ನಟ ದರ್ಶನ ಅಭಿನಯದ “ರಾಜ ವೀರ ಮದಕರಿ ನಾಯಕ” ಸಿನಿಮಾ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ನಿರ್ದೇಶಕ ದುನಿಯಾ ಸೂರಿ

ಸ್ಯಾಂಡಲ್‌ವುಡ್‌ನಲ್ಲಿ ಮುಂದಿನ ಎರಡು ವರ್ಷಗಳ ಬ್ಯಾಕ್‌ ಟೂ ಬ್ಯಾಕ್‌ ಸಿನಿಮಾಗಳ ಮೂಲಕ ಸಖತ್‌ ಬ್ಯುಸಿಯಾಗಿರುವ ನಟನೆಂದರೆ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್. ಹೌದು ಕಳೆದ ಜನವರಿ “ಕ್ರಾಂತಿ”ಸಿನಿಮಾ ಬಿಡುಗಡೆಯಾಗಿ ಯಶಸ್ಸಿನ ಬೆನ್ನಲ್ಲೇ, ದರ್ಶನ್‌ ಹುಟ್ಟುಹಬ್ಬದಂದು ಮುಂದಿನ ಸಿನಿಮಾ ಕಾಟೇರ ಬಗ್ಗೆ ನಿರ್ದೇಶಕ ತರುಣ್‌ ಸುಧೀರ್‌ ಅನೌನ್ಸ್‌ ಮಾಡಿದ್ದಾರೆ. ಇದು ನಟ ದರ್ಶನ್‌ ಅಭಿನಯದ 56ನೇ ಸಿನಿಮಾವಾಗಿ ತೆರೆ ಕಾಣಲಿದೆ ಈ ಸಿನಿಮಾದ ಪೋಸ್ಟರ್‌ ರಿಲೀಸ್‌ ಆಗಿದ್ದು, ಸಿನಿಪ್ರೇಕ್ಷಕರು ದರ್ಶನ್‌ ವಿಭಿನ್ನ ಲುಕ್‌ನ್ನು ಕಂಡು ಸಖತ್‌ ಖುಷಿಯಾಗಿದ್ದಾರೆ. ಇದೀಗ ನಿರ್ದೇಶಕ ದುನಿಯಾ ಸೂರಿ (Actor Darshan – Duniya Suri) ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್‌ ಅಭಿನಯದ “D58” ಸಿನಿಮಾದ ಬಗ್ಗೆ ಹೊಸದೊಂದು ಅಪ್‌ಡೇಟ್‌ ಕೊಟ್ಟು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಕೆರಳಿಸಿದ್ದಾರೆ.

ನಿರ್ದೇಶಕ ದುನಿಯಾ ಸೂರಿ ತಮ್ಮ ಟ್ವೀಟರ್‌ನಲ್ಲಿ, “ಸ್ನೇಹಿತರೆ, ಸಾಮಾಜಿಕ ಮಾಧ್ಯಮದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. 2025 ರಂದು D58 ಚಿತ್ರದ ಅಪ್‌ಡೇಟ್ ಜೊತೆ ಬರಲಿದ್ದೇನೆ. ತಡವಾಗುವ ಕಾರಣ ಡಿ ಬಾಸ್ ಅವರು ಬರುವ ದಿನಗಳಲ್ಲಿ ರಾಜ ವೀರ ಮದಕರಿ ನಾಯಕ ಸಿನಿಮಾದ ಶೂಟಿಂಗ್‌ನಲ್ಲಿ ಬಾಗಿಯಾಗಿದ್ದಾರೆ! ಬ್ಯಾಡ್‌ ಮಾನರ್ಸ್‌ ಇನ್ನೇನು ಬಿಡುಗಡೆಯಾಗಲಿದೆ, ನೋಡಿ ಎಂದಿನಂತೆ ಅರಸಿ!” ಎಂದು ಪೋಸ್ಟ್‌ ಮಾಡಿದ್ದಾರೆ.

