ನಕಲಿ ಮದ್ಯ ಸೇವನೆ : 3 ಸಾವು, 6 ಮಂದಿ ಆಸ್ಪತ್ರೆಗೆ ದಾಖಲು

ಬಿಹಾರ : (spurious liquor dead)ನಕಲಿ ಮದ್ಯ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ಬಿಹಾರದ ಸಿವಾನ್ ಜಿಲ್ಲೆಯ ಬಾಲಾ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಆರು ಮಂದಿ ಅಸ್ವಸ್ಥಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.

ಬಾಲಾ ಗ್ರಾಮದಲ್ಲಿ ಮೂರು ಜನರು ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಆರು ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ, ಗಾಯಾಳುಗಳನ್ನು ಸಿವಾನ್‌ನ ಸದರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಮಿತ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ಡಿಸೆಂಬರ್ 2022 ರಲ್ಲಿ, ಬಿಹಾರದ ಛಾಪ್ರಾ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸೇವಿಸಿ 70 ಜನರು ಸಾವನ್ನಪ್ಪಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಮದ್ಯ ಕಳ್ಳಸಾಗಣೆದಾರನನ್ನು ಬಂಧಿಸಿದ್ದು, 2.17 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಇನ್ನು ಛಾಪ್ರಾದಲ್ಲಿ ನಡೆದ ಹೂಚ್ ದುರಂತವು ದೇಶದ ಗಮನ ಸೆಳೆದಿದೆ. ಘಟನೆಯ ನಂತರ, ಸರನ್ ಪೊಲೀಸರು ಅಕ್ರಮ ಮದ್ಯ ವ್ಯಾಪಾರ, ಸಾಗಣೆ, ಕಳ್ಳಸಾಗಣೆ ಮತ್ತು ಮದ್ಯ ತಯಾರಿಕೆಯಲ್ಲಿ ತೊಡಗಿರುವ ಶಂಕಿತರ ಬಂಧನಕ್ಕೆ ಬಲೆ ಬೀಸಲಾಗಿದೆ.

ಇದನ್ನೂ ಓದಿ : Shraddha Walker murder case: 3,000 ಪುಟಗಳ ಚಾರ್ಜ್‌ಶೀಟ್‌ ಸಿದ್ದಪಡಿಸಿದ ದೆಹಲಿ ಪೊಲೀಸರು

ಇದನ್ನೂ ಓದಿ : ಸೈಕಲ್‌ನಿಂದ ಬಿದ್ದ ವೃದ್ದ ಶಿಕ್ಷಕ: ಅಮಾನುಷವಾಗಿ ಥಳಿಸಿದ ಲೇಡಿ ಪೊಲೀಸರು

ಪತ್ನಿಯ ಪ್ರಿಯಕರನ ಕೊಲೆ: ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಕಾಲೋನಿಯಲ್ಲಿ ಎಸೆದ ಪತಿ

ನವದೆಹಲಿ : 40 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರಿಯಕರನನ್ನೇ ಕೊಂದು ಶವವನ್ನು 15 ತುಂಡುಗಳಾಗಿ ಕತ್ತರಿಸಿ ದೇಹದ ತುಂಡುಗಳನ್ನು ಖೋಡಾ ಕಾಲೋನಿಯ ವಿವಿಧ ಪ್ರದೇಶಗಳಲ್ಲಿ ಎಸೆದಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ರಾಜಸ್ಥಾನದ ಕೊಟ್‌ಪುಟ್ಲಿ ಮೂಲದ ಅಕ್ಷಯ್ ಕುಮಾರ್ ಎಂಬಾತ ಕೊಲೆಯಾದ ವ್ಯಕ್ತಿ.

