“ಅಜ್ಞಾತವಾಸಿ” ಸಿನಿಮಾ ಟೀಸರ್‌ಗೆ ಮೆಚ್ಚಗೆ ವ್ಯಕ್ತಪಡಿಸಿದ ನಟ ರಕ್ಷಿತ್‌ ಶೆಟ್ಟಿ

ಸ್ಯಾಂಡಲ್‌ವುಡ್‌ನಲ್ಲಿ “ಗೋಧಿಬಣ್ಣ ಸಾಧಾರಣ ಮೈಕಟ್ಟು” ಖ್ಯಾತಿಯ ನಿರ್ದೇಶಕ ಹೇಮಂತ್‌ ರಾವ್‌ ಮತ್ತು ಗುಲ್ಟು ಸಿನಿಮಾ ಖ್ಯಾತಿಯ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ ಕಾಂಬಿನೇಷನ್‌ನಲ್ಲಿ, ಹಾಸ್ಯ ಕಲಾವಿದ ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿರುವ “ಅಜ್ಞಾತವಾಸಿ” ಸಿನಿಮಾದ (Agnyathavasi movie) ಬಹು ನಿರೀಕ್ಷಿತ ಟೀಸರ್‌ ಇಂದು (ಏಪ್ರಿಲ್‌ 7)ರಂದು ಬಿಡುಗಡೆಯಾಗಿದೆ. ಟೀಸರ್‌ ನೋಡಿದ ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಅಷ್ಟೇ ಅಲ್ಲದೇ ನಟ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಈ ಸಿನಿಮಾ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಟ ರಕ್ಷಿತ್‌ ಶೆಟ್ಟಿ ತಮ್ಮ ಟ್ವಿಟರ್‌ ಖಾತೆಯಲ್ಲಿ, “ಪ್ರತಿ ಚೌಕಟ್ಟಿನಲ್ಲೂ ಕುತೂಹಲ ಬಿಚ್ಚಿಕೊಳ್ಳುತ್ತದೆ! ಅಜ್ಞಾತವಾಸಿ ಸಿನಿಮಂದಿರಗಳಲ್ಲಿ ಮಿಡಿಯುವ ಅನುಭವ ನೀಡುವುದು ಖಚಿತ! ಸಿನಿಮಾಕ್ಕೆ ಅಭಿನಂದನೆಗಳು ಮತ್ತು ನನ್ನ ಶುಭಾಶಯಗಳು ಹೇಮಂತರಾವ್ 11 ಮತ್ತು ತಂಡ” ಎಂದು ಪೋಸ್ಟ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಇನ್ನು ಸಿನಿಮಾದಲ್ಲಿ ನಟಿ ಪಾವನ ಗೌಡ ಹಾಗೂ ಪಾರು ಸಿರಿಯಲ್‌ ಖ್ಯಾತಿಯ ಸಿದ್ದು ಮೂಲಿಮನಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ರಂಗಾಯಣ ರಘು ಪೊಲೀಸಗ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ, ಸಿದ್ದು ಮೂಲಿಮನಿ ಹಾಗೂ ಪಾವನ ಗೌಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Agnyathavasi movie : ನಟ ರಕ್ಷಿತ್‌ ಶೆಟ್ಟಿ

ನಟ ರಕ್ಷಿತ್‌ ಶೆಟ್ಟಿ “ಅಜ್ಞಾತವಾಸಿ” ಸಿನಿತಂಡಕ್ಕೆ ಮೆಚ್ಚುಗೆ ಸೂಚಿಸಿದ ಟ್ವೀಟ್‌ನ್ನು ಕಂಡ ಅಭಿಮಾನಿಗಳು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಯಾವಾಗ ತೆರೆ ಕಾಣಲಿದೆ ಎಂದು ಕೇಳಿದ್ದಾರೆ. ಇತ್ತೀಚೆಗಷ್ಟೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತಂಡ ಚಿತ್ರೀಕರಣ ಮುಗಿದಿದೆ ಎಂದು ಸಿನಿತಂಡ ಹೇಳಿಕೊಂಡಿದೆ. ನಟ ರಕ್ಷಿತ ಶೆಟ್ಟಿ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಹೇಮಂತ್ ರಾವ್ ನಿರ್ದೇಶನವಿದೆ.

ಇದನ್ನೂ ಓದಿ : ಆಕಾಂಕ್ಷಾ ದುಬೆ ಸಾವಿನ ಪ್ರಕರಣ : ಪ್ರಮುಖ ಆರೋಪಿ ಭೋಜ್‌ಪುರಿ ಗಾಯಕ ಸಮರ್ ಸಿಂಗ್ ಬಂಧನ

ಇದನ್ನೂ ಓದಿ : Ram charan-Upasana : ದುಬೈನಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಅದ್ಧೂರಿ ಬೇಬಿ ಶವರ್

ಇದನ್ನೂ ಓದಿ : ಅಭಿಷೇಕ್‌ ಅಂಬರೀಶ್‌ – ಅವಿವಾ ಬಿದ್ದಪ್ಪ ವಿವಾಹ : ಮೊದಲ ಆಮಂತ್ರಣ ಪತ್ರಿಕೆ ಕೊಟ್ಟು ಪ್ರಧಾನಿ ಮೋದಿಯನ್ನು ಮದುವೆಗೆ ಆಹ್ವಾನಿಸಿದ ಸಂಸದೆ ಸುಮಲತಾ

ಬೀರಬಲ್ ಸಿನಿಮಾದ ಖ್ಯಾತಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ 36 ಸೆಕೆಂಡ್ ಇರುವ ಟೀಸರ್‌ನ್ನು ಪ್ರೇಮಿಗಳ ದಿನದಂದು​ ಬಿಡುಗಡೆ ಮಾಡಲಾಗಿದೆ. ಟೀಸರ್​ನಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಾತ್ರ ಕಾಣಿಸಿಕೊಂಡಿದ್ದಾರೆ. ಮನು-ಸುರಭಿ ಪ್ರೇಮ ಕಥೆಯ ಝಲಕ್​ ಅನ್ನು ಟೀಸರ್​ ನಲ್ಲಿ ಕಾಣಬಹುದಾಗಿದೆ. ಈಗಾಗಲೇ ಟೀಸರ್‌ ನೋಡಿದ ಪ್ರೇಕ್ಷಕರಿಗೆ ರಕ್ಷಿತ್ ಸಿನಿಮಾ ಮೇಲೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ.

Actor Rakshit Shetty expressed appreciation for “Agnyathavasi” movie teaser.

Comments are closed.