Srinivas Murthy :ಸೌತ್‌ ಇಂಡಿಯಾ ಸಿನಿಮಾಗಳ ಜನಪ್ರಿಯ ಡಬ್ಬಿಂಗ್‌ ಕಲಾವಿದ ವಿಧಿವಶ

ಸೌತ್‌ ಇಂಡಿಯಾ ಸಿನಿಮಾ ಸ್ಟಾರ್‌ಗಳ ಮೆಚ್ಚಿನ ಡಬ್ಬಿಂಗ್‌ ಕಲಾವಿದ ಶ್ರೀನಿವಾಸ್‌ ಮೂರ್ತಿ (Srinivas Murthy) ಇನ್ನಿಲ್ಲ. ರಿಯಲ್‌ ಸ್ಟಾರ್‌ ಉಪೇಂದ್ರ ಸಿನಿಮಾಗಳು ತೆಲುಗಿಗೆ ವಾಯ್ಸ್‌ ಡಬ್ಬ ಆಗಬೇಕಾದರೆ ಅದಕ್ಕೆ ಶ್ರೀನಿವಾಸ್‌ ಮೂರ್ತಿಯವರೇ ವಾಯ್ಸ್‌ ಡಬ್‌ ಮಾಡುತ್ತಿದ್ದರು.

1990ರಲ್ಲಿ ಶ್ರೀನಿವಾಸ್‌ “ಒಕ್ಕೇ ಒಕ್ಕಡು” ಎನ್ನುವ ಅರ್ಜುನ್‌ ಸರ್ಜಾ ಅಭಿನಯದ ಸಿನಿಮಾಕ್ಕೆ ವಾಯ್ಸ್‌ ಮೊಟ್ಟ ಮೊದಲ ಬಾರಿಗೆ ನೀಡಿದ್ದಾರೆ. ಅಲ್ಲಿಂದ ಇವರೇ ವಾಯ್ಸ್‌ ಡಬ್ಬಿಂಗ್‌ನಲ್ಲಿ ಮೊದಲಿಗರಾಗಿ ಗುರುತಿಸಿಕೊಂಡಿದ್ದಾರೆ. ತಮಿಳು ನಟ ಸೂರ್ಯ, ಅಜಿತ್‌, ವಿಕ್ರಮ್‌, ಕೇರಳದ ಮೋಹನ್‌ ಲಾಲ್‌ ಸೇರಿದಂತೆ ಸೌತ್‌ ಇಂಡಿಯಾದ ಅನೇಕ ಜನಪ್ರಿಯ ನಟರ ಸಿನಿಮಾಗಳಿಗೆ ತೆಲುಗಿನಲ್ಲಿ ಡಬ್ಬಿಂಗ್‌ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತೆಲುಗಿಗೆ ಡಬ್‌ ಆಗುತ್ತಿದ್ದ ಬಹುತೇಕ ಸಿನಿಮಾಗಳ ನೆಗೆಟಿವ್‌ ರೋಲ್‌ಗಳಿಗೆ ಇವರದೇ ವಾಯ್ಸ್‌ ಇರುತ್ತಿತ್ತು.

ಇದನ್ನೂ ಓದಿ : Rolex Komal Movie : ಸೆಟ್ಟೇರಿತು ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ : ನಾಳೆಯಿಂದ ಚಿತ್ರೀಕರಣ ಆರಂಭ

ಇದನ್ನೂ ಓದಿ : Zebra movie : ಡಾಲಿ ಧನಂಜಯ್‌ ಅಭಿನಯದ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌

ಇದನ್ನೂ ಓದಿ : ಕಿಚ್ಚನ ಕರ್ನಾಟಕ ಚಲನಚಿತ್ರ ಕಪ್‌ನಲ್ಲಿ ಆಡಲಿದ್ದಾರೆ ಕ್ರಿಸ್ ಗೇಲ್, ಸುರೇಶ್ ರೈನಾ, ಲಾರಾ, ದಿಲ್ಷಾನ್

ಬಾಲಿವುಡ್‌ನ ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌ ಸಿನಿಮಾಗಳಿಗೆ ತೆಲುಗು ಡಬ್‌ ಮಾಡಿದ್ದ ಶ್ರೀನಿವಾಸ್‌ ಮೂರ್ತಿ ಹಾಲಿವುಡ್‌ ಸಿನಿಮಾಗಳು ಬಂದಾಗಲೂ ತಮ್ಮ ವಿಶಿಷ್ಟ ಸ್ವರದಿಂದಗಮನ ಸೆಳೆದಿದ್ದಾರೆ. ಇನ್ನು ಸೌತ್‌ ಇಂಡಿಯಾ ಸಿನಿರಂಗಕ್ಕೆ ಈ ಅದ್ಭುತ ಡಬ್ಬಂಗ್‌ ಕಲಾವಿದನ ನೆನಪು ಮಾತ್ರ.

ಇದನ್ನೂ ಓದಿ : ಕಿಚ್ಚನ ಕರ್ನಾಟಕ ಚಲನಚಿತ್ರ ಕಪ್‌ನಲ್ಲಿ ಆಡಲಿದ್ದಾರೆ ಕ್ರಿಸ್ ಗೇಲ್, ಸುರೇಶ್ ರೈನಾ, ಲಾರಾ, ದಿಲ್ಷಾನ್

A popular dubbing artist of South Indian movies, Srinivas Murthy passed away

Comments are closed.