ಇಸ್ರೋದ ಮಾಜಿ ರಾಕೆಟ್ ವಿಜ್ಞಾನಿ ಸಿಆರ್‌ ಸತ್ಯ ನಿಧನ

ಬೆಂಗಳೂರು : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ ಹಾಗೂ ಇಸ್ರೋದ ರಾಕೇಟ್‌ ವಿಜ್ಞಾನಿಯದ ಹಾಗೂ ಭಾರತದ ಪ್ರಮುಖ ಕ್ಷಿಪಣಿ ಪಿತಾಮಹಾ ದಿವಂಗತ ಅಬ್ದುಲ್‌ ಕಲಾಂ ಅವರ ಒಡನಾಡಿ ಸಿಆರ್‌ ಸತ್ಯ (80 ವರ್ಷ) ಇಂದು ಆಸ್ಪತ್ರೆಯಲ್ಲಿ (Rocket scientist CR Satya passes away) ನಿಧನರಾಗಿದ್ದಾರೆ. ವಿಜ್ಞಾನಿ ಮಾತ್ರವಲ್ಲದೇ ವಿಜ್ಞಾನ ಲೇಖಕರಾಗಿಯೂ ಜನಪ್ರಿಯತೆ ಗಳಿಸಿದ್ದ ಸಿಆರ್‌ ಸತ್ಯ ಅವರು ಇಂದು ವಿಜ್ಞಾನ ಕ್ಷೇತ್ರವನ್ನೇ ಅಗಲಿದ್ದಾರೆ.

ಭಾರತದ ಖ್ಯಾತ ಅಣು ತಜ್ಞ ಡಾ. ರಾಜರಾಮಣ್ಣ ಅವರ ಮಾರ್ಗದರ್ಶನದಲ್ಲಿ ಭಾರತದ ರಾಕೆಟ್‌ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿದವರು ಸಿಆರ್‌ ಸತ್ಯ ಅವರು. ಇನ್ನು ಸಿಆರ್‌ ಸತ್ಯ ಅವರು ಕೇವಲ ಬಾಹ್ಯಾಕಾಶ ವಿಜ್ಞಾನಿಯಾಗಿರದೇ, ಸಾಹಿತ್ಯ ಕ್ಷೇತ್ರದಲ್ಲೂ ಕೃಷಿ ಮಾಡಿ ಖ್ಯಾತಿ ಪಡೆದಿದ್ದರು. ಹಲವು ಲಲಿತ ಪ್ರಬಂಧಗಳನ್ನು ಬರೆದಿದ್ದ ಸಿಆರ್‌ ಸತ್ಯ, ‘ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ’ ಎಂಬ ಶಿಶು ಗೀತೆ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು.

ಭಾರತದಲ್ಲಿ ರಾಕೆಟ್‌ ತಂತ್ರಜ್ಞಾನ ಅಂಬೆಗಾಲಿಡುವ ಸಮಯದಲ್ಲಿ, ಈ ತಂತ್ರಜ್ಞಾನಕ್ಕೆ ಉತ್ತಮ ದಿಶೆ ತೋರಿದವರಲ್ಲಿ ಸಿಆರ್‌ ಸತ್ಯ ಅತ್ಯಂತ ಪ್ರಮುಖರು. ಸುಮಾರು ಐವತ್ತಕ್ಕೂ ಹೆಚ್ಚು ವರ್ಷಗಳ ಸುದೀರ್ಘ ಸೇವೆಯಲ್ಲಿ, ಸಿಆರ್‌ ಸತ್ಯ ಅವರು ಭಾರತದ ರಾಕೆಟ್‌ ತಂತ್ರಜ್ಞಾನವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದರು. ಅಲ್ಲದೇ ರಾಕೆಟ್‌ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವಲ್ಲೂ ಸಿಆರ್‌ ಸತ್ಯ ಅವರು ಅತ್ಯಂತ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ.