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿಮಾನಿಗಳು ‘ಕಾಟೇರ’ ಸಿನಿಮಾಕ್ಕಾಗಿ ಎಷ್ಟು ಕಾತರದಿಂದ ಕಾಯುತ್ತಿದ್ದಾರೋ, ಅಷ್ಟೇ ಕುತೂಹಲ, ನಿರೀಕ್ಷೆಯನ್ನು ಅವರ ಮುಂದಿನ ಸಿನಿಮಾ ‘ರಾಜ ವೀರ ಮದಕರಿ ನಾಯಕ’ ಮೇಲೂ ಇಟ್ಟುಕೊಂಡಿದ್ದಾರೆ. ಕೇರಳದಲ್ಲಿ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿಸಿರುವ ತಂಡ, ಕಳೆದೆರಡು ವರ್ಷ ಕೊರೊನಾದಿಂದಾಗಿ ಶೂಟಿಂಗ್‌ಗೆ ಬ್ರೇಕ್ ಹಾಕಿತ್ತು. ಇದೀಗ ಪುನಃ ಶೂಟಿಂಗ್ ಶುರು ಮಾಡುವುದಕ್ಕೆ ಅಣಿಯಾಗಿದ್ದಾರೆ. ಈ ಸಿನಿಮಾಗೆ ಹಂಸಲೇಖ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಿ.ಎಲ್‌. ವೇಣು ‘ರಾಜಾ ವೀರ ಮದಕರಿ ನಾಯಕ’ ಸಿನಿಮಾಕ್ಕೆ ಸ್ಕ್ರಿಪ್ಟ್‌ ಬರೆದಿದ್ದಾರೆ.

ಇದನ್ನೂ ಓದಿ : ಉಡುಪಿ ಕೃಷ್ಣ ಮಠದ ಕುರಿತು ಮಿಥುನ್‌ ರೈ ವಿವಾದತ್ಮಕ ಹೇಳಿಕೆ : ಟ್ವಿಟರ್‌ನಲ್ಲಿ ಕಿಡಿಕಾರಿದ ನಟ ರಕ್ಷಿತ್‌ ಶೆಟ್ಟಿ

ಇದನ್ನೂ ಓದಿ : ಎರಡೂ ಕಿಡ್ನಿ ವೈಫಲ್ಯಕ್ಕೆ ಒಳಗಾದ ನಿರ್ದೇಶಕ ಶ್ಯಾಮ್ ಬೆನಗಲ್ : ಶೀಘ್ರ ಚೇತರಿಕೆಗಾಗಿ ಸಿನಿರಂಗದ ಹಾರೈಕೆ

ಇದನ್ನೂ ಓದಿ : ಮುದ್ದಿನ ಮಗಳೊಂದಿಗೆ ಕಾಣಿಸಿಕೊಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

‘ರಾಜಾ ವೀರ ಮದಕರಿ ನಾಯಕ’ ಸಿನಿಮಾಕ್ಕೆ ಈವರೆಗೂ ನಾಯಕಿ ಯಾರೆಂಬುದು ಅಧಿಕೃತವಾಗಿಲ್ಲ. ಈ ಮೊದಲು ನಟಿ ರಮ್ಯಾ ಈ ಸಿನಿಮಾಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿತ್ತು. ಅದು ನಿಜವಾಗಲಿಲ್ಲ. ಸ್ವತಃ ರಾಕ್‌ಲೈನ್ ವೆಂಕಟೇಶ್ ಆ ಬಗ್ಗ ಸ್ಟಷ್ಟನೆ ನೀಡಿದ್ದರು. ‘ರಮ್ಯಾ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಬೇಕು ಎಂಬ ಯೋಚನೆಯನ್ನೇ ಮಾಡಿಲ್ಲ. ಸಿನಿಮಾದ ಬೇರೆ ಯಾವ ಪಾತ್ರಗಳಿಗೂ ಅವರನ್ನು ಆಯ್ಕೆ ಮಾಡಬೇಕು ಎಂದು ಯೋಚಿಸಿಲ್ಲ’ ಎಂದು ತಿಳಿಸಿದ್ದರು. ಈ ಮಧ್ಯೆ ಬಹುಭಾಷಾ ನಟಿ ನಯನತಾರಾ ನಟಿಸಲಿದ್ದಾರೆ ಎನ್ನುವ ಗುಸು ಗುಸು ನಡೆಯುತ್ತಿದೆ.

Actor Darshan – Duniya Suri: Director Duniya Suri gave a big update about the movie “Raja Veera Madakari Nayaka” starring actor Darshan.

Comments are closed.