ಅಭಿಷೇಕ್‌ ಅಂಬರೀಶ್‌ – ಅವಿವಾ ಬಿದ್ದಪ್ಪ ವಿವಾಹ : ಮೊದಲ ಆಮಂತ್ರಣ ಪತ್ರಿಕೆ ಕೊಟ್ಟು ಪ್ರಧಾನಿ ಮೋದಿಯನ್ನು ಮದುವೆಗೆ ಆಹ್ವಾನಿಸಿದ ಸಂಸದೆ ಸುಮಲತಾ

ರಾಜ್ಯದಲ್ಲಿ ಚುನಾವಣೆ ಬಿಸಿ ಏರುತ್ತಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಕೆಲವೇ ದಿನಗಳು ಬಾಕಿ ಇದೆ. ರಾಜ್ಯ ರಾಜಕಾರಣದಲ್ಲಿ ಟಿಕೆಟ್‌ ಹಂಚಿಕೆಗೆ ಪಕ್ಷಗಳು ಹರಸಾಹಸ ಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸುಮಲತಾ ತಮ್ಮ ಮಗನ ಮದುವೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುವ (Abhishek Ambarish – Aviva Biddappa Marriage) ಸಲುವಾಗಿ ಭೇಟಿ ಮಾಡಿದ್ದಾರೆ. ಮುಂದಿನ ಜೂನ್‌ ತಿಂಗಳಲ್ಲಿ ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವಾ ಅವರ ವಿವಾಹಮಹೋತ್ಸಹ ನಡೆಯಲಿದ್ದು, ನರೇಂದ್ರ ಮೋದಿಯನ್ನು ಖುದ್ದಾಗಿ ಆಮಂತ್ರಣ ನೀಡಿ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಜೊತೆ ಸಂಸದೆ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್​ ಜೊತೆಯಾಗಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಳೆದ ವರ್ಷ ಸುಮಲತಾ ಹಾಗೂ ಅಂಬರೀಶ್‌ ಅವರ ಒಬ್ಬನೇ ಮಗನಾದ ಅಭಿಷೇಕ್‌ ಅಂಬರೀಶ್‌ ಹಾಗೂ ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ನಡೆದಿದೆ. ಹೀಗಾಗಿ ಇವರಿಬ್ಬರ ವಿವಾಹವು ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಹಂಚಿಕೆ ಪ್ರಾರಂಭವಾಗಿದೆ. ಇತ್ತೀಚೆಗಷ್ಟೇ ಸಂಸದೆ ಸುಮಲತಾ ತಮ್ಮ ಬೆಂಬಲವನ್ನು ಬಿಜೆಪಿಗೆ ನೀಡಿದ್ದಾರೆ. ಸದ್ಯ ಸಂಸದೆ ಸುಮಲತಾ ತಮ್ಮ ಮಗನೊಂದಿಗೆ ಹೋಗಿ ಪ್ರಧಾನಿ ಮೋದಿಯವರಿಗೆ ಆಮತ್ರಣ ಪತ್ರಿಕೆ ನೀಡಿ ವಿವಾಹಕ್ಕೆ ಆಹ್ವಾನಿಸಿದ್ದಾರೆ, ಮೊದಲ ಆಮಂತ್ರಣ ಪತ್ರಿಕೆಯನ್ನು ಮೋದಿಯವರಿಗೆ ನೀಡಿರುವುದು ಬಹಳ ವಿಶೇಷವಾಗಿದೆ.

ಸಂಸದೆ ಸುಮಲತಾ ತಮ್ಮ ಮಗನ ಮದುವೆ ಆಮಂತ್ರಣ ಪತ್ರಿಕೆಯನ್ನು ಪ್ರಧಾನಿ ಮೋದಿಯವರಿಗೆ ಮಾತ್ರವಲ್ಲದೇ, ಹಲವು ರಾಜಕೀಯ ಸಹವರ್ತಿಗಳಿಗೆ ನೀಡಿದ್ದಾರೆ. ಗೃಹ ಸಚಿವ ಅಮಿತಾ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಸೇರಿದಂತೆ ಹಲವು ಪ್ರಮುಖ ಸಂಸದರು ಹಾಗೂ ಸಚಿವರುಗಳಿಗೆ ಆಹ್ವಾನ ಪತ್ರಿಕೆಯನ್ನು ನೀಡಲಿದ್ದಾರೆ ಎಂದು ವದಂತಿಗಳಿವೆ.