ಇಸ್ರೋ ಶೈಶಾವಸ್ಥೆಯಲ್ಲಿ ಇರುವಾಗ ಸೈಕಲ್ ಮೇಲೆ ರಾಕೆಟ್ ನೋಸ್ ಹೊತ್ತು ಹೋಗುತ್ತಿರುವ ಚಿತ್ರ ನೋಡದವರು ಇಲ್ಲ ಎನ್ನಬಹುದು. ಸೈಕಲ್ನ ಬದಿಯಲ್ಲಿ ಬಿಳಿ ಅಂಗಿಯಲ್ಲಿ ಇರುವವರು ವಿಜ್ಞಾನಿ ಸತ್ಯ ಅವರು. ಶ್ರೀ ಅಬ್ದುಲ್ ಕಲಾಂ ಅವರ ಜೊತೆಗೆ ಭುಜಕ್ಕೆ ಭುಜ ಕೊಟ್ಟು ದುಡಿದ ಕೀರ್ತಿ ಇವರದು , ಇವರು ಎ ಆರ್ ಕೃಷ್ಣ ಶಾಸ್ತ್ರಿಗಳ ಮೊಮ್ಮಗನೂ ಹೌದು. ಇವರು ಕೇವಲ ಬಾಹ್ಯಾಕಾಶ ವಿಜ್ಞಾನಿಯಾಗಿರದೆ ಉತ್ತಮ ಬರಹಗಾರರೂ ಆಗಿದ್ದರು. ಲಲಿತ ಪ್ರಬಂಧಗಳ ಜೊತೆಗೆ ಅವರು ಬರೆದ ಶಿಶು ಗೀತೆ ‘ ಆಚೆ ಮನೆ ಸುಬ್ಬಮ್ಮನಿಗೆ ಏಕಾದಶಿ ಉಪವಾಸ ‘ ಕೇಳದ ಕನ್ನಡಿಗನಿಲ್ಲ ಎನ್ನವಷ್ಟು ಪ್ರಸಿದ್ದಿ ಪಡೆದಿದೆ.

ಇನ್ನೂ ಅವರ ನಿಧನದ ಸುದ್ದಿ ತಿಳಿದ ವಿಜ್ಞಾನ ಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದು, ಇಸ್ರೋ ಸೇರಿದಂತೆ ದೇಶದ ಅನೇಕ ವೈಜ್ಞಾನಿಕ ಕ್ಷೇತ್ರದ ಗಣ್ಯರು ಅಂತಿಮ ಗೌರವ ಸಲ್ಲಿಸಿದ್ದಾರೆ. ” ತುಂಬಿದ ಕೊಡ ಎಂದಿಗೂ ತುಳುಕುವುದಿಲ್ಲ ಎನ್ನುವ ಮಾತಿದೆ. ಇಂತಹ ಮಾತುಗಳನ್ನ ಶ್ರೀ ಸಿ ಆರ್ ಸತ್ಯ ಅವರಂತಹ ಮಹಾನ್ ಆತ್ಮಗಳನ್ನ ನೋಡಿ ಹೇಳಿರುತ್ತಾರೆ ಎನ್ನುವುದು ನನ್ನ ನಂಬಿಕೆ. ಅವರ ಸಾಧನೆಯನ್ನು ಓದಲು ಕೂಡ ನಾವು ಸಮಯ ಬೇಡುತ್ತೇವೆ ಅಷ್ಟು ಸಾಧನೆ ಮಾಡಿದ ವ್ಯಕ್ತಿ ಇಂದು ‘ ಸಾಕಿನ್ನು ಇಲ್ಲಿಯ ಆಟ ‘ ಎಂದು ಹೊರಟು ಬಿಟ್ಟಿದ್ದಾರೆ. ಇಂತಹ ಹಿರಿಯ ಚೇತನದ ಜೊತೆಗೆ ಒಂದಷ್ಟು ಸಮಯ ಕಳೆದ ಪುಣ್ಯ ನಮ್ಮದು.

ಇದನ್ನೂ ಓದಿ : ಬ್ರಿಟಾನಿಯಾ ಇಂಡಸ್ಟ್ರೀಸ್ : ಬಾರೀ ಲಾಭಾಂಶ ಘೋಷಣೆ

ಹೋಗಿ ಬನ್ನಿ , ಮತ್ತೆ ಹುಟ್ಟಿ ಬನ್ನಿ ಎನ್ನುವ ಮಾತುಗಳಿಗೆ ನಿಜ ವಾರಸುದಾರರು ಇವರು . ಭಾರತ ನಿಮ್ಮಂತಹ ಪ್ರತಿಭೆಯನ್ನ ಸೃಷ್ಟಿಸಲು ಅದೆಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ತಿಳಿಯದು . ನಷ್ಟದ ಬೆಲೆ ಕಟ್ಟಲಾಗದು . ಸಾರ್ ನಿಮ್ಮ ನಯ -ವಿನಯ -ಪ್ರೀತಿ ಮಾತುಗಳು ಎಂದಿಗೂ ನೆನಪಿನಲ್ಲಿರುತ್ತದೆ . ಹೋಗಿ ಬನ್ನಿ ಸಾರ್ . ಶುಭವಿದಾಯ .” ಎಂದು ರಂಗಸ್ವಾಮಿ ಮೂಕನಹಳ್ಳಿಯವರು ಇವರ ಸಾವಿಗೆ ಸಂತಾಪವನ್ನು ಸೂಚಿಸಿದ್ದಾರೆ.

Former ISRO rocket scientist CR Satya passes away

Comments are closed.