Aadhya Anand: ಕನ್ನಡತಿ ಆದ್ಯಾ ಆನಂದ್ ಆಗಿದ್ದಾರೆ ಪಡ್ಡೆ ಹುಡುಗರ ಹೊಸ ‘ಕ್ರಷ್’!

ನೆಟ್ ಫ್ಲಿಕ್ಸ್ ನ ‘ಬಾಂಬೆ ಬೇಗಮ್’ ವೆಬ್ ಸಿರೀಸ್ (Netflix Bombay Begums) ಮೂಲಕ ಭಾರತದ ಕಿರುತೆರೆಗೆ ಪ್ರವೇಶಿಸಿದ್ದ ಕನ್ನಡತಿ ಆದ್ಯಾ ಆನಂದ್ (Aadhya Anand) ಈ ಬಾರಿ ನ್ಯಾಶನಲ್ ‘ಕ್ರಷ್’ ಆಗಿದ್ದಾರೆ. ಅಮೆಜಾನ್ ಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ ‘ಕ್ರಷ್’ ಸಿರೀಸ್ ನಲ್ಲಿ (Amazon miniTVs Crushed) ಮುಖ್ಯ ಪಾತ್ರ ನಿರ್ವಹಿಸಿರುವ ಆದ್ಯಾ, ಪಡ್ಡೆ ಹುಡುಗರ ಹೃದಯ ಕದ್ದಿದ್ದಾಳೆ.

ಹೌದು, ನೋಡುಗರನ್ನ ತಮ್ಮ ಬಾಲ್ಯದ ಶಾಲಾ ದಿನಗಳಿಗೆ ಕರೆದೊಯ್ಯುವ ಈ ‘ಕ್ರಷ್’ ಸಿರೀಸ್ ನಲ್ಲಿ ಆದ್ಯಾ ಮಥುರ್ ಪಾತ್ರದಲ್ಲಿ ಕಾಣಿಸಕೊಂಡಿರುವ ಆದ್ಯಾ ಆನಂದ್ ನಟನೆಗೆ ಯುವಕರಂತೂ ಫಿದಾ ಆಗಿದ್ದಾರೆ. ಟಾಕ್ ಆಫ್ ದಿ ಟೌನ್ ಆಗಿರುವ ಕ್ರಷ್’ನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿರುವ ಆದ್ಯಾ ಸದ್ಯ ಇಂಟರ್ನೆಟ್ ಸೆನ್ಸೇಶನ್ ಆಗಿದ್ದಾಳೆ. ಕಳೆದ ಮೂರ್ನಾಲ್ಕು ದಿನಗಳಿಂದಲೂ ಸಾವಿರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಆದ್ಯಾಳ ಫೊಟೊ, ವಿಡಿಯೋಗಳನ್ನು ‘ನ್ಯಾಶನಲ್ ಕ್ರಷ್ ಆಫ್’ ಎಂಬ ಟೈಟಲ್‌ನೊಂದಿಗೆ ಹಂಚಿಕೊಳ್ಳುವ ಮೂಲಕ ಅಭಿಮಾನದ ಜೊತೆಗೆ ಆದ್ಯಾಳ ನಟನೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

ಕನ್ನಡದ ಹುಡುಗಿಯಾಗಿರುವ ಆದ್ಯಾ, ಬಾಲಿವುಡ್ ನ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು, ಅದರಲ್ಲೂ ಈ ರೀತಿ ಇಂಟರ್ನೆಟ್ ಸೆನ್ಸೇಶನ್, ನ್ಯಾಶನಲ್ ಕ್ರಷ್ ಎನ್ನುವಷ್ಟರ ಮಟ್ಟಿಗೆ ಖ್ಯಾತಿ ಗಳಿಸುತ್ತಿರುವುದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯ ವಿಷಯವೇ ಆಗಿದೆ.

ಈ ಬಗ್ಗೆ ಮಾತನಾಡಿರುವ ಆದ್ಯಾ ಆನಂದ್, ‘ನಾನು ಇಂಟರ್ನೆಟ್ ಸೆನ್ಷೇನ್ ಆಗಿದ್ದೀನಿ ಎನ್ನುವುದನ್ನು ಕೇಳಲು ತುಂಬಾ ಖುಷಿಯಾಗುತ್ತಿದೆ. ‘ಕ್ರಷ್’ನಲ್ಲಿ ನನಗೆ ಅವಕಾಶ ನೀಡಿದ್ದಕ್ಕೆ ಅಮೆಜಾನ್ ಮಿನಿಗೆ ಧನ್ಯವಾದ ಹೇಳುತ್ತೇನೆ. ಈ ಸಿರೀಸ್ ನಲ್ಲಿ ನನ್ನ ಪಾತ್ರ ಹೆಚ್ಚಿನ ಜನರಿಗೆ ಇಷ್ಟವಾಗಿದೆ. ಈ ಸಿರೀಸ್ ಬಿಡುಗಡೆಯಾದ ನಂತರದಿಂದ ನನಗೆ ಸಾಮಾಜಿಕ ಜಾಲತಾಣಗಳಲ್ಲಿ ದಿನವೂ 500ಕ್ಕೂ ಹೆಚ್ಚು ಪ್ರೀತಿಯ, ಮೆಚ್ಚುಗೆಯ ಸಂದೇಶಗಳು ಬರುತ್ತಿವೆ. ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಫೊಟೊ, ವಿಡಿಯೋಗಳನ್ನು ಹಂಚಿಕೊಳ್ಳುವುದನ್ನು, ನನ್ನನ್ನು ಉಲ್ಲೇಖಿಸುವುದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ.

