Vikram Admitted To Hospital : ತಮಿಳು ನಟ ವಿಕ್ರಮ್ ಗೆ​ ಹೃದಯಾಘಾತ: ಆಸ್ಪತ್ರೆಗೆ ದಾಖಲು

ಚೆನ್ನೈ : Vikram Admitted To Hospital : ತಮಿಳು ಚಿತ್ರರಂಗದ ಹೆಸರಾಂತ ನಟ ಹಾಗೂ ಗಾಯಕ ವಿಕ್ರಮ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರನ್ನು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟ ವಿಕ್ರಮ್​ಗೆ 56 ವರ್ಷ ವಯಸ್ಸಾಗಿದೆ. ಮೂಲಗಳ ಪ್ರಕಾರ ನಟ ವಿಕ್ರಮ್​ಗೆ ಹೃದಯ ಸಂಬಂಧಿ ತೊಂದರೆಗಳು ಉಂಟಾಗಿದ್ದು ಈ ಕಾರಣಕ್ಕಾಗಿಯೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಸಂಜೆ ಆರು ಗಂಟೆಗೆ ನಟ ವಿಕ್ರಮ್​ ತಮ್ಮ ಮುಂಬರುವ ಸಿನಿಮಾ ಪೊನ್ನಿಯಿನ್​ ಸೆಲ್ವನ್​​ನ ಟ್ರೇಲರ್​ ಲಾಂಚ್​ ಕಾರ್ಯಕ್ರಮದಲ್ಲಿ ಭಾಗಿಯಾಗುವವರಿದ್ದರು.

ವಿಕ್ರಮ್ ಅವರನ್ನು ಚಿಯಾನ್ ವಿಕ್ರಮ್ ಎಂದೂ ಕರೆಯಲಾಗುತ್ತದೆ ಮತ್ತು ಅವರ ನಿಜವಾದ ಹೆಸರು ಕೆನಡಿ ಜಾನ್ ವಿಕ್ಟರ್ (ಕೆನ್ನಿ). ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ರಾಷ್ಟ್ರೀಯ ಪ್ರಶಸ್ತಿ, ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು 2004 ರಲ್ಲಿ ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

ನಟ ವಿಕ್ರಮ್​ 1990ರಲ್ಲಿ ತಮ್ಮ ನಟನಾ ವೃತ್ತಿ ಜೀವನವನ್ನು ಆರಂಭಿಸಿದರು. ಆದರೆ ಇವರ ನಟನಾ ಜೀವನಕ್ಕೆ ಬ್ರೇಕ್​ ನೀಡಿದ ಸಿನಿಮಾ ಅಂದರೆ ಅದು 1999ರಲ್ಲಿ ತೆರೆ ಕಂಡ ಸೇತು ಸಿನಿಮಾ . ಈ ಸಿನಿಮಾಗಾಗಿ ವಿಕ್ರಮ್​ 20 ಕೆಜಿ ತೂಕ ಇಳಿಸಿದ್ದರು. ತಲೆ ಬೋಳಿಸಿಕೊಂಡಿದ್ದರು. ಸೇತು ಸಿನಿಮಾದ ಬಳಿಕ ವಿಕ್ರಮ್​ಜೆಮಿನಿ, ಸಮುರಾಯ್, ಧೂಲ್, ಕಾದಲ್ ಸಡುಗುಡು, ಸಾಮಿ, ಪಿತಾಮಗನ್, ಅರುಲ್, ಅಣ್ಣಿಯನ್, ಭೀಮಾ, ರಾವಣನ್, ದೈವ ತಿರುಮಗಲ್, ಡೇವಿಡ್, ಇರು ಮುಗನ್ ಮತ್ತು ಮಹಾನ್ ಸೇರಿದಂತೆ ಹಲವಾರು ಹಿಟ್ ಚಲನಚಿತ್ರಗಳನ್ನು ನೀಡಿದರು.

ಇದನ್ನು ಓದಿ : Japan’s former Prime Minister Shinzo Abe : ಜಪಾನ್​ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ : ಅಧಿಕೃತ ಘೋಷಣೆ

ಇದನ್ನೂ ಓದಿ : Boris Johnson resigns : ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಬೋರಿಸ್​ ಜಾನ್ಸನ್​​ ರಾಜೀನಾಮೆ

ಇದನ್ನೂ ಓದಿ : Gargi Movie Trailer: ಸಾಯಿ ಪಲ್ಲವಿ ನಟನೆಯ ಗಾರ್ಗಿ ಟ್ರೈಲರ್ ರಿಲೀಸ್; ನಟನೆಗೆ ಫಿದಾ ಆದ ಅಭಿಮಾನಿಗಳು

ಇದನ್ನೂ ಓದಿ : Saalumarada Thimmakka : ಸಾಲುಮರದ ತಿಮ್ಮಕ್ಕನಿಗೆ ಸಂಪುಟದ ದರ್ಜೆ ಸ್ಥಾನಮಾನ : ಆದೇಶ ಹೊರಡಿಸಿದ ಸರ್ಕಾರ

Actor Vikram Admitted To Hospital Over Health Issue

Comments are closed.