JDS Pancharatna yatra : ಪಂಚರತ್ನ ರಥಯಾತ್ರೆ, ಹಳೆಮೈಸೂರು ಭಾಗದಲ್ಲಿ ದಳಪತಿಗಳ ಮೋಡಿ: ಈ ಭಾರಿಯೂ ಜೆಡಿಎಸ್ ಕಿಂಗ್ ಮೇಕರ್ ?

ಬೆಂಗಳೂರು : 2023 ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ಪ್ರಮಾಣವನ್ನು ಹಾಗೂ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಮತ್ತೊಮ್ಮೆ ಸಿಎಂ‌ಸ್ಥಾನಕ್ಕೇರುವ ಕನಸಿನಲ್ಲಿರೋ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ ಕನಸಿಗೆ ಪಂಚ ರತ್ನ ಯಾತ್ರೆ (JDS Pancharatna yatra) ಹೊಸ ಬಲವನ್ನು ತಂದುಕೊಟ್ಟಿದ್ದರೇ, ಅದ್ದೂರಿಯಾಗಿ ನಡೆದ ಪಂಚ ರತ್ನ ಯಾತ್ರೆ ಸಮಾರೋಪ ಸಮಾರಂಭ ಹಳೆ ಮೈಸೂರು ಭಾಗದಲ್ಲಿ ತೆನೆ ಅರಳಿಸುವ ಭರವಸೆ ಮೂಡಿಸಿದೆ.

ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ಪಂಚ ರತ್ನ ಯಾತ್ರೆ ಸಮಾರೋಪ ಸಮಾರಂಭದಲ್ಲಿ ರಾಜ್ಯದಲ್ಲಿ ಜೆಡಿಎಸ್ ಕಡೆಗೆ ಜನರ ಒಲವು ಹೆಚ್ಚುತ್ತಿರೋದಿಕ್ಕೆ ಸಾಕ್ಷಿ ಒದಗಿಸಿದೆ. ಅಂದಾಜು 10 ಲಕ್ಷ ಜನರನ್ನು ಸೇರಿಸುವ ಉತ್ಸಾಹದಲ್ಲಿದ್ದ ಎಚ್.ಡಿ.ಕುಮಾರಸ್ವಾಮಿಯವರಿಗೆ ಎಲ್ಲ ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಬಲತುಂಬಿದ್ದು ಸುಳ್ಳಲ್ಲ.

ಒಂದು ಕಾಲದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಗೇ ಸೇರಿಯೇ ಬಿಟ್ಟರೂ ಎಂಬಂತಾಗಿದ್ದ ಜಿ.ಟಿ.ದೇವೇಗೌಡರು ಕೂಡ ಸಮಾರಂಭದಲ್ಲಿ ಸಕ್ರಿಯರಾದರು. ಇನ್ನು ತಮ್ಮ ಇಳಿ ವಯಸ್ಸಿನಲ್ಲೂ ಪಕ್ಷದ ಸಂಘಟನೆ, ರಾಜಕೀಯದಲ್ಲಿ ಸಕ್ರಿಯರಾಗಿರುವ ದೇವೆಗೌಡರು ಸಮಾರಂಭದಲ್ಲಿ ಪಾಲ್ಗೊಂಡು ಪಕ್ಷವನ್ನು ಉಳಿಸಿ, ಬೆಳೆಸಿ, ಬಡವರಿಗಾಗಿ ದುಡಿಯಲು ಈ ಪ್ರಾದೇಶಿಕ ಪಕ್ಷ ಅಸ್ತಿತ್ವದಲ್ಲಿದೆ ಎನ್ನುತ್ತ ತಮ್ಮ ಅನಾರೋಗ್ಯದ ನಡುವೆಯೂ ಪಕ್ಷಕ್ಕಾಗಿ, ಬಡವರ ಅಭ್ಯುದಯಕ್ಕಾಗಿ ದುಡಿಯುವ ಎಚ್ಡಿಕೆಗಾಗಿ ತಾನು ಸಮಾರಂಭಕ್ಕೆ ಬಂದಿದ್ದೇನೆ ಎಂದರು.

