ದರ್ಶನ್‌ ಜೊತೆ ವಿಜಯಲಕ್ಷ್ಮೀ, ಮಗಳ ಜೊತೆ ಪವಿತ್ರಗೌಡ : ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾಮಿಲಿಯ ವಾರ್

 Darshan family war : ಸದಾ ಸುದ್ದಿಯಲ್ಲಿರೋ ಸ್ಯಾಂಡಲ್ ವುಡ್ ನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್‌ಸ್ಟಾರ್ ದರ್ಶನ್ ತೂಗುದೀಪ  (Darshan Thoogudeepa) ವೈಯಕ್ತಿಕ ವಿಚಾರ ಚರ್ಚೆಗೆ ಗ್ರಾಸವಾಗಿತ್ತು

 Darshan family war : ಸದಾ ಸುದ್ದಿಯಲ್ಲಿರೋ ಸ್ಯಾಂಡಲ್ ವುಡ್ ನಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಚಾಲೆಂಜಿಂಗ್‌ಸ್ಟಾರ್ ದರ್ಶನ್ ತೂಗುದೀಪ  (Darshan Thoogudeepa) ವೈಯಕ್ತಿಕ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ನಟಿ ಹಾಗೂ ದರ್ಶನ್ ಗರ್ಲ್ ಪ್ರೆಂಡ್ ಪವಿತ್ರಾ ಹಾಕಿದ ಪೋಸ್ಟ್ ತೀವ್ರ ಸಂಚಲನ ಮೂಡಿಸಿತ್ತು. ಇದಾದ ಮೇಲೆ ಕೆಲಕಾಲ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ (Pavithra Gowda) ಹಾಗೂ ದರ್ಶನ್ ಪತ್ನಿ (Darshan Wife Vijaya Lakshmi) ನಡುವೆ ವಾಕ್ಸಮರವೇ ನಡೆದಿತ್ತು.

Vijayalakshmi with Darshan Thoogudeepa, Pavitra Gowda with daughter Darshan family war on social media
Image Credit to Original Source

ಇದಾದ ಬಳಿಕ ಎಲ್ಲವೂ ತಣ್ಣಗಾಗಿದ್ದರೂ ಇನ್ನು ಎಲ್ಲವೂ ಬೂದಿಮುಚ್ಚಿದ ಕೆಂಡದಂತಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ವಿಜಿ ದರ್ಶನ್ ಹಾಗೂ ಪವಿತ್ರಾ ತಮ್ಮ ಟೂರ್ ಡೇಟ್ ಅಪ್ಡೇಟ್ ಮಾಡ್ತಿದ್ದು, ಪೋಟೋಸ್ ವೈರಲ್ ಆಗಿದೆ. ದರ್ಶನ್ ಬದುಕು ಸದಾ ಒಂದಿಲ್ಲೊಂದು ವಿವಾದಗಳ ಗೂಡು. ಮೊನ್ನೆ ಮೊನ್ನೆ ಸವತಿಯರ ತರ ದರ್ಶನ್ ಪತ್ನಿ ಮತ್ತು ಗೆಳತಿ ಪವಿತ್ರಾ ಕಿತ್ತಾಡಿದ್ದು ಇನ್ನೂ ಹಸಿರಾಗಿದೆ. ಇದರ ಮಧ್ಯೆ ಈಗ ಮತ್ತೊಮ್ಮೆ ನಟಿ ಪವಿತ್ರಾ ಸ್ಪೆಶಲ್ ಟೂರ್ (Pavitra Gowda Speಎಂಬ ಟ್ಯಾಗ್ ಲೈನ್ ಅಡಿಯಲ್ಲಿ ಪೋಟೋಸ್, ವಿಡಿಯೋಸ್ ಶೇರ್ ಮಾಡಿದ್ದಾರೆ.

ಪವಿತ್ರಾ ಶೇರ್ ಮಾಡಿರೋ ವೀಡಿಯೋದಲ್ಲಿ ಅಂತಹ ಸ್ಪೆಶಲ್ ಏನಿದೆ ಅನ್ನೋ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ. ಈ ಭಾರಿ ಪವಿತ್ರಾ ಶೇರ್ ಮಾಡಿರೋ ವಿಡಿಯೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಣಿಸಿಕೊಂಡಿಲ್ಲ. ಬದಲಾಗಿ ನಟಿ ಪವಿತ್ರಾ ತಮ್ಮ ಪ್ರೀತಿಯ ಪುತ್ರಿ ಖುಷಿ ಜೊತೆ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ಟ್ರಿಪ್ ನಲ್ಲಿ ಪವಿತ್ರಾಗೆ ಅವರ ಸ್ನೇಹಿತೆಯರು ಸಾಥ್ ನೀಡಿದ್ದಾರೆ.

