ಹಲವು ವಿಶೇಷತೆಗಳನ್ನೊಳಗೊಂಡಿದೆ ನೀಲಾವರ ಶ್ರೀ ಮಹಿಷಮರ್ದಿನಿಯ ನೂತನ ಬ್ರಹ್ಮರಥ

ಬ್ರಹ್ಮಾವರ: (Nilavara’s new Brahmaratha) ಕರಾವಳಿ ಪ್ರದೇಶವು ಹಲವು ಪುರಾಣ ಪ್ರಸಿದ್ದ ಕ್ಷೇತ್ರಗಳ ಬೀಡು ಅಂತಲೇ ಪ್ರಸಿದ್ದಿ ಹೊಂದಿದ ನಾಡು. ಶ್ರೀ ಕೃಷ್ಣ ನೆಲೆಯಾದ ಉಡುಪಿಯಲ್ಲಿ ಐವರು ನಾಗಕನ್ನಿಕೆಯರು ಕೂಡ ನೆಲೆನಿಂತಿದ್ದು, ಈ ಐದು ಕ್ಷೇತ್ರಗಳು ಅಪರೂಪದ ಹಾಗೂ ಅಪರಿಣಿತ ಕಾರಣೀಕ ಕ್ಷೇತ್ರಗಳೆಂದು ನಂಬಲಾಗಿದೆ. ಈ ಐದು ಕ್ಷೇತ್ರಗಳಲ್ಲಿ ಐವರು ಪಂಚದುರ್ಗಿಯರು ನೆಲೆನಿಂದು, ಮಂದಾರ್ತಿ ದುರ್ಗಾಪರಮೇಶ್ವರಿ, ಚೋರಾಡಿ ದುರ್ಗಾಪರಮೇಶ್ವರಿ, ನಾಗೇರ್ತಿ, ಅರಸಮ್ಮನಕಾನು ಹಾಗೂ ನೀಲಾವರ ಮಹಿಷಮಿರ್ಧಿನಿ ಎಂದೇ ಪ್ರಸಿದ್ದಿಯನ್ನು ಪಡೆದಿವೆ. ಸೀತಾನದಿಯ ತೀರದಲ್ಲಿ ಪ್ರಕೃತಿರಮಣೀಯ ವಾತಾವರಣದಲ್ಲಿ ಅಭಯಹಸ್ತಳಾಗಿ ಶ್ರೀ ಮಹಿಷಮರ್ದಿನಿ ನೆಲೆನಿಂತು ಅಷ್ಠ ಬ್ರಾಹ್ಮಣರ ಕುಲದೇವಿಯಾಗಿ, ನಂಬಿ ಬರುವ ಭಕ್ತಿರಗೆ ಕಾಮಧೇನುವಾಗಿ ರಾಜಾಶ್ರಯ ಹೊಂದಿರುವ ಈ ತಾಯಿಯ ಕ್ಷೇತ್ರ ಬಾರ್ಕೂರಿನ ವಿಜಯನಗರ ಸಂಸ್ಥಾನದ ರಾಜಮಹಾರಾಜರು ನಂಬಿಕೊಂಡು ಬಂದಂತಹ ಪುರಾಣ ಪ್ರಸಿದ್ದ ದೇವಾಲಯವೇ ಮಹತೋಬಾರ ಶ್ರೀ ಮಹಿಷಮರ್ದಿನಿ ಕ್ಷೇತ್ರ ನೀಲಾವರ.

ಸ್ಕಂದ ಪುರಾಣಗಳ ಪ್ರಕಾರ, ಗಾಲವ ಮಹಾಮುನಿಗಳಿಂದ ಪುನರ್‌ ಪ್ರತಿಷ್ಠಾಪನೆಗೊಂಡ ಸಾನಿಧ್ಯ ಇದಾಗಿದ್ದು, ಇತ್ತೀಚಿನ ದಿನಗಳಲ್ಲಿ ಸಮಗ್ರವಾದ ಜೋರ್ಣೋದ್ದಾರವನ್ನು ಕಂಡುಕೊಂಡಿದೆ. ಇದರ ಮಧ್ಯೆ ಸುಮಾರು ಇನ್ನೂರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಹಿಷಮರ್ಧಿನಿ ತಾಯಿಯ ಬ್ರಹ್ಮರಥದ ಚಕ್ರವು ಶಿಥಿಲಾವಸ್ಥೆಗೆ ತಲುಪಿದ್ದು, ಇದನ್ನು ಮನಗಂಡ ದೇವಸ್ಥಾನದ ಆಡಳಿತ ಮಂಡಳಿ ಬ್ರಹ್ಮರಥದ ಪುನರ್‌ ನಿರ್ಮಾಣ ಮಾಡಬೇಕು ಎನ್ನುವ ಸಂಕಲ್ಪ ತೊಟ್ಟಿದ್ದು, ಈ ಸಂಕಲ್ಪಕ್ಕೆ ಪೂರಕವಾಗಿ ನೀಲಾವರದ ಮಕ್ಕಿತೋಟ ಮನೆಯ ಗೌರಿ ವಿಠಲ ಶೆಟ್ಟಿ ಮತ್ತು ಮಕ್ಕಳು, ಕುಟುಂಬಸ್ಥರು ಹಾಗೂ ಮನೆಯವರು ಸೇವಾರ್ಥಿಗಳಾಗಿ ಮುಂದೆ ಬಂದು ನೂತನ ಬ್ರಹ್ಮರಥವನ್ನು ದೇವಳಕ್ಕೆ ಸಮರ್ಪಿಸಲು ಮುಂದಾಗುತ್ತಾರೆ. ಸಂಕಲ್ಪದಂತೆಯೇ ಶ್ರೀ ಕ್ಷೇತ್ರದ ನೂತನ ಬ್ರಹ್ಮರಥವು ಫೆ. 27 ರಂದು ಶ್ರೀ ಕ್ಷೇತ್ರಕ್ಕೆ ಪುರಪ್ರವೇಶವನ್ನು ಮಾಡಿದೆ.

