KL Rahul starts training : ಮದುವೆ ಬೆನ್ನಲ್ಲೇ ಟ್ರೈನಿಂಗ್ ಶುರು ಮಾಡಿದ ಕೆ.ಎಲ್ ರಾಹುಲ್, ಕಾಂಗರೂ ಸರಣಿಗೆ ಕನ್ನಡಿಗನ ಭರ್ಜರಿ ಸಿದ್ಧತೆ

ಮುಂಬೈ: ನಾಲ್ಕು ದಿನಗಳ ಹಿಂದಷ್ಟೇ ಗೆಳತಿ ಆತಿಯಾ ಶೆಟ್ಟಿ ಜೊತ ಸಪ್ತಪದಿ ತುಳಿದಿದ್ದ ಕನ್ನಡಿಗ ಕೆ.ಎಲ್ ರಾಹುಲ್ (KL Rahul), ಟ್ರೈನಿಂಗ್ ಆರಂಭಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ರಾಹುಲ್ ಸಜ್ಜಾಗುತ್ತಿದ್ದು, ಮುಂಬೈನಲ್ಲಿ ಟ್ರೈನಿಂಗ್ ಶುರು (KL Rahul starts training) ಮಾಡಿದ್ದಾರೆ. ಜಿಮ್’ನಲ್ಲಿ ಬೆವರಿಳಿಸುತ್ತಿರುವ ವೀಡಿಯೊವನ್ನು ರಾಹುಲ್ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

https://www.instagram.com/reel/Cn4dwDAh2V-/?utm_source=ig_web_copy_link

30 ವರ್ಷದ ಕೆ.ಎಲ್ ರಾಹುಲ್ ಅವರ ಮದುವೆ ಇದೇ ತಿಂಗಳ 22 ಮತ್ತು 23ರಂದು ಖಂಡಾಲದಲ್ಲಿ ನಡೆದಿತ್ತು. ಹಿಂದಿ ಚಿತ್ರರಂಗದ ಹಿರಿಯ ನಟ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಜೊತೆ ರಾಹುಲ್ ಸಪ್ತಪದಿ ತುಳಿದಿದ್ದರು. ರಾಹುಲ್-ಆತಿಯಾ ಮದುವೆ ಸುನಿಲ್ ಶೆಟ್ಟಿಯವರ ಫಾರ್ಮ್ ಹೌಸ್’ನಲ್ಲಿ ನಡೆದಿತ್ತು (KL Rahul Athiya Shetty wedding).

ಮದುವೆ ಕಾರಣದಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ರಾಹುಲ್ ಅಲಭ್ಯರಾಗಿದ್ದರು. ಇದೀಗ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಲು ರೆಡಿಯಾಗಿರುವ ರಾಹುಲ್, ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ (India Vs Australia test series) ಆಡಲಿದ್ದಾರೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ರಾಹುಲ್ ಉಪನಾಯಕನಾಗಿ ನೇಮಕಗೊಂಡಿದ್ದಾರೆ.

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೂ ಮುನ್ನ ಟೀಮ್ ಇಂಡಿಯಾ ಆಟಗಾರರು ನಾಗ್ಪುರದಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. 10 ತಿಂಗಳ ನಂತರ ಭಾರತ ತಂಡ ತವರು ನೆಲದಲ್ಲಿ ಮೊದಲ ಬಾರಿ ಟೆಸ್ಟ್ ಸರಣಿಯನ್ನಾಡುತ್ತಿದೆ.ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ 4 ಪಂದ್ಯಗಳ ಟೆಸ್ಟ್ ಸರಣಿ (India Vs Australia test series) ಫೆಬ್ರವರಿ 9 ರಂದು ಆರಂಭವಾಗಲಿದ್ದು, ಪ್ರಥಮ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ.

ಇದನ್ನೂ ಓದಿ : ರಣಜಿ ಟ್ರೋಫಿಯಲ್ಲಿ ಜಡೇಜ ಕಮಾಲ್, 7 ವಿಕೆಟ್ ಪಡೆದು ಕಾಂಗರೂಗಳಿಗೆ ವಾರ್ನಿಂಗ್ ಕೊಟ್ಟ ರಾಕ್ ಸ್ಟಾರ್

ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಉಮೇಶ್ ಯಾದವ್, ಜೈದೇವ್ ಉನಾದ್ಕಟ್, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ : ಕಿಚ್ಚನ ಕರ್ನಾಟಕ ಚಲನಚಿತ್ರ ಕಪ್‌ನಲ್ಲಿ ಆಡಲಿದ್ದಾರೆ ಕ್ರಿಸ್ ಗೇಲ್, ಸುರೇಶ್ ರೈನಾ, ಲಾರಾ, ದಿಲ್ಷಾನ್

ಭಾರತ Vs ಆಸ್ಟ್ರೇಲಿಯಾ ಟೆಸ್ಟ್ ಸರಣಿಯ ವೇಳಾಪಟ್ಟಿ :

  • ಪ್ರಥಮ ಟೆಸ್ಟ್: ಫೆಬ್ರವರಿ 9-13 (ನಾಗ್ಪುರ)
  • ದ್ವಿತೀಯ ಟೆಸ್ಟ್: ಫೆಬ್ರವರಿ 17-21 (ದೆಹಲಿ)
  • ಮೂರನೇ ಟೆಸ್ಟ್: ಮಾರ್ಚ್ 01-05 (ಧರ್ಮಶಾಲಾ)
  • ನಾಲ್ಕನೇ ಟೆಸ್ಟ್: ಮಾರ್ಚ್ 09-13 (ಅಹ್ಮದಾಬಾದ್)

KL Rahul starts training: KL Rahul who started training after marriage, Kannadigas is preparing for the Kangaroo series.

Comments are closed.