Actor Lakshman: ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಲಕ್ಷ್ಮಣ ವಿಧಿವಶ

(Actor Lakshman) ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ಖಳನಟ ಲಕ್ಷ್ಮಣ ಕೆಲ ಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಿಗ್ಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವೇಳೆ ಮಾರ್ಗ ಮಧ್ಯದಲ್ಲೇ ಲಕ್ಷ್ಮಣ ಅವರು ಕೊನೆಯುಸಿರು ಎಳೆದಿದ್ದಾರೆ. ಇಂದು ಬೆಂಗಳೂರಿನ ಮೂಡಲಪಾಳ್ಯದ ನಿವಾಸದಲ್ಲಿ ಅವರ ಅಂತಿಮ ದರ್ಶನ ನಡೆಯಲಿದೆ.

ಸ್ಯಾಂಡಲ್‌ ವುಡ್‌ ನಲ್ಲಿ ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಖಳನಟರಾಗಿ ನಟಿಸಿರುವ ಇವರು ಮಲ್ಲ, ಯಜಮಾನ, ಸೂರ್ಯವಂಶ, ಸೇರಿದಂತೆ ಹಲವು ಸಿನಿಮಾಗಳಲ್ಲಿ ತಮ್ಮ ಅದ್ಬುತ ನಟನೆಯ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಅಲ್ಲದೇ ನಟ ಅಂಬರೀಶ್‌ ಅವರ ನೆಚ್ಚಿನ ನಟ ಎಂಬ ಹೆಗ್ಗಳಿಕೆಗೂ ಲಕ್ಷ್ಮಣ ಅವರು ಖ್ಯಾತರಾಗಿದ್ದಾರೆ.

ಕನ್ನಡ ಚಿತ್ರರಂಗದ ಅತ್ಯುನ್ನತ ಕಲಾವಿದರಾದ ಡಾ. ರಾಜ್ ಕುಮಾರ್‌, ಡಾ. ಅಂಬರೀಶ್‌, ಡಾ. ವಿಷ್ಣುವರ್ಧನ್‌, ರವಿಚಂದ್ರನ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಅನೇಕ ದಿಗ್ಗಜರೊಂದಿಗೆ ಇವರು ಕೆಲಸ ಮಾಡಿದ್ದು, ಅಭಿಮಾನಿಗಳ ಹಾಗೂ ನಟ ದಿಗ್ಗಜರ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ನಟರಾಗಿ ಸೇವೆ ಸಲ್ಲಿಸಿ ನಂತರದಲ್ಲಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಸಿನಿಮಾ ರಂಗಕ್ಕೆ ಬರುವ ಮೊದಲು ಇವರಿಗೆ ಖಾಕಿ ಮೇಲೆಯೇ ಸೆಳೆತವಿದ್ದು, ತಾಯಿ ಒಪ್ಪದ ಕಾರಣ ಬಣ್ಣದ ಪ್ರಪಂಚಕ್ಕೆ ಲಕ್ಷ್ಮಣ ಅವರು ಕಾಲಿಟ್ಟರು. ಕನ್ನಡ ಚಿತ್ರರಂಗದಲ್ಲಿ ಅನೇಕ ಅವಕಾಶಗಳನ್ನು ಪಡೆದರು.

ಇದೀಗ ಅವರ ಸಾವು ಕನ್ನಡ ಚಿತ್ರರಂಗಕ್ಕೆ ನಷ್ಟವನ್ನುಂಟು ಮಾಡಿದೆ. ಖಳನಟನಾಗಿ ಜನರ ಮನಸ್ಸನ್ನು ಗೆದ್ದಿದ್ದ ಲಕ್ಷ್ಮಣ್‌ ಅವರು ಇಂದು ಇಡೀ ಚಿತ್ರರಂಗವನ್ನೇ ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಅವರ ಸಾವಿನ ಸಿದ್ದು ಕೇಳಿ ಚಿತ್ರರಂಗ ಕಣ್ಣೀರಿಡುತ್ತಿದೆ. ನಟರು ಅವರ ಸಾವಿಗೆ ಸಂತಾಪವನ್ನು ಸೂಚಿಸುತ್ತಿದ್ದಾರೆ.

ಇದನ್ನೂ ಓದಿ : ಹಿಂದಿ ಬಾಕ್ಸ್‌ ಆಫೀಸ್‌ನಲ್ಲಿ 100 ದಿನ ಪೂರೈಸಿದ “ಕಾಂತಾರ” ಸಿನಿಮಾ

ಇದನ್ನೂ ಓದಿ : ಜಾಗ್ವಾರ್‌ ನಟನಿಗೆ ಹುಟ್ಟುಹಬ್ಬದ ಸಂಭ್ರಮ : ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಬಿಚ್ಚಿಟ್ಟ ನಿಖಿಲ್

ಇದನ್ನೂ ಓದಿ : ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ವಿವಾಹ : ಅತಿಥಿಗಳಿಗೆ ಮೊಬೈಲ್‌ ಬಳಕೆ ನಿಷೇಧ ?

Actor Lakshman: Renowned villain of Kannada cinema Lakshman Vidivasha

Comments are closed.