ಬ್ರಹ್ಮರಥವೆನ್ನುವುದು ದೇವಾಲಯದ ವಾಸ್ತುವಿನ್ಯಾಸಕ್ಕನುಗುಣವಾಗಿ, ದೇವಿಯ ಇಚ್ಚಾ ಪ್ರಕಾರವಾಗಿ ಆಗಬೇಕಗಿರುವುದು ಪ್ರಮುಖವಾದದ್ದು, ಯಾವುದೇ ದೇವಾಲಯಗಳಲ್ಲೇ ಆಗಲಿ ದೇವರು ಮಾತ್ರವಲ್ಲ, ದೇವರ ಜೊತೆಗೆ ದೇವಾಲಯಕ್ಕೆ ಹಾಗೂ ದೇವರಿಗೆ ಸಂಬಂಧಿಸಿದ ಆಭರಣಗಳು, ವಸ್ತುಗಳು, ಎಲ್ಲಾ ಪರಿಕರಗಳು ಕೂತ ಮಹತ್ವವಾದದ್ದು. ಈ ವಸ್ತುಗಳಲ್ಲಿ ಸ್ವಲ್ಪ ಭಿನ್ನತೆ ಕಂಡುಬಂದರೂ ಕೂಡ ದೇವಾಲಯದ ಶಿಥಿಯಾವಸ್ಥೆಗೆ ಕಾರಣವಾಗುತ್ತದೆ. ಅದರಲ್ಲಿ ಶ್ರೀ ದೇವರ ಬ್ರಹ್ಮರಥ ಪ್ರಮುಖವಾದದ್ದು. ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಸಕಲ ದೇವಾನು ದೇವತೆಗಳು ಗ್ರಾಮದಲ್ಲಿ ಬಂದು ನೆಲೆಸಿ ಬ್ರಹ್ಮೋತ್ಸವವನ್ನು ಕಣ್ತುಂಬಿಸಿಕೊಳ್ಳುತ್ತಾರೆ ಎನ್ನುವ ಆಧ್ಯಾತ್ಮಿಕ ವಿಚಾರ ಆಗಮದಲ್ಲಿ ಉಲ್ಲೇಖಿಸಿರುವಂತದ್ದು. ಹೀಗಾಗಿ ಗ್ರಾಮದ ಹಾಗೂ ಭಕ್ತರ ಸುಭೀಕ್ಷೆಗಾಗಿ ಬ್ರಹ್ಮ ರಥೋತ್ಸವವನ್ನು ನಡೆಸಲಾಗುತ್ತದೆ.

ಯಾವುದೇ ಒಂದು ದೇವರ/ ದೇವಾಲಯದ ವಸ್ತುಗಳು ಆಭರಣಗಳು ಶಿಥಿಲಾವಸ್ಥೆಯಗೊಂಡಲ್ಲಿ ಮಾತ್ರವೇ ಅದರ ಪುನರ್‌ ನಿರ್ಮಾಣ ಮಾಡಬೇಕು ಎನ್ನುವ ವಿಚಾರ ಆಗಮದಲ್ಲಿ ಸ್ಪಷ್ಟವಾಗಿ ಉಲ್ಲೇಖವಾಗಿದೆ. ಇದೀಗ ಸುಮಾರು ಎರಡು ಶತಮಾನಗಳನ್ನು ಪೂರೈಸಿದ ಶ್ರೀ ನೀಲಾವರ ಮಹಿಷಮರ್ದಿನಿಯ ಹಳೆಯ ಬ್ರಹ್ಮರಥ ಶಿಥಿಲಾವಸ್ಥೆಯಲ್ಲಿದ್ದು, ಅದರ ಪುನರ್ ನಿರ್ಮಾಣವಾಗಿದೆ. ಶ್ರೀ ದೇವಿಯ ಹಳೆಯ ರಥವನ್ನು ದುರುಪಯೋಗಪಡಿಸಿಕೊಳ್ಳದೇ ಹಾಗೆಯೆ ಸಂರಕ್ಷಿಸಿಡುವ ವ್ಯವಸ್ಥೆಯು ಕೂಡ ದೇವಸ್ಥಾನದ ಮಂಡಳಿಯಿಂದ ನಡೆಯಲಿದೆ.

