10 Most-liked Instagram Posts : ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್‌ ಪಡೆದ 10 ಆಲ್‌ ಟೈಮ್‌ ಪೋಸ್ಟ್‌ಗಳು

ಮೂಲತಃ ಒಂದು ಫೋಟೋ ಶೇರಿಂಗ್‌ ಆಪ್‌ ಆಗಿದ್ದ ಇನ್‌ಸ್ಟಾಗ್ರಾಂ (Instagram), ಈಗ ಹಲವಾರು ವಿಷಯಗಳನ್ನು ಹಂಚಿಕೊಳ್ಳುವ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಈಗ ಜಗತ್ತಿನ ಅತಿ ಹೆಚ್ಚು ಜನರು ತಮ್ಮ ಫೋಟೋ ಮತ್ತು ತಮಗೆ ತಿಳಿದಿರುವ ವಿಷಯಗಳನ್ನು ಇದರಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಒಬ್ಬರನ್ನೊಬ್ಬರು ಫಾಲೋ ಮಾಡುತ್ತಾ, ಲೈಕ್‌, ಕಮೆಂಟ್‌ಗಳನ್ನು ನೀಡುತ್ತಾ ಇನ್‌ಸ್ಟಾಗ್ರಾಂ ನಲ್ಲಿ ಸಕ್ರೀಯರಾಗಿರುತ್ತಾರೆ. ಹಾಗೆ ಈ ಅಪ್ಲಿಕೇಶನ್‌ನಲ್ಲಿ ಹಾಕಿರುವ ಪೋಸ್ಟ್‌ಗಳನ್ನು ಲೈಕ್‌ ಮಾಡುತ್ತಲೇ ಇರುತ್ತಾರೆ. ಕೆಲವು ಫೋಟೋಗಳು ಲೈಕ್‌ ಗಳಿಕೆಯಲ್ಲಿ ನಂಬರ್‌ 1 ಸ್ಥಾನವನ್ನೇ ಪಡೆದಿವೆ. ಅಂತಹ ಆಲ್‌ಟೈಮ್‌ ಲೈಕ್‌ ಗಳಿಸಿದ 10 ಪೋಸ್ಟ್‌ಗಳು (10 Most-liked Instagram Posts ) ಯಾವುದು? ಅದರ ಮಾಹಿತಿ ಇಲ್ಲಿದೆ.

ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್‌ ಪಡೆದ 10 ಆಲ್‌ ಟೈಮ್‌ ಪೋಸ್ಟ್‌ಗಳು:

1) ಅರ್ಜೈಂಟೈನಾದ ಹೀರೊ ಲಿಯೋನಲ್‌ ಮೆಸ್ಸಿ, 2022ರ ಫೀಫಾ ವರ್ಲ್ಡ್‌ ಕಪ್‌ ಟ್ರೋಫೀಯನ್ನು ಎತ್ತಿಹಿಡಿದಿರುವ ಫೋಟೋ ಈಗ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್‌ ಗಳಿಸಿದ ಪೋಟೋವಾಗಿದೆ. ಇದು 67.5 ಮಿಲಿಯನ್‌ ಲೈಕ್‌ ಗಳಿಸಿದೆ.

2) 2019 ರಲ್ಲಿ ಕೈಲಿ ಜನ್ನರ್‌ ಮತ್ತು ಅವರ ಮಗು ಸ್ಟಾರ್ಮಿ ಹಾಕಿರುವ ಒಂದು ಮೊಟ್ಟೆಯ ಫೋಟೋ ಎರಡನೇ ಅತಿ ಹೆಚ್ಚು ಲೈಕ್‌ ಗಳಿಸಿದ ಫೋಟೋ. ಇದು ಬಹಳ ದಿನಗಳಿಂದ ನಂಬರ್‌ 1 ಸ್ಥಾನದಲ್ಲಿತ್ತು. ಇದು ಗಳಿಸಿದ ಲೈಕ್‌ ಎಂದರೆ 57.5 ಮಿಲಿಯನ್‌.

3) ಲಿಯೋನಲ್‌ ಮೆಸ್ಸಿ ಫೀಫಾ ವರ್ಲ್ಡ್‌ ಕಪ್‌ 2022 ಟ್ರೋಫಿಯೊಂದಿಗೆ ಮಲಗಿರುವುದು ಇನ್‌ಸ್ಟಾಗ್ರಾಂನ ಲೈಕ್‌ ಗಳಿಕೆಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಅದು 45.4 ಮಿಲಿಯನ್‌ ಲೈಕ್‌ ಪಡೆದುಕೊಂಡಿದೆ.

4) ಮತ್ತು 7) ಟಾಪ್‌ ಲೈಕ್‌ ಪಡೆದ ಇನ್‌ಸ್ಟಾಗ್ರಾಂ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಫುಟ್‌ಬಾಲ್ ಶ್ರೇಷ್ಠರಾದ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಲಿಯೋನೆಲ್ ಮೆಸ್ಸಿ ಚೆಸ್ ಆಟವನ್ನು ಆಡುತ್ತಿರುವ ಫೋಟೋ ಆಗಿದೆ. ಆದರೆ ಇದರಲ್ಲಿ ಕ್ರಿಸ್ಟಿಯಾನೋ ಅವರ ಫೋಟೋ 42.1 ಮಿಲಿಯನ್‌ ಲೈಕ್‌ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಮತ್ತು ಲಿಯೋನಿಲ್‌ ಮೆಸ್ಸಿಯವರ ಫೋಟೋ 32.4 ಮಿಲಿಯನ್‌ ಲೈಕ್‌ ಪಡೆದು ಏಳನೇ ಸ್ಥಾನ ಪಡೆದಿದೆ. ಇದನ್ನು ಫ್ಯಾಷನ್ ದೈತ್ಯ ಲೂಯಿ ವಿಟಾನ್ ಪ್ರಾಯೋಜಿಸಿದ್ದಾರೆ.

5) ಲಿಯೋನೆಲ್‌ ಮೆಸ್ಸಿ ಟ್ರೋಫಿಯೊಂದಿಗೆ ಫ್ಲೈಟ್‌ನಲ್ಲಿರುವ ಮತ್ತೊಂದು ಪೋಸ್ಟ್‌ 35.4 ಮಿಲಿಯನ್ ಲೈಕ್‌ ಪಡೆದು ಐದನೇ ಸ್ಥಾನ ಗಳಿಸಿದೆ.

6) ಕ್ರಿಸ್ಟಿಯಾನೊ ಮತ್ತು ಜಿಯಾರ್ಜಿನಾಗಿಯೋ ಪ್ರೆಗ್ನಿನ್ಸಿ ಫೋಟೋವು 32.6 ಮಿಲಿಯನ್‌ ಲೈಕ್‌ ಪಡೆದು ಆರನೇ ಸ್ಥಾನ ಪಡೆದಿದೆ. ಈ ಪೋಸ್ಟ್‌ ಅನ್ನು 2021 ನಲ್ಲಿ ಪೋಸ್ಟ್‌ ಮಾಡಲಾಗಿತ್ತು.

8) ಕ್ರಿಸ್ಟಿಯಾನೋ ರೊನಾಲ್ಡೋ ವರ್ಲ್ಡ್‌ ಕಪ್ 2022 ನಲ್ಲಿ ಮಿಲಿಯನ್‌ಗಟ್ಟಲೇ ಲೈಕ್‌ ಪಡೆದಿದ್ದಾರೆ. ವರ್ಲ್ಡ್‌ ಕಪ್‌ನಿಂದ ಎಲಿಮಿನೇಟ್ ಆಗಿರುವ ಫೋಟೋ 31.2 ಮಿಲಿಯನ್ ಲೈಕ್‌ ಪಡೆದು ಎಂಟನೇ ಸ್ಥಾನದಲ್ಲಿದೆ.

9) ಸಾಮಾನ್ಯವಾಗಿ “X” ಎಂದು ಕರೆಯಲ್ಪಡುವ ರ್‍ಯಾಪರ್‌ XXXಟ್ಯಾಂಕ್ಷನ್‌ ನಮ್ಮೊಂದಿಗಿಲ್ಲ. ಆದರೆ ಅವರು ಇದರ ಮೂಲಕ ವಾಸಿಸುತ್ತಿದ್ದಾರೆ. ಅವರು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಂತಿಮ ಪೋಸ್ಟ್‌ ‘ಲವ್‌ ಈಸ್‌ ವಾರ್‌’ 30.4 ಮಿಲಿಯನ್ ಲೈಕ್‌ ಪಡೆದು ಒಂಬತ್ತನೇ ಸ್ಥಾನದಲ್ಲಿದೆ.

10) ಫೀಫಾ ವರ್ಲ್ಡ್‌ ಕಪ್‌ 2022 ನ ಸೆಮಿಫೈನಲ್‌ನಲ್ಲಿ ಕ್ರೊವೆಷಿಯಾದ ಎದುರು ಗೆದ್ದ ನಂತರ ಲಿಯೋನಿಲ್‌ ಮೆಸ್ಸಿ ಫೋಟೋ 28.4 ಮಿಲಿಯನ್‌ ಲೈಕ್‌ ಪಡೆದು 10ನೇ ಸ್ಥಾನದಲ್ಲಿದೆ.

ಇದನ್ನೂ ಓದಿ : China Covid Explosion : ಇದು ಥರ್ಮೋನ್ಯೂಕ್ಲಿಯರ್‌ ಬ್ಯಾಡ್‌ನ ಆರಂಭವೇ; ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಕೊಟ್ಟ 10 ಎಚ್ಚರಿಕೆಗಳೇನು..

ಇದನ್ನೂ ಓದಿ : Helicopter car: ಟಾಟಾ ನ್ಯಾನೋ ಕಾರನ್ನು ಹೆಲಿಕಾಪ್ಟರ್ ಆಗಿ ನವೀಕರಿಸಿದ ಕಾರ್ಪೆಂಟರ್

(10 Most-liked Instagram Posts ever. Messi takes the top rank)

Comments are closed.