ಇನ್ನು ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ನಿಶ್ಚಿತಾರ್ಥವು ಡಿಸೆಂಬರ್ 11 ರಂದು ನಡೆದಿತ್ತು. ನಟ ಯಶ್ ಸೇರಿದಂತೆ ಸ್ಯಾಂಡಲ್​ವುಡ್​ನ ಹಲವು ಸೆಲೆಬ್ರಿಟಿಗಳು ಹಾಗೂ ಕೆಲವು ರಾಜಕಾರಣಿಗಳು ನಿಶ್ಚಿತಾರ್ಥ ಸಾಮಾರಂಭದಲ್ಲಿ ಭಾಗಿಯಾಗಿದ್ದರು. ಈ ನವಜೋಡಿಯ ವಿವಾಹವು ಜೂನ್ ತಿಂಗಳಲ್ಲಿ ನಡೆಯಲಿದ್ದು, ರಾಜ್ಯದ ಪ್ರಮುಖ ರಾಜಕಾರಣಿಗಳು, ರಾಷ್ಟ್ರದ ಪ್ರಮುಖ ರಾಜಕಾರಣಿಗಳು ಸೇರಿದಂತೆ ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹಲವು ಪ್ರಮುಖ ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಬೆಂಗಳೂರಿನಲ್ಲಿಯೇ ಅದ್ಧೂರಿಯಾಗಿ ವಿವಾಹ ನಡೆಯಲಿದ್ದು, ಆ ಬಳಿಕ ಮಂಡ್ಯದಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ನಡೆಯಲಿದೆ.

ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ : ಪುಷ್ಪ 2 ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಸಿನಿತಂಡ

ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾ ನಿಖಿಲ್ ಕುಮಾರಸ್ವಾಮಿ ವಿರುದ್ಧ ಜಯಭೇರಿ ಭಾರಿಸಿ ಸಂಸದರಾದರು. ಇತ್ತೀಚೆಗಷ್ಟೆ ತಮ್ಮ ಪೂರ್ಣ ಬೆಂಬಲವನ್ನು ಬಿಜೆಪಿಗೆ ನೀಡಿರುವ ಸುಮಲತಾ, ಸಂಸದೆಯಾಗಿ ಅವಧಿ ಪೂರ್ಣವಾದ ಬಳಕ ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆಯಲಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಸುಮಲತಾ ಸಂಸದೆಯಾಗಿದ್ದು, ವಿವಿಧ ಪಕ್ಷಗಳ ಸಂಸದ ಗೆಳೆಯರು ಸುಮಲತಾ ಅವರಿಗಿದ್ದಾರೆ. ಸುಪ್ರಿಯಾ ಸುಲೆ, ಜಯಾ ಬಚ್ಚನ್, ಕನಮೋಳಿ ಸೇರಿದಂತೆ ಇನ್ನೂ ಹಲವು ಪ್ರಮುಖ ಮಹಿಳಾ ಸಂಸದೆಯರೊಟ್ಟಿಗೆ ಸುಮಲತಾ ಅವರಿಗೆ ಗೆಳೆತನವಿದೆ ಹಾಗಾಗಿ ಪಕ್ಷಭೇದವಿಲ್ಲದೆ ಹಲವು ಸಂಸದ ಗೆಳೆಯರಿಗೆ ಸುಮಲತಾ ಅವರು ಮಗನ ಮದುವೆ ಆಹ್ವಾನ ಪತ್ರಿಕೆ ನೀಡಲಿದ್ದಾರೆ.

Abhishek Ambarish – Aviva Biddappa Marriage: MP Sumalatha invited PM Modi to the wedding by giving the first invitation letter.

Comments are closed.