ಇಂದು ನಟ ಡಾ. ಅಂಬರೀಶ್‌ ಸ್ಮಾರಕ ಅನಾವರಣ: ಸಿಎಂ ಸೇರಿ ಹಲವು ಗಣ್ಯರು ಭಾಗಿ

ಬೆಂಗಳೂರು : (Actor Ambarish Memorial Lokarpane) ಕನ್ನಡ ಚಿತ್ರರಂಗದ ಖ್ಯಾತ ನಟ ಮಂಡ್ಯದ ಗಂಡು ಡಾ. ಅಂಬರೀಶ್‌ ಅವರ ಸ್ಮಾರಕ ಇಂದು ಲೋಕಾರ್ಪಣೆಗೊಳ್ಳಲಿದೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ವಿಶೇಷ ವಿನ್ಯಾಸದಲ್ಲಿ ನಿರ್ಮಾಣಗೊಂಡ ಅಂಬರೀಶ್‌ ಅವರ ಸ್ಮಾರಕವನ್ನು ಇಂದು ಸಂಜೆ 6 ಗಂಟೆಗೆ ಅನಾವರಣಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಕೂಡ ಭಾಗಿಯಾಗಲಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಸುಮಾರು 1.4 ಎಕರೆ ವಿಸ್ತಾರದ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಗೊಂಡಿದ್ದು, 2022 ರಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರು ಸ್ಮಾರಕ ನಿರ್ಮಾಣಕ್ಕೆ ಐದು ಕೋಟಿ ರೂ ಬಿಡುಗಡೆ ಮಾಡಿದ್ದರು. ಇದಲ್ಲದೇ ನಗರದ ರೇಸ್‌ಕೋರ್ಸ್‌ ರಸ್ತೆಗೆ ಹಿರಿಯ ನಟ ಅಂಬರೀಶ್‌ ಹೆಸರಿಡಲು ಸಿಎಂ ಒಪ್ಪಿಗೆ ಸೂಚಿಸಿದ್ದು, ಈ ಕಾರ್ಯಕ್ರಮ ಕೂಡ ಇಂದೇ ನೆರವೇರಲಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅಂಬರೀಶ್‌ ಅವರ ಹೆಸರನ್ನು ರೇಸ್‌ ಕೋರ್ಸ್‌ ರಸ್ತೆಗೆ ಇಡುವಂತೆ ಸರಕಾರಕ್ಕೆ ಮನವಿ ಮಾಡಿದ್ದು, ರಾಜಕಾರಣಿಯಾಗಿ ಸಾಕಷ್ಟು ಜನಪರ ಕೆಲಸಗಳನ್ನು ಮಾಡಿದ, ಜೊತೆಗೆ ನಟನೆಯ ಮೂಲಕವೂ ಅಪಾರ ಅಭಿಮಾನಿಗಳನ್ನು ಸಂಪಾಧಿಸಿದ್ದ ಮಂಡ್ಯದ ಗಂಡು ಡಾ. ಅಂಬರೀಶ್‌ ಅವರ ಸ್ಮಾರಕ ಲೋಕಾರ್ಪಾಣೆಗೆ ಸರಕಾರ ಒಪ್ಪಿಗೆ ನೀಡಿದೆ. ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜ್‌ ಕುಮಾರ್‌ ಅವರ ಸ್ಮಾರಕದ ಎದುರೇ ಅಂಬರೀಶ್‌ ಸ್ಮಾರಕು ನಿರ್ಮಾಣಗೊಂಡಿದೆ. ಇನ್ನೂ ಇದೇ ಪ್ರದೇಶದಲ್ಲಿ ಶೀಘ್ರವೇ ಪುನೀತ್‌ ರಾಜ್‌ ಕುಮಾರ್‌ ಸ್ಮಾರಕ ಸಹ ನಿರ್ಮಾಣಗೊಳ್ಳಲಿದೆ.

ಇದನ್ನೂ ಓದಿ : JDS Pancharatna yatra : ಪಂಚರತ್ನ ರಥಯಾತ್ರೆ, ಹಳೆಮೈಸೂರು ಭಾಗದಲ್ಲಿ ದಳಪತಿಗಳ ಮೋಡಿ: ಈ ಭಾರಿಯೂ ಜೆಡಿಎಸ್ ಕಿಂಗ್ ಮೇಕರ್ ?

ಇದನ್ನೂ ಓದಿ : Rahul Gandhi Ramya : ತಂದೆ,‌ ತಾಯಿ ಬಳಿಕ ರಾಹುಲ್ ಗಾಂಧಿನೇ ಎಲ್ಲಾ : ವಿಕೆಂಡ್‌ ವಿತ್ ರಮೇಶ್ ಶೋದಲ್ಲಿ ರಮ್ಯ ಮನದಾಳ

ಇದನ್ನೂ ಓದಿ : HD Kumaraswamy vs DK Shivakumar : ಚನ್ನಪಟ್ಟಣ ಕೈ ಅಭ್ಯರ್ಥಿ ಜೆಡಿಎಸ್ ತೆಕ್ಕೆಗೆ: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿತಾರಾ ಡಿ.ಕೆ.ಶಿವಕುಮಾರ್‌

Actor Ambarish Memorial Lokarpane: Today actor Dr. Unveiling of Ambarish Memorial: CM and many dignitaries attended

Comments are closed.