Hubballi accident: ಬುಲ್ಡೋಜರ್ ಗೆ ಬೈಕ್ ಢಿಕ್ಕಿ : ಹೊತ್ತಿ ಉರಿದ ಬೈಕ್, ಸವಾರ ಸಾವು

ಹುಬ್ಬಳ್ಳಿ: (Hubballi accident) ರಸ್ತೆ ದಾಟುತ್ತಿದ್ದ ಬುಲ್ಡೋಜರ್‌ ಗೆ ಬೈಕ್‌ ಢಿಕ್ಕಿ ಹೊಡೆದು, ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬೈಕ್‌ ಸವಾರ ಅದಿಲ್‌ ಸಿಖಂದರ್‌ ಮೃತ ವ್ಯಕ್ತಿ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ.

ಬುಲ್ಡೋಜರ್‌ ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಒಂದು ಅತೀವೇಗದಿಂದ ಬಂದಿದ್ದು, ಏಕಾ ಏಕಿ ಬುಲ್ಡೋಜರ್‌ ಗೆ ಬೈಕ್‌ ಢಿಕ್ಕಿ (Hubballi accident) ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಹೊತ್ತಿ ಉರಿದಿದ್ದು ರಸ್ತೆಯಲ್ಲೇ ಬೈಕ್‌ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ಇನ್ನೂ ಬೈಕ್‌ ನಲ್ಲಿ ಇಬ್ಬರು ಸವಾರರು ಪ್ರಯಾಣಿಸುತ್ತಿದ್ದು, ಬೈಕ್‌ ಚಲಾಯಿಸುತ್ತಿದ್ದ ಅದಿಲ್‌ ಸಿಖಂದರ್‌ ಢಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೋರ್ವ ಬೈಕ್‌ ಸವಾರ ಖಾದಿರ್‌ ಶೇಕ್‌ ಗೆ ಗಂಭೀರ ಗಾಯಗಳಾಗಿದ್ದು, ಖಾದಿರ್‌ ಶೆಕ್‌ ನನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಬಂದಿದ್ದಾರೆ. ಇನ್ನೂ ಈ ಘಟನೆಯ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಭಯಾನಕವಾಗಿದೆ. ರಸ್ತೆ ದಾಟುತ್ತಿದ್ದಾಗ ಬೈಕ್‌ ಬಂದು ಢಿಕ್ಕಿ ಹೊಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಬೈಕ್‌ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : Terrible Accident : ಎರಡು ಶಾಲಾ ಬಸ್‌ಗಳ ನಡುವೆ ಭೀಕರ ಅಪಘಾತ : 15 ವಿದ್ಯಾರ್ಥಿಗಳು ಬಲಿ

ಇದನ್ನೂ ಓದಿ : ಚಿಕ್ಕಮಗಳೂರಿನ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವು

ಇದನ್ನೂ ಓದಿ : Assault by students: ಅಯ್ಯಪ್ಪ ಮಾಲಾಧಾರಿಗೆ ವಿದ್ಯಾರ್ಥಿಗಳಿಂದ ಹಲ್ಲೆ: ಮಾಲೆ ಧರಿಸಿ ಶಾಲೆಗೆ ಬರದಂತೆ ಶಿಕ್ಷಕರಿಂದ ಸೂಚನೆ

ಇದನ್ನೂ ಓದಿ : ಕಾಲೇಜು ಚುನಾವಣೆ ವೇಳೆ ಘರ್ಷಣೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

(Hubballi accident) An incident took place in Hubballi where a bike collided with a bulldozer crossing the road and the bike rider died. Bike rider Adil Sikhander is the dead person. The incident was captured on CCTV and is horrifying.

Comments are closed.