ಸದಾ ಕಾಲ ಯೋಗಾಭ್ಯಾಸ ಹಾಗೂ ವರ್ಕೌಟ್ ವಿಡಿಯೋಗಳ ಮೂಲಕವೇ ಗಮನ ಸೆಳೆಯುತ್ತಿದ್ದ ಬಾಲಿವುಡ್ ನ ಬೆಡಗಿ ಶಿಲ್ಪಾ ಸದ್ಯ ಸೊಂಟ ಬಳುಕಿಸಿ ಡ್ಯಾನ್ಸ್ ಮಾಡಿ ಮನಸೆಳೆಯೋದು ಅನುಮಾನ. ಯಾಕೆ ಅಂತಿರಾ ಬಳುಕುವ ಬಳ್ಳಿಯಂತಿದ್ದ ಶಿಲ್ಪಾ ಶೆಟ್ಟಿ (Shilpa Shetty broke her leg) ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ವೀಲ್ಹ್ ಚೇರ್ ನಲ್ಲಿ ಕೂರುವಷ್ಟು ಗಾಯಗೊಂಡಿರೋ ಶಿಲ್ಪಾ ಶೆಟ್ಟಿ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ಶಿಲ್ಪಾ ಶೆಟ್ಟಿ ಕೆಲ ಕಾಲ ಬಾಲಿವುಡ್ ನಿಂದ ದೂರ ಉಳಿದಿದ್ದರೂ ಸದ್ಯ ಬಾಲಿವುಡ್ ನಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ತಮ್ಮದೇ ಯೋಗಾಭ್ಯಾಸದ ಯೂಟ್ಯೂಬ್ ಚಾನೆಲ್, ಯೋಗಾ ಸಿಡಿ, ಕಿರುತೆರೆ ಶೋ, ರಿಯಾಲಿಟಿ ಶೋ ಹೀಗೆ ನೊರೆಂಟು ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದ ಶಿಲ್ಪಾ ಶೆಟ್ಟಿಗೆ 40 ವರ್ಷ ಕಳೆದರೂ ಇನ್ನೂ ಬೇಡಿಕೆ ಕಳೆದುಕೊಂಡಿಲ್ಲ. ಹೀಗಾಗಿ ಇಂದಿಗೂ ಶಿಲ್ಪಾ ಶೆಟ್ಟಿ ಶೂಟಿಂಗ್ ನಲ್ಲೇ ಬ್ಯುಸಿಯಾಗಿರತಾರೇ. ಹೀಗೆ ಶೂಟಿಂಗ್ ನಲ್ಲಿ ಆಕ್ಷ್ಯನ್ ಸಿಕ್ವೇನ್ಸ್ ನಲ್ಲಿ ನಟಿಸುತ್ತಿದ್ದ ಶಿಲ್ಪಾ ಶೆಟ್ಟಿ ಕಾಲು ಫ್ಯಾಕ್ಚರ್ ಆಗಿದೆ.
ಇಂಡಿಯನ್ ಪೊಲೀಸ್ ಪೋರ್ಸ್ ಸಿನಿಮಾ ಶೂಟಿಂಗ್ ವೇಳೆ ಶಿಲ್ಪಾ ಶೆಟ್ಟಿ ಗಾಯಗೊಂಡಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ವೆಬ್ ಸೀರಿಸ್ ಓಟಿಟಿಯಲ್ಲಿ ಪ್ರಸಾರವಾಗಲಿದ್ದು, ಈ ಸೀರಿಸ್ ಶೂಟಿಂಗ್ ವೇಳೆಯೇ ಶಿಲ್ಪಾ ಎಡಗಾಲು ಮುರಿತಕ್ಕೊಳಗಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಫನ್ನಿಯಾಗಿ ಪೋಸ್ಟ್ ಹಾಕಿರೋ ಶಿಲ್ಪಾ ಶೆಟ್ಟಿ, They Said Roll Camera’, Action ” break a leg ” I took it literally. out of action for six weeks , but I will be back soon ಎಂದು ತಮ್ಮ ಮುರಿದ ಕಾಲಿನ ಬ್ಯಾಂಡೇಜ್ ಪೋಟೋ ಜೊತೆ ಪೋಸ್ಟ್ ಹಾಕಿದ್ದಾರೆ.
ಇನ್ನೂ ಶಿಲ್ಪಾ ಶೆಟ್ಟಿಯ ಈ ಪೋಸ್ಟ್ ಗೆ ಬಾಲಿವುಡ್ ಸೆಲೆಬ್ರೆಟಿಗಳು ಗೆಟ್ ವೆಲ್ ಸೂನ್ ಎಂದು ಶುಭಹಾರೈಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಶಿಲ್ಪಾ ಶೆಟ್ಟಿ ಕೆಜಿಎಫ್-2 ರಿಲೀಸ್ ಆದ ವೇಳೆ ಕೆಜಿಎಫ್-2 ಡೈಲಾಗ್ ಹೊಡೆದು ರಂಜಿಸಿದ್ದರು. ಅಲ್ಲದೇ ಅಗಾಗ ಡ್ಯಾನ್ಸ್ ಹಾಗೂ ರೀಲ್ಸ್ ಗಳ ಮಮೂಲಕವೂ ಅಭಿಮಾನಿಗಳಿಗೆ ಸಪ್ರೈಸ್ ನೀಡುತ್ತಲೇ ಇರುತ್ತಾರೆ.
ಇದನ್ನೂ ಓದಿ : Ramya Re Entry : ರಮ್ಯನಿಗೆ ಜೊತೆಯಾದ ರಾಜ್ ಶೆಟ್ಟಿ: ಸ್ಯಾಂಡಲ್ ವುಡ್ ಮೋಹಕ ತಾರೆ ಗ್ರ್ಯಾಂಡ್ ರೀ ಎಂಟ್ರಿ
Accident during shooting: Shilpa Shetty broke her leg