ಸ್ಯಾಂಡಲ್‌ವುಡ್‌ನಲ್ಲಿ ನಾಲ್ಕು ವರ್ಷದ ಹಿಂದೆ ಈ ದಿನದಂದು ಇತಿಹಾಸವನ್ನು ಸೃಷ್ಟಿಸುವ ಸಿನಿಮಾವೊಂದು ತೆರೆ ಕಂಡು ಭಾರತೀಯ ಸಿನಿಮಾರಂಗದಲ್ಲಿ ಕನ್ನಡ ಸಿನಿರಂಗ ಹೆಮ್ಮೆ ಪಡುವಂತೆ ಮಾಡಿದೆ. ಅದು ಡಿಸೆಂಬರ್ 21, 2018 ಆ ದಿನಕ್ಕಾಗಿ ಸಿನಿಪ್ರೇಕ್ಷಕರು (4 Years of KGF Film) ಕಾಯುತ್ತಿದ್ದರು. ಈ ಸಿನಿಮಾ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ನಟ ಯಶ್ ಅಭಿನಯದ ಕೆಜಿಎಫ್ -1 ಸಿನಿಮಾ ಬಿಡುಗಡೆಗೊಂಡ ದಿನಾಂಕವಾಗಿದೆ. ಇಂದಿಗೆ ಕೆಜಿಎಫ್-1 ಸಿನಿಮಾ ತೆರೆಕಂಡು ನಾಲ್ಕು ವರ್ಷ ಕಳೆದಿದ್ದು, ಹೊಂಬಾಳೆ ಫಿಲ್ಮ್ಸ್ ಕನ್ನಡ ಸಿನಿರಂಗದಲ್ಲಿ ಇತಿಹಾಸ ಸೃಷ್ಟಿದ ದಿನವನ್ನು ನೆನಪಿಸಿಕೊಂಡಿದೆ.
ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಂಡ ಈ ಸಿನಿಮಾವು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ ಇತರ ಭಾಷೆಗಳಲಿಯೂ ಧೂಳೆಬ್ಬಿಸಿದೆ. ಇದೀಗ ಈ ಸಿನಿಮಾ ನಾಲ್ಕು ವರ್ಷವನ್ನು ಪೂರೈಸಿದೆ. ಹೊಂಬಾಳೆ ಫಿಲ್ಮ್ಸ್ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಈ ವಿಶೇಷ ದಿನವನ್ನು ನೆನಪಿಸಿಕೊಂಡಿದೆ. “ಉಗ್ರಂ” ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದು, ನಟ ಮುರಳಿ ಅಭಿನಯಿಸಿದ್ದಾರೆ. ಇನ್ನೂ ಈ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಈ ಸಿನಿಮಾದ ಮೂಲಕವೇ ನಿರ್ದೇಶಕ ಪ್ರಶಾಂತ್ ನೀಲ್ ಅವರ ಶೌರ್ಯದ ಬಗ್ಗೆ ಸಿನಿರಸಿಕರು ತಿಳಿದುಕೊಂಡರು. ಆಗಲೇ ಪ್ರಶಾಂತ್ ನೀಲ್ “ಕೆಜಿಎಫ್” ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾಕ್ಕಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ.
ಸಿನಿಮಾ ಬಿಡುಗಡೆ ಮೊದಲು ಕೆಜಿಎಫ್ ನ ಟೀಸರ್ ಮತ್ತು ಟ್ರೈಲರ್ ನೋಡಿ ಪ್ರೇಕ್ಷಕರು ಸಖತ್ ಥ್ರಿಲ್ ಆಗಿದ್ದು, ಹಿರಿಯ ನಟ ಅನಂತ್ ನಾಗ್ ಅವರ ಧ್ವನಿಯಲ್ಲಿನ ನಿರೂಪಣೆ ಸಿನಿಮಾದ ತೂಕವನ್ನು ಹೆಚ್ಚಿಸಿತ್ತು. ಹಾಗಾಗಿ ಈ ಸಿನಿಮಾ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಬಾಲಿವುಡ್‌ನಲ್ಲೂ ಬಿಡುಗಡೆಯಾಗಿತ್ತು. ಹಿಂದಿಯಲ್ಲಿ ಈ ಸಿನಿಮಾ 44 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡ ಸಿನಿಮಾವೊಂದು ಬಾಲಿವುಡ್‌ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಇದೇ ಮೊದಲಾಗಿದ್ದು, ಈ ಸಿನಿಮಾದಿಂದ ದೊಡ್ಡ ಇತಿಹಾಸವೇ ಸೃಷ್ಟಿಯಾಗಿದೆ.
ಇದನ್ನೂ ಓದಿ : Actress Anushka Shetty : ಮಂಗಳೂರಲ್ಲಿ ಕುಟುಂಬಸ್ಥರ ಜೊತೆ ಭೂತಕೋಲ ವೀಕ್ಷಿಸಿದ ನಟಿ ಅನುಷ್ಕಾ ಶೆಟ್ಟಿ : ವಿಡಿಯೋ ವೈರಲ್
ಇದನ್ನೂ ಓದಿ : ಹೊಸಬರ “ಥಗ್ಸ್ ಆಫ್ ರಾಮಘಡ” ಟ್ರೇಲರ್‌ಗೆ ಮೆಚ್ಚುಗೆ ಸೂಚಿಸಿದ ಡಾಲಿ ಧನಂಜಯ್
ಇದನ್ನೂ ಓದಿ : Shah Rukh Khan : ಬೇಶರಂ ರಂಗ್ ವಿವಾದ : ಶಾರೂಕ್ ಖಾನ್ರನ್ನು ಜೀವಂತ ಸುಡುವ ಎಚ್ಚರಿಕೆ ನೀಡಿದ ಸ್ವಾಮೀಜಿ
“ಕೆಜಿಎಫ್” ಸಿನಿಮಾದಲ್ಲಿ ಯಶ್ ಪಾತ್ರ ಸಖತ್ ಹೈಲೈಟ್ ಆಗಿತ್ತು. ರಾಕಿ ಭಾಯ್ ಯಶ್ ಮಿಂಚಿದ್ದಾರೆ. ಇನ್ನೂ ಈ ಸಿನಿಮಾದ ನಟಿ ಶ್ರೀ ನಿಧಿ ಶೆಟ್ಟಿ ಚೊಚ್ಚಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದರು. ಬಾಲಿವುಡ್‌ನ ಖ್ಯಾತ ಕಲಾವಿದರಾದ ಸಂಜಯ್ ದತ್ ಮತರ್ತು ರವೀನಾ ಟಂಡನ್ ಈ ಸಿನಿಮಾದ ಮೋಡಿ ನೋಡಿ ಎರಡನೇ ಅಧ್ಯಾಯದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.ಇಂದು ಈ ಸಿನಿಮಾಕ್ಕೆ ನಾಲ್ಕು ವರ್ಷಗಳು ಕಳೆದಿವೆ. ಈ ವಿಶೇ ದಿನದ ನೆನಪಿಗಾಗಿ ಹೊಂಬಾಳೆ ಫಿಲಂಸ್ ವಿಡಿಯೋ ಮಾಡಿ ಶೇರ್ ಮಾಡಿದೆ. ಈ ವಿಡಿಯೋವನ್ನುಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಹಾಗೇ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳನ್ನು ಅಭಿಮಾನಿಗಳು ಮಾಡುತ್ತಿದ್ದಾರೆ.
4 Years of KGF Film: Hombale Films remembers the day that made history