ಸಮಾರಂಭದಲ್ಲಿ ಅತ್ಯಂತ ವಿವರವಾಗಿ ಮಾತನಾಡಿದ ಮಾಜಿಸಿಎಂ ಎಚ್.ಡಿ.ಕುಮಾರಸ್ವಾಮಿ , ತಾವು ರೈತರು, ಬಡವರಿಗಾಗಿ ತಂದ ಯೋಜನೆಯನ್ನು ನೆನಪಿಸಿಕೊಂಡರು.‌ ಮಾತ್ರವಲ್ಲ ಮುಂದೇ ತರಲಿರೋ ರೈತಸ್ನೇಹಿ ಯೋಜನೆಗಳನ್ನು ಘೋಷಿಸಿದರು. ಕೋಲಾರದ ಕುರುಡುಮಲೆಯಿಂದ ಆರಂಭವಾದ ಈ ಯಾತ್ರೆ ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ಎಲ್ಲೆಡೆ ಸಂಚರಿಸಿ ಉತ್ತರ ರೆಸ್ಪಾನ್ಸ್ ಪಡೆದಿದ್ದು, ಅದ್ದೂರಿ ಸಮಾರೋಪದಲ್ಲಿ ಲಕ್ಷಾಂತರ ಜನರು ಪಾಲ್ಗೊಳ್ಳುವ ಮೂಲಕ ಈ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸಮಬಲದ ಟಕ್ಕರ್ ಕೊಡಲಿದೆ ಅನ್ನೋ ಸಂದೇಶವನ್ನು ರವಾನಿಸಿದೆ.

ಇನ್ನೊಂದೆಡೆ ಸ್ವತಃ ಮಾಜಿಸಿಎಂ ಕುಮಾರ ಸ್ವಾಮಿ ಈ ಭಾರಿ ಜೆಡಿಎಸ್ 50 ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ಮೂಡಿಸಿದ್ದು, ಇದಕ್ಕೆ ನೆರೆದ ಲಕ್ಷಾಂತರ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಮೂಲಕ ಒಪ್ಪಿಗೆಯನ್ನು ನೀಡಿ ದಳಪತಿಗಳ ಗೆಲುವಿನ ನೀರಿಕ್ಷೆ ಬಲಗೊಳಿಸಿದ್ದಾರೆ. ಒಟ್ಟಿನಲ್ಲಿ ಛಲದಂಕಮಲ್ಲನಂತೆ ಕುಮಾರಸ್ವಾಮಿ ಅವರು ರಾಜ್ಯದಾದ್ಯಂತ ಓಡಾಡಿ ನಡೆಸಿದ ಪಂಚ ರತ್ನ ಯಾತ್ರೆ (JDS Pancharatna yatra) ಜೆಡಿಎಸ್ ಪಾಲಿಗೆ ಗೆಲುವಿನ ನವರತ್ನದ ಹಾರ ತೊಡಿಸುವ ಭರವಸೆ ಮೂಡಿಸಿರೋದಂತು ಸತ್ಯ.

ಇದನ್ನೂ ಓದಿ : Rahul Gandhi Ramya : ತಂದೆ,‌ ತಾಯಿ ಬಳಿಕ ರಾಹುಲ್ ಗಾಂಧಿನೇ ಎಲ್ಲಾ : ವಿಕೆಂಡ್‌ ವಿತ್ ರಮೇಶ್ ಶೋದಲ್ಲಿ ರಮ್ಯ ಮನದಾಳ

ಇದನ್ನೂ ಓದಿ : HD Kumaraswamy vs DK Shivakumar : ಚನ್ನಪಟ್ಟಣ ಕೈ ಅಭ್ಯರ್ಥಿ ಜೆಡಿಎಸ್ ತೆಕ್ಕೆಗೆ: ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ಕಣಕ್ಕಿಳಿತಾರಾ ಡಿ.ಕೆ.ಶಿವಕುಮಾರ್‌

Comments are closed.