‘ಕ್ರಷ್’ ಸಿರೀಸ್ ನ ಆರು ಸಂಚಿಕೆಗಳಲ್ಲಿ ಐದು ಈಗಾಗಲೇ ಅಮೆಜಾನ್ ಮಿನಿ ಟಿವಿಯಲ್ಲಿ ಉಚಿತವಾಗಿ ಸ್ಟ್ರೀಮ್ ಆಗುತ್ತಿದೆ. ಸೀಸನ್ ಫಿನಾಲೆ ಎಪಿಸೋಡ್ ಫೆಬ್ರುವರಿ 2ರಂದು ಬಿಡುಗಡೆಯಾಗಲಿದೆ. ‘ಕ್ರಷ್’, ಶಾಲಾ ದಿನಗಳಲ್ಲಿ ಅನುಭವಕ್ಕೆ ಬರುವ ರೊಮ್ಯಾಂಟಿಕ್ ಪ್ರೇಮ ಕಥನ. ಎಲ್ಲಾ ವಯಸ್ಸಿನವರಿಗೂ ಒಗ್ಗುವ ಸುಂದರ ಕಥೆಯನ್ನು ಹೊಂದಿದೆ. ಸಿರೀಸ್ ನೋಡಿದ ಅನೇಕರು ತಮ್ಮ ಬಾಲ್ಯದ ದಿನಗಳು ನೆನಪಿಗೆ ಬಂದವು ಎಂದು ಹೇಳಿಕೊಂಡಿದ್ದಾರೆ. ಹೀನಾ ಡಿಸೋಜಾ ಮತ್ತು ಮಂದರ್ ಕುರುಂಡ್ಕರ್ ನಿರ್ದೇಶನದ ಈ ಸರಣಿಯಲ್ಲಿ ರುದ್ರಾಕ್ಷ್ ಜೈಸ್ವಾಲ್, ಆದ್ಯಾ ಆನಂದ್, ಊರ್ವಿ ಸಿಂಗ್, ನಮನ್ ಜೈನ್, ಅರ್ಜುನ್ ದೇಸ್ವಾಲ್ ಮತ್ತು ಅನುಪ್ರಿಯಾ ಕರೋಲಿ ಸೇರಿದಂತೆ ಅನೇಕ ಪ್ರತಿಭಾವಂತ ನಟರ ಸಮೂಹ ನಟಿಸಿದೆ. ಸಿರೀಸ್ ನಲ್ಲಿ ಸ್ಯಾಮ್ (ಸಂವಿಧಾನ್ ಶರ್ಮಾ) ಪಾತ್ರದಲ್ಲಿ ನಟಿಸಿರುವ ರುದ್ರಾಕ್ಷ್ ಜೈಸ್ವಾಲ್ ಮತ್ತು ಆದ್ಯಾ ಮಥುರಾ ಆಗಿ ಕಾಣಿಸಿಕೊಂಡಿರುವ ಆದ್ಯಾ ಆನಂದ್ ಇಬ್ಬರ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದ್ದು, ಒಟ್ಟಾರೆ ‘ಕ್ರಷ್’ ಸಿರೀಸ್ ಭಾರತೀಯ ಕಿರುತೆರೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ.

ವರದಿ: ದೇವರಾಜ್ ನಾಯ್ಕ್

ಇದನ್ನೂ ಓದಿ: Majestic Film Darshan Birthday: ಮೆಜೆಸ್ಟಿಕ್ ಸಿನಿಮಾ ಮತ್ತೆ ಬಿಡುಗಡೆಗೆ ಸಜ್ಜು; ಫೆ.16ಕ್ಕೆ ನಿಮ್ಮ ನೆಚ್ಚಿನ ಥಿಯೇಟರ್‌ಗಳಲ್ಲಿ ದರ್ಶನ್ ಅಬ್ಬರ

(Aadhya Anand Amazon miniTVs latest series Crushed become a nationwide crush)

Comments are closed.