ಭಾನುವಾರ, ಜೂನ್ 15, 2025
HomeCinemaSaptami Gowda : ಕಾಂತಾರಕ್ಕೆ ಕೊನೆಗೂ ಸಿಕ್ಕಳು ನಾಯಕಿ : ಲೀಲಾ ಪಾತ್ರದಲ್ಲಿ ಮಿಂಚಲು ಬಂದ್ರು...

Saptami Gowda : ಕಾಂತಾರಕ್ಕೆ ಕೊನೆಗೂ ಸಿಕ್ಕಳು ನಾಯಕಿ : ಲೀಲಾ ಪಾತ್ರದಲ್ಲಿ ಮಿಂಚಲು ಬಂದ್ರು ಸಪ್ತಮಿಗೌಡ

- Advertisement -

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಒಂದಾದ‌‌ ಮೇಲೊಂದು ಸಿನಿಮಾಗಳು ತೆರೆಗೆ ಬರ್ತಿವೆ. ಇನ್ನೊಂದೆಡೆ ಮತ್ತಷ್ಟು ಬಿಗ್ ಬಜೆಟ್ ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗ್ತಿವೆ. ಈ ಸಿನಿಮಾಗಳ ಪೈಕಿ ಸಖತ್ ಸದ್ದು ಮಾಡ್ತಿರೋದು ಕಾಂತಾರ ಸಿನಿಮಾ. ಹೊಂಬಾಳೆ ಫಿಲ್ಮ್ಂ ನ 11 ನೇ ಬಹುನೀರಿಕ್ಷಿತ ಚಿತ್ರವಾಗಿರೋ ಕಾಂತಾರ (Saptami Gowda) , ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಇದರ ಬೆನ್ನಲ್ಲೇ ಈಗ ಸಿನಿಮಾದ ನಾಯಕಿ ಯಾರು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಹೌದು ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಬಳುಕುವ ಬಳ್ಳಿ ಸಪ್ತಮಿ ಗೌಡ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಜೊತೆಯಾಗಲಿದ್ದಾರೆ.

Acting Saptami Gowda in Kantara Cinema

ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆದರೂ ಸಿನಿಮಾದ ನಾಯಕಿ ಯಾರು ಎಂಬ ಸಂಗತಿಯನ್ನು ಸಸ್ಪೆನ್ಸ್ ಆಗಿಟ್ಟಿದ್ದ ಚಿತ್ರತಂಡ ನಟಿ ಸಪ್ತಮಿಗೌಡ ಹುಟ್ಟುಹಬ್ಬದಂದು ಕಾಂತಾರದ ಹೊಸ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಅಭಿಮಾನಿಗಳಿಗೆ ಸಪ್ರೈಸ್ ನೀಡಿದೆ. Introducing Our Leela From the World of kantara ಎಂದು ಹೊಂಬಾಳೆ ಫಿಲ್ಮ್‌ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದೆ. ಹೊಂಬಾಳೆ ಫಿಲ್ಮ್‌ ನ ಈ ಪೋಸ್ಟ್ ಗೆ 10 ಸಾವಿರ ಜನ ಲೈಕ್ಸ್ ಒತ್ತಿದ್ದಾರೆ.

Acting Saptami Gowda in Kantara Cinema 3

ಕಾಂತಾರ ಸಿನಿಮಾವನ್ನು ಸ್ವತಃ ರಕ್ಷಿತ್ ಶೆಟ್ಟಿ ನಿರ್ದೇಶಿಸಿದ್ದು, ನಾಯಕರಾಗಿ ನಟಿಸುತ್ತಿದ್ದಾರೆ.‌ಹೊಂಬಾಳೆ ಫಿಲ್ಮ್ ನ ವಿಜಯ್ ಕಿರಂಗದೂರು ನಿರ್ಮಿಸುತ್ತಿದ್ದಾರೆ. ಈಗ ಈ ವಿಭಿನ್ನ ಕತೆಯ ನಾಯಕಿಯಾರು ಅನ್ನೋ ಸಂಗತಿ ರಿವೀಲ್ ಆಗಿದೆ. ಕಾಂತಾರ ಸಿನಿಮಾದ ಲೀಲಾ ಪಾತ್ರಕ್ಕೆ ‌ಸಪ್ತಮಿ ಗೌಡ ಬಣ್ಣ ಹಚ್ಚಿದ್ದು, ಪೊಲೀಸ್ ಪೇದೆಯ ಪಾತ್ರದಲ್ಲಿ ಸಪ್ತಮಿಗೌಡ ಕಾಣಿಸಿಕೊಂಡಿದ್ದಾರೆ.

Acting Saptami Gowda in Kantara Cinema 2

ಸಪ್ಟೆಂಬರ್ 30 ರಂದು ಕಾಂತಾರ ತೆರೆಗೆ ಬರಲಿದೆ. ದಕ್ಷಿಣ ಕನ್ನಡ ಹಾಗೂ ಕರಾವಳಿ ಭಾಗದ ಪ್ರಮುಖ ಜಾನಪದ ಕಲೆ ಕಂಬಳವನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ರಕ್ಷಿತ್ ಶೆಟ್ಟಿ ಮತ್ತೊಂದು‌ ವಿಭಿನ್ನ ಸಬ್ಜೆಕ್ಟ್ ನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸಲು ಮುಂದಾಗಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಸಿನಿಮಾ ಜನಮನಗೆದ್ದಿದ್ದು, ಎಲ್ಲರೂ ರಕ್ಷಿತ್ ನಟನೆಯನ್ನು ಕೊಂಡಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : ಒಂದೇ ವಾರದಲ್ಲಿ ₹ 200 ಕೋಟಿ ಗಳಿಸಿದ ವಿಕ್ರಮ್ ; ಯಶಸ್ಸಿನ ಖುಷಿಯಲ್ಲಿ ನಿರ್ದೇಶಕನಿಗೆ ಕಾರನ್ನು ಉಡುಗೊರೆ ನೀಡಿದ ಕಮಲ್ ಹಾಸನ್

ಇದನ್ನೂ ಓದಿ : Sonam Kapoor : ನಟಿ ಸೋನಂ ಕಪೂರ್​ ಪ್ರೆಗ್ನೆನ್ಸಿ ಫೋಟೋಶೂಟ್​: ಶ್ವೇತ ವರ್ಣದ ಧಿರಿಸಿನಲ್ಲಿ ಬೇಬಿ ಬಂಪ್​ ಪ್ರದರ್ಶನ

Acting Saptami Gowda in Kantara Cinema

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular