Renukaswamy chitradurga Murder Case : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan ) ಬೆನ್ನಲ್ಲೇ ನಟಿ ಪವಿತ್ರ ಗೌಡ (Pavitra Gowda) ಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಹತ್ಯೆಯಾಗಿರುವ ರೇಣುಕಾಸ್ವಾಮಿ ನಟ ದರ್ಶನ್ ಅಭಿಯಾನಿ ಅನ್ನೋ ಮಾಹಿತಿ ಲಭ್ಯವಾಗಿದೆ.

ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್ ಮಾಡಿದ ಕಾರಣಕ್ಕೆ ರೇಣುಕಾಸ್ವಾಮಿ ಹತ್ಯೆ ನಡೆದಿರುವುದು ಪೊಲೀಸರ ತನಿಖೆಯಿಂದ ಹೊರಬಿದ್ದಿದೆ. ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಜೂನ್ ೮ರಂದು ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ನಡೆಸಲಾಗಿದೆ. ಅಲ್ಲದೇ ಜೂನ್ 9 ರಂದು ರೇಣುಕಾಸ್ವಾಮಿ ಅವರ ಮೃತದೇಹ ಪತ್ತೆಯಾಗಿತ್ತು.
ಬೆಂಗಳೂರು ನಗರದ ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟೆಂಟ್ ಸಮೀಪದ ಮೋರಿಯಲ್ಲಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ಮೋರಿಯಲ್ಲಿ ನಾಯಿಗಳು ಶವವನ್ನು ಎಳೆದಾಡುತ್ತಿವೆ. ಕೂಡಲೇ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಆಫೀಸರ್ ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ದರ್ಶನ್ ಜೊತೆ ವಿಜಯಲಕ್ಷ್ಮೀ, ಮಗಳ ಜೊತೆ ಪವಿತ್ರಗೌಡ : ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾಮಿಲಿಯ ವಾರ್
ಅಶ್ಲೀಲ ಮೆಸೆಜ್ ಮಾಡಿದ್ದಕ್ಕೆ ಹತ್ಯೆ, 10 ಮಂದಿ ಅರೆಸ್ಟ್
ರೇಣುಕಾಸ್ವಾಮಿ ದರ್ಶನ್ ತೂಗುದೀಪ ಅಭಿಮಾನಿಯಾಗಿದ್ದು, ಆತ ದರ್ಶನ್ ತೂಗುದೀಪ್ ಹಾಗೂ ವಿಜಯಲಕ್ಷ್ಮೀಯ ನಡುವೆ ಪವಿತ್ರ ಗೌಡ ಎಂಟ್ರಿ ಕೊಡುತ್ತಿರೋದನ್ನು ಸಹಿಸೋದಕ್ಕೆ ಸಾಧ್ಯವಾಗದೇ ಅಶ್ಲೀಲ ಮೆಸೆಜ್ ಹಾಕಿದ್ದಾನೆ ಎನ್ನಲಾಗುತ್ತಿದೆ. ಚಿತ್ರದುರ್ಗದ ಅಪೊಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ್, ವಿನಯ್, ಕಿರಣ್, ಮಧು, ಲಕ್ಷ್ಮಣ್, ಆನಂದ್, ರಾಘವೇಂದ್ರ ಸೇರಿದಂತೆ ಒಟ್ಟು 10 ಮಂದಿ ಯನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಪವಿತ್ರ ಗೌಡಳನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ದರ್ಶನ್‌ನನ್ನು ಮೈಸೂರಿ ಫಾರ್ಮ್ ಹೌಸ್‌ನಲ್ಲಿ ಬಂಧಿಸಲಾಗಿದ್ದು, ಮೈಸೂರಿನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.
ದರ್ಶನ್ ನಿವಾಸದ ಬಳಿ ಬಿಗಿ ಭದ್ರತೆ
ನಟ ದರ್ಶನ್ ತೂಗುದೀಪ ಬಂಧನದ ಬೆನ್ನಲ್ಲೇ ಬೆಂಗಳೂರಿನ ಆರ್‌ಆರ್ ನಗರದ ಮನೆಗೆ ಪೊಲೀಸರು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಸುಮಾರು 20 ಕ್ಕೂ ಅಧಿಕ ಪೊಲೀಸರಿಂದ ಭದ್ರತೆಯನ್ನು ಒದಗಿಸಲಾಗಿದೆ. ಆದರೆ ಸದ್ಯ ಮನೆಯಲ್ಲಿ ಯಾರೂ ಇಲ್ಲಾ ಅನ್ನೋದು ತಿಳಿದು ಬಂದಿದೆ.
ಇದನ್ನೂ ಓದಿ : Arrest : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅರೆಸ್ಟ್
Actor Darshan, who killed his fan Renukaswamy, is in the custody of Pavitra Gowda police