ಇದನ್ನೂ ಓದಿ : ಕೈವಾ ಬೆಡಗಿ ಮೇಘಾ ಶೆಟ್ಟಿ ಕಮಾಲ್ ಪೋಸ್: ವೈಟ್ ಡ್ರೆಸ್ ನಲ್ಲಿ ಅನು ಸಿರಿಮನೆ ಮಿಂಚಿಂಗ್

ಪವಿತ್ರಾ ಭೂಲೋಕದ ಸ್ವರ್ಗ ಎನ್ನಿಸಿರೋ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಅಲ್ಲಿ ಬೋಟಿಂಗ್ ಸೇರಿದಂತೆ ಕಾಶ್ಮೀರದ ಎಲ್ಲ ಪ್ರವಾಸಿ ತಾಣಗಳಲ್ಲಿ ಸ್ನೇಹಿತೆಯರ ಜೊತೆ ಎಂಜಾಯ್ ಮಾಡಿದ್ದಾರೆ. ಮಾತ್ರವಲ್ಲ ಅಲ್ಲಿ ಮಂಜಿನಗಡ್ಡೆಗಳ ಜೊತೆ ಆಟವಾಡುತ್ತ ಆ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ತಾಯಿ ಪವಿತ್ರಾ ಜೊತೆ ಪುತ್ರಿ ಖುಷಿಕೂಡ ಇದ್ದು, ಪವಿತ್ರಾರನ್ನು ಮೀರಿಸುವಂತೆ ಮಾಡರ್ನ್ ಬಟ್ಟೆತೊಟ್ಟು ಖುಷಿ ಕೂಡ ಸಂಭ್ರಮಿಸಿದ್ದಾರೆ. ಸ್ಯಾಂಡಲ್ ವುಡ್ ಗೆ ನಟಿಯಾಗಿ ಎಂಟ್ರಿಕೊಟ್ಟ ಪವಿತ್ರಾ ಈಗ ಕೆಲಸ ವರ್ಷಗಳಿಂದ ನಟನೆಯಿಂದ ಅಂತರ ಕಾಯ್ದುಕೊಂಡಿದ್ದು ಆರ್.ಆರ್.ನಗರದಲ್ಲಿ ರೆಡ್ ಕಾರ್ಪೆಟ್‌ಎಂಬ ಬೂಟಿಕ್ ಹಾಗೂ ಡಿಸೈನರ್ ಶಾಪ್ ನಡೆಸಿಕೊಂಡು ಬರ್ತಿದ್ದಾರೆ.

ಇದನ್ನೂ ಓದಿ : ಹಳ್ಳಿಹುಡುಗಿಯಾಗಿ ದಿಲ್ ಪಸಂದ ಬೆಡಗಿ: ಮೇಘಾ ಶೆಟ್ಟಿ ಹೊಸ ಅವತಾರ ಕ್ಕೆ ಮನಸೋತ ಅಭಿಮಾನಿಗಳು

ಸ್ಯಾಂಡಲ್ ವುಡ್ ನಟಿಯರ ಫೆವರಿಟ್ ಕಾಸ್ಟ್ಯೂಮ್ ಸ್ಪಾಟ್ ಎನ್ನಿಸಿಕೊಂಡಿರೋ ಈ ರೆಡ್ ಕಾರ್ಪೆಟ್ ನ ಉಡುಗೆಗಳಿಗೆ ನಟಿ ಮೇಘಾ ಶೆಟ್ಟಿ ಕೂಡ ಮಾಡೆಲ್ ಆಗಿದ್ದಾರೆ. ಅತ್ತ ನಟ ದರ್ಶನ್ ತಮ್ಮ ಮುಂದಿನ ಸಿನಿಮಾ ಶೂಟಿಂಗ್ ಆರಂಭಿಸುವ ಮುನ್ನ ಪುತ್ರ ಹಾಗೂ ಪತ್ನಿ ಜೊತೆ ಸಮಯ ಕಳೆಯುತ್ತಿದ್ದಾರೆ.‌ಮೂಲಗಳ‌ಮಾಹಿತಿಯಂತೆ ನಟ ದರ್ಶನ್ ತಮ್ಮ ಸ್ನೇಹಿತರ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆ ಸಮಯ ಕಳೆಯುತ್ತಿದ್ದಾರಂತೆ.

ಇದನ್ನೂ ಓದಿ : Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು ! ಇಲ್ಲಿದೆ Exclusive ಸ್ಟೋರಿ

ದರ್ಶನ್ ಜೊತೆಗಿನ‌ ವೆಕೇಶನ್ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಂತೆ ಇದಕ್ಕೆ ಪ್ರತಿಯಾಗಿ ಪವಿತ್ರಾ ಕೂಡ ತಮ್ಮ ಪುತ್ರಿಯೊಂದಿಗಿನ ಟ್ರಿಪ್ ಪೋಟೋ ಶೇರ್ ಮಾಡ್ತಿದ್ದಾರೆ. ಒಟ್ಟಿನಲ್ಲಿ ಈ ಸ್ಟಾರ್ ಗಳ ಫ್ಯಾಮಿಲಿ ಡ್ರಾಮಾಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗ್ತಿದ್ದು ಪವಿತ್ರಾ ಪೋಟೋ ಪೋಸ್ಟ್ ಗೆ ಅಭಿಮಾನಿಗಳು ಮೇಡಂ ನೀವು ಚೆನ್ನಾಗಿರಿ, ಅತ್ಗೆ ಅಣ್ಣ ಬಂದಿಲ್ವಾ? ಮೇಡಂ ಬಾಸ್ ಬಂದಿಲ್ವಾ ಎಂದು ಪ್ರಶ್ನೆ ಮಾಡ್ತಿದ್ದಾರೆ.

Vijayalakshmi with Darshan Thoogudeepa, Pavitra Gowda with daughter: Darshan family war on social media

Comments are closed.