Asia Cup 2022 : ಭಾರತದ ಟಾಪ್-3 ದಾಂಡಿಗರ “ದುಬೈ ಟ್ರ್ಯಾಕ್ ರೆಕಾರ್ಡ್” ಹೇಗಿದೆ ಗೊತ್ತಾ?

ಬೆಂಗಳೂರು: (Dubai Track Record ) ಟಿ20 ಕ್ರಿಕೆಟ್’ನ ನಂ.1 ತಂಡವಾಗಿರುವ ಟೀಮ್ ಇಂಡಿಯಾ ಏಷ್ಯಾ ಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದೆ. ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್’ನಲ್ಲಿ ಟಿ20 ಸರಣಿ ಗೆದ್ದು ಬಂದಿರುವ ಭಾರತ, ಏಷ್ಯಾ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಏಷ್ಯಾ ಕಪ್’ಗೆ ಈಗಾಗ್ಲೇ ಭಾರತ ತಂಡವನ್ನು ಪ್ರಕಟಿಸ ಲಾಗಿದ್ದು, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದಾರೆ. ರಾಹುಲ್, ಕೊಹ್ಲಿ ಕಂಬ್ಯಾಕ್ ಮಾಡಿರುವುದರಿಂದ ಭಾರತದ ಟಾಪ್-3ನಲ್ಲಿ ರೋಹಿತ್ ಶರ್ಮಾ ಜೊತೆ ಕಾಣಿಸಿಕೊಳ್ಳಲಿದ್ದಾರೆ.

ನಾಯಕ ರೋಹಿತ್ ಶರ್ಮಾ (Rohit Sharma) ಜೊತೆ ಕೆ.ಎಲ್ ರಾಹುಲ್ (KL Rahul) ಇನ್ನಿಂಗ್ಸ್ ಆರಂಭಿಸಲಿದ್ರೆ, ವಿರಾಟ್ ಕೊಹ್ಲಿ (Virat Kohli) ತಮ್ಮ ನೆಚ್ಚಿನ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಹಾಗಾದ್ರೆ ಯುಎಇನಲ್ಲಿ ಈ ತ್ರಿಮೂರ್ತಿಗಳ ಟ್ರ್ಯಾಕ್ ರೆಕಾರ್ಡ್ ಹೇಗಿದೆ? ಮೂವರಲ್ಲಿ ಯಾರ್ಯಾರು ಯುಎಇನಲ್ಲಿ ಎಷ್ಟೆಷ್ಟು ಪಂದ್ಯಗಳನ್ನಾಡಿದ್ದಾರೆ, ಯಾರ ಸ್ಟ್ರೈಕ್’ರೇಟ್ ಹೆಚ್ಚು? ಈ ಬಗ್ಗೆ ಕ್ರಿಕೆಟ್ ಪ್ರಿಯರಲ್ಲಿ ಕುತೂಹಲ ಸಾಮಾನ್ಯ. ಆ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಯುಎಇನಲ್ಲಿ ಅಂತಾರಾಷ್ಟ್ರೀಯ ಟಿ20 ಹಾಗೂ ಐಪಿಎಲ್ ಪಂದ್ಯಗಳು ಸೇರಿ ಕೆ.ಎಲ್ ರಾಹುಲ್ 29 ಇನ್ನಿಂಗ್ಸ್’ಗಳನ್ನಾಡಿದ್ದು, 51ರ ಸರಾಸರಿಯಲ್ಲಿ 132.2ರ ಸ್ಟ್ರೇಕ್’ರೇಟ್’ನೊಂದಿಗೆ 1277 ರನ್ ಗಳಿಸಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಯುಎಇನಲ್ಲಿ 31 ಟಿ20 ಇನ್ನಿಂಗ್ಸ್’ಗಳನ್ನಾಡಿದ್ದು, 33.8ರ ಸರಾಸರಿಯಲ್ಲಿ 117.8ರ ಸ್ಟ್ರೇಕ್’ರೇಟ್’ನೊಂದಿಗೆ 846 ರನ್ ಕಲೆ ಹಾಕಿದ್ದಾರೆ. ನಾಯಕ ರೋಹಿತ್ ಶರ್ಮಾ ಯುಎಇನಲ್ಲಿ ಆಡಿರುವ 28 ಟಿ20 ಇನ್ನಿಂಗ್ಸ್’ಗಳಿಂದ 25.7ರ ಸರಾಸರಿಯಲ್ಲಿ 129.9ರ ಸ್ಟ್ರೇಕ್’ರೇಟ್’ನೊಂದಿಗೆ 721 ರನ್ ಗಳಿಸಿದ್ದಾರೆ. ಹೀಗೆ ಭಾರತದ ಬ್ಯಾಟಿಂಗ್ ಕ್ರಮಾಂಕದ ಟಾಪ್-3 ಬ್ಯಾಟರ್’ಗಳಲ್ಲಿ ನಾಯಕ ರೋಹಿತ್ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿಗಿಂತ ಉಪನಾಯಕ ಕೆ.ಎಲ್ ರಾಹುಲ್ ಅವರೇ ಉತ್ತಮ ದಾಖಲೆ ಹೊಂದಿದ್ದಾರೆ.

ಯುಎಇನಲ್ಲಿ ಭಾರತದ ಟಾಪ್-3 ಬ್ಯಾಟರ್’ಗಳ ಟಿ20 ಟ್ರ್ಯಾಕ್ ರೆಕಾರ್ಡ್
ಕೆ.ಎಲ್ ರಾಹುಲ್
ಇನ್ನಿಂಗ್ಸ್: 29
ರನ್: 1,277
ಸರಾಸರಿ: 51
ಸ್ಟ್ರೇಕ್’ರೇಟ್: 132.3

ವಿರಾಟ್ ಕೊಹ್ಲಿ
ಇನ್ನಿಂಗ್ಸ್: 31
ರನ್: 846
ಸರಾಸರಿ: 33.8
ಸ್ಟ್ರೇಕ್’ರೇಟ್: 117.8

ರೋಹಿತ್ ಶರ್ಮಾ
ಇನ್ನಿಂಗ್ಸ್: 28
ರನ್: 721
ಸರಾಸರಿ: 25.7
ಸ್ಟ್ರೇಕ್’ರೇಟ್: 129.9

ಇದನ್ನೂ ಓದಿ : Two Champions for Ranji Trophy : ಇನ್ನು ಮುಂದೆ ರಣಜಿ ಟ್ರೋಫಿಗೆ ಇಬ್ಬರು ಚಾಂಪಿಯನ್ಸ್, ಏನಿದು ಬಿಸಿಸಿಐನ ಹೊಸ ಪ್ಲಾನ್‌ ?

ಇದನ್ನೂ ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್

Asia Cup 2022 Do you know how the Dubai Track Record of KL Rahul Rohit Sharma And Virat Kohli

Comments are closed.