನ್ನು ಕಡ್ಡಾಯ(Seat belt is mandatory) ಮಾಡಲಾಗಿದೆ .ನವೆಂಬರ್‌ 1, 2022 ರಿಂದ ಸೀಟ್‌ ಬೆಲ್ಟ್‌ ಅನ್ನು ಎಲ್ಲಾ ಪ್ರಯಾಣಿಕರಿಗೆ ಕಡ್ಡಾಯಗೊಳಿಸಲಾಗಿದೆ .

ಭಾರತದಲ್ಲಿ ಎಲ್ಲೆಂದರಲ್ಲಿ ರಸ್ತೆ ಅಪಘಾತಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿವೆ. ಅನೇಕ ಕ್ರಮ(Seat belt is mandatory)ಗಳನ್ನು ಜಾರಿಗೊಳಿಸಿದರು ಕೂಡ ಅಪಘಾತದ ಸಂಖ್ಯೆಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿಲ್ಲ . ಅಲ್ಲದೆ ಈಗಲೂ ಕೂಡ ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳ ನಿಯಂತ್ರಣಕ್ಕಾಗಿ, ನಾಗರಿಕ ಅಧಿಕಾರಿಗಳು ರಸ್ತೆ ಸುರಕ್ಷತೆ ಕ್ರಮಗಳು ಮತ್ತು ನಿಯಮಗಳನ್ನು ಹೆಚ್ಚಿಸುತ್ತಿದ್ದಾರೆ.

ಇದನ್ನೂ ಓದಿ : Gujarat Bridge Incident:ಗುಜರಾತ್ ಸೇತುವೆ ಕುಸಿತ ಪ್ರಕರಣ : ಬಿಜೆಪಿ ಸಂಸದರ ಕುಟುಂಬದ 12 ಮಂದಿ ಸಾವು

ಅಂತೆಯೇ ಮುಂಬೈನಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಕುರಿತು, ಮುಂಬೈ ಪೊಲೀಸರು ನಿಯಮಗಳನ್ನು ಜಾರಿ ಮಾಡಿದ್ದು, ಪ್ರಯಾಣಿಕರಿಗೆ ಸೀಟ್ ಬೆಲ್ಟ್ ಅನ್ನು ಕಡ್ಡಾಯಗೊಳಿಸುವಂತೆ ಹೇಳಿಕೆಯನ್ನು ನೀಡಿದ್ದಾರೆ. ಇತ್ತೀಚಿನ ಮುಂಬೈ ಪೊಲೀಸ್ ಮಾರ್ಗಸೂಚಿಗಳ ಪ್ರಕಾರ ನವೆಂಬರ್ 1, 2022 ರಿಂದ ವಾಹನಗಳ ಹಿಂಭಾಗದ ಸೀಟ್ ಬೆಲ್ಟ್‌ಗಳನ್ನು ಸಹ ಕಡ್ಡಾಯಗೊಳಿಸಲಾಗುತ್ತದೆ.

ಇದನ್ನೂ ಓದಿ : Gujarat Bridge Collapse: ಗುಜರಾತ್ ತೂಗು ಸೇತುವೆ ಕುಸಿತ ಪ್ರಕರಣ.. ಸಾವಿನ ಸಂಖ್ಯೆ 132ಕ್ಕೆ ಏರಿಕೆ

ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಂತರದಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಸಂಚಾರಿ ಪೊಲೀಸರು ಈಗಾಗಲೇ ಟ್ರಾಫಿಕ್ಸ್ ರೂಲ್ಸ್ ಬಗ್ಗೆ ಜನ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಇನ್ನು ಮುಂಬೈನಲ್ಲಿ ಸೀಟ್‌ಬೆಲ್ಟ್ ನಿಯಮ ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಅದರ ಕುರಿತಾದ ನಿಯಮಗಳು ಈ ಕೆಳಗಿನಂತಿವೆ ;

ಸೀಟ್ ಬೆಲ್ಟ್ ಧರಿಸದೆ ಮೋಟಾರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಮೋಟಾರು ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಸೀಟ್ ಬೆಲ್ಟ್‌ ಧರಿಸಬೇಕು.ಇಲ್ಲದೆ ಇದ್ದಲ್ಲಿ ಕಾನೂನು ಕ್ರಮಕ್ಕೆ ಜವಾಬ್ದಾರರಾಗಿರುತ್ತಾರೆ.
ಸುರಕ್ಷತಾ ಬೆಲ್ಟ್ ಸೌಲಭ್ಯವಿಲ್ಲದ ವಾಹನಗಳಿಗೆ ಅದನ್ನು ಸ್ಥಾಪಿಸಲು ನವೆಂಬರ್ 1, 2022 ರವರೆಗೆ ಗಡುವನ್ನು ನೀಡಲಾಗಿದೆ.
ನವೆಂಬರ್ 1, 2022 ರಿಂದ ಮುಂಬೈನಲ್ಲಿ ಪ್ರಯಾಣಿಸುವಾಗ ಎಲ್ಲಾ ಚಾಲಕರು ಮತ್ತು ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಬೇಕು.

ಇದನ್ನೂ ಓದಿ : Heritage Over bridge collapses : ಗುಜರಾತ್‌ನಲ್ಲಿ ಮೇಲ್ಸೇತುವೆ ಕುಸಿತ: ನದಿಗೆ ಬಿದ್ದ 500 ಮಂದಿ, 30 ಸಾವು

ಮುಂಬೈ ನಗರದ ರಸ್ತೆಗಳಲ್ಲಿ ಪ್ರಯಾಣಿಸುವವರು, ಚಾಲಕರು ಮತ್ತು ಎಲ್ಲಾ ಪ್ರಯಾಣಿಕರು ನವೆಂಬರ್ 1,2022 ರಿಂದ ಪ್ರಯಾಣಿಸುವಾಗ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ.ನಿಯಮಗಳನ್ನು ಪಾಲಿಸದೆ ಇದ್ದಲ್ಲಿ , ಮೋಟಾರು ವಾಹನಗಳ (ತಿದ್ದುಪಡಿ) ಕಾಯಿದೆ, 2019 ರ ಸೆಕ್ಷನ್ 194 (ಬಿ) (1) ಅಡಿಯಲ್ಲಿ ಸುಸ್ತಿದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಪತ್ರಿಕಾ ಟಿಪ್ಪಣಿಯಲ್ಲಿ ಸೇರಿಸಲಾಗಿದೆ.

(Seat belt is mandatory) The number of road accidents is increasing. To control the increasing number of accidents, the Mumbai Police has implemented rules and made seat belt mandatory for all drivers and passengers. From November 1, 2022, seat belt has been made mandatory for all passengers.

Comments are closed.