Green expressway highway : ಬೆಂಗಳೂರಿನಿಂದ ಚೆನ್ನೈಗೆ ಇನ್ನು ಕೇವಲ 2 ಗಂಟೆ ಪ್ರಯಾಣ

ನವದೆಹಲಿ : ಬೆಂಗಳೂರು ಮತ್ತು ಚೆನ್ನೈ ಇನ್ನಷ್ಟು ಹತ್ತಿರವಾಗಲಿದೆ. ಎರಡು ಮಹಾನಗರಗಳ ನಡುವಿನ ಪ್ರಯಾಣದ ಅವಧಿಯನ್ನು 2 ಗಂಟೆಗೆ ಇಳಿಯಲಿದೆ. ಇದಕ್ಕಾಗಿ ಹಸಿರು ಎಕ್ಸ್‌ಪ್ರೆಸ್‌ ಹೆದ್ದಾರಿ (Green expressway highway ) ನಿರ್ಮಾಣ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಮೇ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ್ದರು.

ಚೆನ್ನೈ ಹಾಗೂ ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಾಣವಾದ ನಂತರದಲ್ಲಿ ಎರಡು ನಗರಗಳ ನಡುವಿನ ಅಂತರ ಇನ್ನಷ್ಟು ಕಡಿಮೆಯಾಗಲಿದೆ. ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಈ ಯೋಜನೆ ಹಾದು ಹೋಗಲಿದೆ. 258 ಕಿ.ಮೀ ಉದ್ದದ ಹಸಿರು ಎಕ್ಸ್‌ಪ್ರೆಸ್‌ವೇ ಹೆದ್ದಾರಿಗೆ ಕೇಂದ್ರ ಸರಕಾರ ಸುಮಾರು 1,800 ಕೋಟಿ ರೂ ವಿನಿಯೋಗ ಮಾಡಲಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ ಗೋಲ್ಡ್ ಫೀಲ್ಡ್ (ಕೆಜಿಎಫ್), ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಎಕ್ಸ್‌ಪ್ರೆಸ್‌ವೇ ಕೊನೆಗೊಳ್ಳಲಿದೆ. NHAI (ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ) ಈ ಯೋಜನೆಯನ್ನು ಮೂರು ಹಂತದ ನಿರ್ಮಾಣಗಳಾಗಿ ವಿಂಗಡಿಸಿದೆ.

ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ಹೆದ್ದಾರಿ ಕಾಮಗಾರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಆರು ಖಾಸಗಿ ಕಂಪೆನಿಗಳು ಈಗಾಗಲೇ ಹೆದ್ದಾರಿ ನಿರ್ಮಾಣದ ಕಾರ್ಯವನ್ನು ನಡೆಸುತ್ತಿವೆ. ಹಸಿರು ಹೆದ್ದಾರಿಯು ನಾಲ್ಕು ಪಥದ ಡಬಲ್ ಡೆಕ್ಕರ್ ಎಲಿವೇಟೆಡ್ ರಸ್ತೆಯಾಗಿದೆ. ರಸ್ತೆಯ ಮೂಲಕ ಚೆನ್ನೈ ಮತ್ತು ಬೆಂಗಳೂರು ನಡುವಿನ ಪ್ರಸ್ತುತ ಸರಾಸರಿ ಪ್ರಯಾಣದ ಸಮಯವು ಐದರಿಂದ ಆರು ಗಂಟೆಗಳು ಮತ್ತು ಈ ಹೊಸ ಎಕ್ಸ್‌ಪ್ರೆಸ್‌ವೇ ಅದನ್ನು ಎರಡರಿಂದ ಮೂರು ಗಂಟೆಗಳವರೆಗೆ ಇಳಿಸುವ ನಿರೀಕ್ಷೆಯಿದೆ.

ಹಸಿರು ಹೆದ್ದಾರಿ ಮಾತ್ರವಲ್ಲದೇ ಸಿಲಿಕಾನ್‌ ಸಿಟಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರು ನಡುವಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆದ್ದಾರಿ ನಿರ್ಮಾಣ ವಾಗುತ್ತಿದೆ. ಸುಮಾರು 117 ಕಿಲೋಮೀಟರ್ ಉದ್ದದ ಬೆಂಗಳೂರು-ಮೈಸೂರು ಹೆದ್ದಾರಿಯು ಅಕ್ಟೋಬರ್‌ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ : Bangalore Fever : ಸಿಲಿಕಾನ್ ಸಿಟಿಗೆ ಜ್ವರದ ಬಾಧೆ : ಪ್ರತಿನಿತ್ಯ OPDಗೆ ಬರ್ತಿದ್ದಾರೆ ಸಾವಿರಾರು ರೋಗಿಗಳು

ಇದನ್ನೂ ಓದಿ : Long Sword : ಕೈಯಲ್ಲಿ ತಲವಾರ್​ ಹಿಡಿದು ಗ್ರಾಮದ ಸುತ್ತೆಲ್ಲ ಓಡಾಡಿದ ಯುವಕ : ಸುಳ್ಯ ತಾಲೂಕಿನಲ್ಲಿ ವಿಚಿತ್ರ ಘಟನೆ

Green expressway highway : Bengaluru to Chennai in 2 hours

Comments are closed.