ಇದನ್ನೂ ಓದಿ : ಮಾ.13 ರಂದು ನಡೆಯಲಿದೆ ನೀಲಾವರ ಶ್ರೀ ಮಹಿಷಮರ್ಧಿನಿ ನೂತನ ಬ್ರಹ್ಮರಥದ ಜಾತ್ರಾಮಹೋತ್ಸವ

ಈ ನೂತನ ಬ್ರಹ್ಮರಥದ ನಿರ್ಮಾಣ ಕಾರ್ಯವನ್ನು ರಥಶಿಲ್ಪಿಗಳಾದ ಶಿಲ್ಪ ಸಹೋದರರು ಗೋಪಾಡಿ ಶಿಲ್ಪಿ ಪ್ರಭಾಕರ ಆಚಾರ್ಯ ಹಾಗೂ ಶಿಲ್ಪಿ ಕೃಷ್ಣಯ್ಯ ಆಚಾರ್ಯ ಇವರು ನಡೆಸಿದ್ದಾರೆ. ಸರಿಸುಮಾರು ಮೂರು ತಲೆಮಾರುಗಳಿಂದ ರಥಶಿಲ್ಪಿ ಕಾರ್ಯವನ್ನು ನಡೆಸಿಕೊಂಡು ಬಂದಿರುವ ಹೆಮ್ಮೆ ಇವರದ್ದು, ದಕ್ಷಿಣ ಕನ್ನಡದಲ್ಲಿಯೇ ಪ್ರಪ್ರಥಮವಾಗಿ 1988 ರಲ್ಲಿ ಶಿಲ್ಪಿ ಸಹೋದರರ ಗುರುಗಳು ಹಾಗೂ ತಂದೆಯವರಾದ ಗೋಪಾಡಿ ಶಿಲ್ಪಿ ಶ್ರೀ ವೆಂಕಟರಮಣ ಆಚಾರ್ಯ ಇವರು ತಮ್ಮ ರಥಶಿಲ್ಪ ನಿರ್ಮಾಣಕ್ಕೆ ಗೌರವಾರ್ಥವಾಗಿ “ರಾಷ್ಟ್ರ ಪ್ರಶಸ್ತಿ” ಯನ್ನು ಕೂಡ ಮುಡಿಗೇರಿಸಿಕೊಂಡವರು. ಇವರ ಸಂಪೂರ್ಣ ಕುಟುಂಬವೇ ಪಾರಂಪರಿಕವಾಗಿ ರಥಶಿಲ್ಪಿ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, ನೀಲಾವರದ ಶ್ರೀ ಬ್ರಹ್ಮರಥದ ನಿರ್ಮಾಣ ಕಾರ್ಯ ಕೂಡ ನೆರವೇರಿಸಿದ್ದಾರೆ.

ನೂತನ ಬ್ರಹ್ಮರಥದ ವಿಶೇಷತೆಗಳು:
ಎರಡು ಶತಮಾನಗಳ ಇತಿಹಾಸ ಹೊಂದಿದ ಬ್ರಹ್ಮರಥದ ಪಡಿಯಚ್ಚು ತೆಗೆದು ಯಾವುದೇ ಯಂತ್ರೋಪಕರಣಗಳ ಬಳಕೆಯಿಲ್ಲದೇ ಶಾಸ್ತ್ರೋಕ್ತವಾಗಿ ಕೈಯಿಂದಲೇ ಕೆತ್ತನೆ ಮಾಡಿ ನಿರ್ಮಿಸಲಾಗಿದೆ. ಹಳೆಯ ರಥದ ಅಳತೆಗೆ ಅನುಗುಣವಾಗಿ ನೂತನ ರಥದ ನಿರ್ಮಾಣವಾಗಿದ್ದು, ಎತ್ತರದಲ್ಲಿ ವೃದ್ದಿಯಾಗಬೇಕೆನ್ನುವ ದೃಷ್ಟಿಕೋನದಿಂದ ನೂತನ ರಥವನ್ನು ಹನ್ನೆರಡು ಅಡಿ ಎತ್ತರವಾಗಿ ನಿರ್ಮಿಸಲಾಗಿದೆ. ಈ ನೂತನ ಬ್ರಹ್ಮರಥದ ಕುಸುರಿ ಕೆತ್ತನೆಗೆ ಹೆಬ್ಬೆಲಸು, ಚಕ್ರ ಹಾಗೂ ಅಚ್ಚಿನ ನಿರ್ಮಾಣಕ್ಕೆ ಬೋಗಿ ಮರವನ್ನು ಬಳಸಿಕೊಳ್ಳಲಾಗಿದೆ.

Nilavara’s new Brahmaratha: Nilavara’s new Brahmaratha contains many special features.

Comments are closed.