ಆರೋಪಿಯನ್ನು ರಿಕ್ಷಾ ಚಾಲಕ ಮಿಲಾಲ್ ಪ್ರಜಾಪತಿ ಎಂದು ಗುರುತಿಸಲಾಗಿದ್ದು, ಅಕ್ಷಯ್‌ ಕುಮಾರ್‌ ಗೆ ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಕೊಲೆಗೈದಿದ್ದಾನೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ವರದಿ ಮಾಡಿದೆ. ಅಕ್ಷಯ್‌ ಕುಮಾರ್‌ ಜೊತೆಗೆ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆರೋಪಿ ಪ್ರಜಾಪತಿ ತನ್ನ ಹೆಂಡತಿಯ ಬಳಿ ಅಕ್ಷಯ್‌ ಕುಮಾರ್‌ ನನ್ನು ಮನೆಗೆ ಕರೆಯುವಂತೆ ತಿಳಿಸಿದ್ದಾನೆ. ಆಹ್ವಾನಕ್ಕೆ ಓಗೊಟ್ಟು ಕುಮಾರ್‌ ಅವರ ಮನೆಗೆ ಬಂದಿದ್ದಾನೆ. ನಂತರ ಆರೋಪಿಯ ಮಗಳಿಗೆ ಸುಟ್ಟ ಗಾಯಗಳಾಗಿದ್ದು ಪತ್ನಿಯೊಂದಿಗೆ ಮಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾನೆ.

ಇದಾದ ಬಳಿಕ ಆರೋಪಿ ಪ್ರಜಾಪತಿ ಕುಮಾರ್‌ಗೆ ಕೆಲವು ಪಾನೀಯಗಳನ್ನು ನೀಡಿದ್ದು, ತಡರಾತ್ರಿಯಲ್ಲಿ ಕುಮಾರ್‌ ನನ್ನು ಕೊಂದು ಕೊಡಲಿಯಿಂದ ದೇಹವನ್ನು ಹದಿನೈದು ಭಾಗಗಳಾಗಿ ಕತ್ತರಿಸಿದ್ದಾನೆ. ಮರುದಿನ ಮುಂಜಾನೆ 1 ಗಂಟೆಗೆ ಪ್ರಜಾಪತಿ ತನ್ನ ರಿಕ್ಷಾದಲ್ಲಿ ಮೂರು ಚೀಲಗಳಲ್ಲಿ ಕತ್ತರಿಸಿದ ದೇಹದ ತುಂಡುಗಳನ್ನು ತುಂಬಿಕೊಂಡು ಖೋಡಾ ಕಾಲೋನಿಯಲ್ಲಿ ಎಸೆದಿದ್ದಾನೆ. ನಂತರ ಆರೋಪಿಯ ಮನೆಯ ಮಾಲೀಕನಿಗೆ ವಿಷಯ ಗೊತ್ತಾಗಿದ್ದು, ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.

ಕೊಲೆ ನಡೆದಾಗ ಪ್ರಜಾಪತಿ ಅವರ ಪತ್ನಿ ತಮ್ಮ ಮಗಳೊಂದಿಗೆ ಆಸ್ಪತ್ರೆಯಲ್ಲಿದ್ದರು. ಆಕೆ ಅಪರಾಧದಲ್ಲಿ ಭಾಗಿಯಾಗಿದ್ದಾಳೆ ಎಂಬುದಕ್ಕೆ ಇದುವರೆಗೆ ಯಾವುದೇ ಪುರಾವೆಗಳಿಲ್ಲ. ಇದೀಗ ಪ್ರಜಾಪತಿ ಮನೆ ಮಾಲೀಕ ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ. ಇದೀಗ ಪ್ರಕರಣದ ಕುರಿತು ಮೃತ ಕುಮಾರ್‌ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಇಂದಿರಾಪುರಂ) ಸ್ವತಂತ್ರ ಕುಮಾರ್ ಸಿಂಗ್ ವರದಿಯಲ್ಲಿ ತಿಳಿಸಿದ್ದಾರೆ.

3 dead 6 hospitalised after consuming spurious liquor in Bihar

Comments are closed.